ತಮಿಳುನಾಡು: ಅಣ್ಣಾಮಲೈ – ನಟಿ ಖುಷ್ಬೂಗೆ BJP ಟಿಕೆಟ್; ಕೇಸರಿ ಪಡೆ ಅಭ್ಯರ್ಥಿಗಳ ಪಟ್ಟಿ!
ತಮಿಳುನಾಡಿನ ವಿಧಾನಸಭಾ ಚುನಾವಣೆಗೆ ಬಿಜೆಪಿ 17 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನುಭಾನುವಾರ ಬಿಡುಗಡೆ ಮಾಡಿದೆ. ಈ ಪೈಕಿ ಇತ್ತೀಚೆಗೆ ಬಿಜೆಪಿ ಸೇರಿದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಮತ್ತು ನಟಿ ಖುಷ್ಬೂ ಸುಂದರ್ ಟಿಕೆಟ್ ಪಡೆದುಕೊಂಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದ್ದಾರೆ. ಎನ್ಡಿಎ ಪೂರ್ಣ ಬಹುಮತದೊಂದಿಗೆ ತಮಿಳುನಾಡಿನಲ್ಲಿ ಸರ್ಕಾರ ರಚಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಧರಪುರಂನಲ್ಲಿ ಡಿಎಂಕೆ ಅಭ್ಯರ್ಥಿ ಕಾಯಲ್ವಿಝಿ ಸೆಲ್ವರಾಜ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಮುರುಗನ್ ಸ್ಪರ್ಧೆ ಮಾಡಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಮಹಿಳಾ ವಿಭಾಗದ ಅಧ್ಯಕ್ಷೆ ವನತಿ ಶ್ರೀನಿವಾಸನ್ ಅವರು ಕೊಯಮತ್ತೂರು ದಕ್ಷಿಣ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದು, ಎಂಎನ್ಎಂ ಅಧ್ಯಕ್ಷ ಕಮಲ್ ಹಾಸನ್ ಮತ್ತು ಕಾಂಗ್ರೆಸ್ ಪಕ್ಷದ ಮಯೂರ ಜಯಕುಮಾರ್ ಅವರನ್ನು ಎದುರಿಸಲಿದ್ದಾರೆ.
ಚೆನ್ನೈನ ತೌಸೆಂಟ್ಸ್ಲೈಟ್ ಕ್ಷೇತ್ರದಲ್ಲಿ ನಟ ಖುಷ್ಬು ಸುಂದರ್ ಡಿಎಂಕೆ ಅಭ್ಯರ್ಥಿ ಡಾ.ಎನ್ ಎಝಿಲಾನ್ ವಿರುದ್ಧ ಸ್ಪರ್ಧಿಸಿದ್ದಾರೆ.
ಬಿಜೆಪಿ ಅಭ್ಯರ್ಥಿಗಳು ಮತ್ತು ಅವರ ಕ್ಷೇತ್ರಗಳು:
ಬಿಜೆಪಿ ರಾಜ್ಯ ಅಧ್ಯಕ್ಷ ಎಲ್ ಮುರುಗನ್ (ಧರಪುರಂ)
ವನತಿ ಶ್ರೀನಿವಾಸನ್ (ಕೊಯಮತ್ತೂರು ದಕ್ಷಿಣ)
ಎಚ್ ರಾಜ (ಕಾರೈಕುಡಿ)
ಕೆ ಅಣ್ಣಾಮಲೈ (ಅರಾವಕುರಿಚಿ)
ಖುಷ್ಬು ಸುಂದರ್ (ಥೌಸೆಂಟ್ಸ್ ಲೈಟ್ಸ್)
ಗಾಂಧಿ (ನಾಗರ್ಕೋಯಿಲ್)
ಜಿ ಪಾಂಡುರಂಗನ್ (ವಿರುಧುನಗರ)
ಡಿ ಕುಪ್ಪುರಂ (ರಾಮನಾಥಪುರಂ)
ಪಿ ರಮೇಶ್ (ಕೊಲಾಚೆಲ್)
ಎಸ್ ಥಾನಿಗೈವೆಲ್ (ತಿರುವಣ್ಣಾಮಲೈ)
ವ್ಯಾಟ್ ಕಾಳಿವರಥನ್ (ತಿರುಕ್ಕೋವಿಲೂರ್)
ಡಾ ಸಿ.ಕೆ ಸರಸ್ವತಿ (ಮೊಡಕುರಿಚಿ)
ಡಿ ಪೆರಿಯಸಾಮಿ (ತಿಟ್ಟಕುಡಿ)
ಪೂಂಡಿ ಎಸ್ ವೆಂಕಟೇಶನ್ (ತಿರುವೈರು)
ಇದನ್ನೂ ಓದಿ: ಮೋದಿಯನ್ನು ತಿರಸ್ಕರಿಸುತ್ತಿದ್ದಾರೆ ಭಾರತೀಯ ಯುವಜನರು; ಕಾರಣ ಆರ್ಥಿಕತೆ-ಸಿದ್ಧಾಂತ!

