ವಾರಂಗಲ್ ಪ್ರಕರಣ: ಒಂದು ಕೊಲೆ ಮುಚ್ಚಿಹಾಕಲು ಮತ್ತಷ್ಟು ಜನರ ಬಲಿ ಪಡೆದ ಪಾಪಿ!
ಮೇ 21, 22 ರಂದು ತೆಲಂಗಾಣದ ವಾರಂಗಲ್ ಜಿಲ್ಲೆಯ ಗೊರ್ರೆಕುಂಟಾ ಗ್ರಾಮದ ಬಾವಿಯಲ್ಲಿ ಸಿಕ್ಕ 9 ಶವಗಳ ಪ್ರಕರಣ ಈಗ ಟ್ವಿಸ್ಟ್ ಪಡೆದುಕೊಂಡಿದೆ.
ಕಳೆದ ಗುರುವಾರವಷ್ಟೇ ವಾರಂಗಲ್ ಬಾವಿಯಲ್ಲಿ 9 ಮೃತದೇಹಗಳು ಪತ್ತೆಯಾಗಿದ್ದವು. ಸಾಮೂಹಿಕ ಆತ್ಮಹತ್ಯೆ ಎಂದು ಊಹಿಸಲಾಗಿದ್ದ ಈ ಪ್ರಕರಣ ಭಾರೀ ಟ್ವಿಸ್ಟ್ ಪಡೆದುಕೊಂಡಿದೆ. ಪೊಲೀಸ್ ತನಿಖೆಯಲ್ಲಿ ಅಘಾತಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ. ಪ್ರೆಯಸಿಯ ಕೊಲೆಯನ್ನು ಮುಚ್ಚಿಹಾಕಲು ಪಾಪಿಯೊಬ್ಬ ಬರೋಬ್ಬರಿ 9 ಜನರನ್ನು ಕೊಲೆ ಮಾಡಿದ್ದಾನೆ. ಪ್ರೇಯಸಿ ಕೊಲೆಯನ್ನು ಮರೆ ಮಾಚಲು ಆಕೆಯ ಕುಟುಂಬದವರನ್ನು ಸೇರಿ ಮೂವರು ಸಹೋದ್ಯೋಗಿಗಳನ್ನು ಅಮಾನುಷವಾಗಿ ಕೊಲೆ ಮಾಡಿದ ವ್ಯಕ್ತಿ ಸದ್ಯ ಪೊಲೀಸರ ಅಥಿತಿಯಾಗಿದ್ದಾನೆ.
ಗೊರ್ರೆಕುಂಟಾನಲ್ಲಿರುವ ಕಾರ್ಖಾನೆಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಬಿಹಾರ್ ಮೂಲದ ಸಂಜಯ್ ಕುಮಾರ್ ಯಾದವ್ (30) ಕೊಲೆ ಮಾಡಿದ ವ್ಯಕ್ತಿ. ಮೂರು ಮಕ್ಕಳ ತಾಯಿ ರಫಿಕಾಳೊಂದಿಗೆ ಸಂಬಂಧ ಹೋದಿದ್ದ. ರಫಿಕಾ ಅವರು ಯಾದವ್ ಮನೆಗೆ ಹೋಗಿ ನೆಲೆಸಿದ್ದರು.
ಇತ್ತೀಚೆಗೆ ರಫಿಕಾ ಹಾಗೂ ಮಕ್ಕಳ ಜೊತೆಗೆ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದ ಯಾದವ್ ನಿಗೆ ರಫಿಕಾ ಕೋಪದಿಂದ ಎಚ್ಚರಿಕೆ ನೀಡಿದ್ದಳು. ಇದೇ ಸಂದರ್ಭದಲ್ಲಿ ರಫಿಕಾಳನ್ನು ಕೊಲೆ ಮಾಡಲು ನಿರ್ಧರಿಸಿದ ಯಾದವ್ ರಫಿಕಾಳನ್ನು ಮದುವೆಯಾಗುವುದಾಗಿ ನಂಬಿಸಿ ಈ ಬಗ್ಗೆ ಮನೆಯಲ್ಲಿ ಮಾತನಾಡಲು ಹೇಳಿದ್ದನು.
ಮಾರ್ಚ್ 7 ರಂದು ಯಾದವ್ ಮತ್ತು ರಫಿಕಾ ಪಶ್ಚಿಮ ಬಂಗಾಳಕ್ಕೆ ಗರಿಬ್ ರಾಥ್ ರೈಲಿನಲ್ಲಿ ತೆರಳಿದ್ದರು. ಇದೇ ರೈಲಿನಲ್ಲಿ ನಿದ್ದೆ ಮಾತ್ರೆ ನೀಡಿ ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿ ರೈಲಿನಿಂದ ಎಸೆದಿದ್ದಾನೆ. ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಆಕೆ ಶವ ಸಿಕ್ಕರು ಗುರುತು ಪತ್ತೆಯಾಗಿರಲಿಲ್ಲ ಎಂದು ವಾರಂಗಲ್ ಪೊಲೀಸ್ ಆಯುಕ್ತ ಡಾ.ವಿ.ರವಿಂದ್ರ ಹೇಳಿದ್ದಾರೆ.
ವಾಪಸ್ಸು ಬಂದ ಯಾದವ್ ಆಕೆಯ ಮಕ್ಕಳಿಗೆ ರಫಿಕಾ ಪಶ್ಚಿಮ ಬಂಗಾಳದಲ್ಲೇ ಇದ್ದಾಳೆಂದು ಸುಳ್ಳು ಹೇಳಿದ್ದಾನೆ. ಸಂಬಂಧಿಕರಾದ ಮಕ್ಸೂದ್ ಮತ್ತು ಪತ್ನಿ ನಿಶಾ ಅವರು ರಫಿಕಾ ಬಗ್ಗೆ ವಿಚಾರಿಸಿದಾಗಲೂ ಸಿರಿಯಾಗಿ ಉತ್ತರ ಕೊಡದ ಯಾದವ್ ನಿಗೆ ನಿಶಾ ಪೊಲೀಸ್ ದೂರು ಕೊಡುವುದಾಗಿ ಹೆದರಿಸಿದ್ದಾಳೆ. ಈ ವೇಳೆ ಯಾದವ್ ಕೊಲೆ ಮಾಡುವ ಹೊಂಚು ಹಾಕಿದ್ದಾನೆ.
ಮಕ್ಸೂರ್ ಮಗನ ಹುಟ್ಟುಹಬ್ಬದಂದು ಯಾದವ್ ಎಲ್ಲರಿಗೂ ನಿದ್ರೆ ಮಾತ್ರೆ ಹಾಕಿ ಎಲ್ಲರೂ ಮಲಗಿದಾಗ ಈ ಕೃತ್ಯ ಎಸಗಿದ್ದಾನೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು ನಿದ್ರೆ ಮಾತ್ರ ಜಾಲ ಹಿಡಿದಿದ್ದಾರೆ.

