ಗುಜರಾತ್‌ ಮಾಜಿ ಮುಖ್ಯಮಂತ್ರಿ ಕೇಶುಭಾಯ್ ಪಟೇಲ್ ನಿಧನ!

ಗುಜರಾತ್ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಕೇಶುಭಾಯ್ ಪಟೇಲ್ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರಾಗಿದ್ದ, ಕೇಶುಭಾಯ್ ಪಟೇಲ್ ಎರಡು ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.

ಮೊದಲ ಅವಧಿಯಲ್ಲಿ ಮಾರ್ಚ್ 1995 ರಿಂದ 1995 ರ ಅಕ್ಟೋಬರ್ ವರೆಗೆ 08 ತಿಂಗಳ ಕಾಲ ಸಿಎಂ ಆಗಿದ್ದರು.  ನಂತರ ಮಾರ್ಚ್ 1998 ರಿಂದ ಅಕ್ಟೋಬರ್ 2001 ರವರೆಗೆ ಎರಡನೇ ಅವಧಿಗೆ ಗುಜರಾತ್ ಮುಖ್ಯಮಂತ್ರಿಯಾಗಿದ್ದರು.

2001 ರ ಗುಜರಾತ್‌ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷಿಸಿದಷ್ಟು ಸ್ಥಾನ ಗಳಿಸದ ಕಾರಣ ಕೇಶುಭಾಯ್ ಪಟೇಲ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಕಳೆದ ಸೆಪ್ಟೆಂಬರ್ 30 ರಂದು ಸೋಮನಾಥ ಮಂದಿರ ಟ್ರಸ್ಟ್‌ ಅಧ್ಯಕ್ಷರಾಗಿ ಎರಡನೇ ಬಾರಿಗೆ ಚುನಾಯಿತರಾಗಿದ್ದರು.

ಜುಲೈ 24, 1930 ರಂದು ಜನಿಸಿದ್ದ ಕೇಶುಭಾಯ್ ಪಟೇಲ್ ಅವರಿಗೆ 91 ವರ್ಷ ವಯಸ್ಸಾಗಿತ್ತು.


ಇದನ್ನೂ ಓದಿ: ಕೈ ಅಭ್ಯರ್ಥಿ ಮುದಿ ಎತ್ತು ಎಂದ ಬಿಜೆಪಿ: ಬಿಎಸ್‌ವೈ, ಮೋದಿ 2 ಹಲ್ಲಿನ ಎತ್ತುಗಳೇ ಎಂದ ಕಾಂಗ್ರೆಸ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights