ಸತೀಶ್ ಜಾರಕಿಹೊಳಿ ಮೂಲೆಗುಂಪು ಮಾಡಲು ಕಾಂಗ್ರೆಸ್‌ನಲ್ಲಿ ಸಂಚು?: ಬೆಂಬಲಿಗರ ಆಕ್ರೋಶ!

ಉತ್ತರ ಕರ್ನಾಟಕದ ಪ್ರಭಾವಿ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ಸತೀಶ್‌ ಜಾರಕಿಹೊಳಿ ಅವರನ್ನು ಮೂಲೆಗುಂಪು ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಅವರ ಬೆಂಬಲಿಗರು ಆರೋಪಿಸಿದ್ದಾರೆ.

ಸದ್ಯ ಏಪ್ರಿಲ್‌ 17ರಂದು ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಉಪ-ಚುನಾವಣೆ ನಡೆಯಲಿದೆ. ಈ ಚುನಾವಣೆಗೆ ಸತೀಸ್‌ ಜಾರಕಿಹೊಳಿ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ನಿರ್ಧರಿಸಿದೆ. ಆದರೆ, ಇದಕ್ಕೆ ಸತೀಶ್‌ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದ್ದಾರೆ.

ಸತೀಶ್‌ ಜಾರಕಿಹೊಳಿ ಅವರಿಗೆ ಲೋಕಸಭಾ ಟಿಕೆಟ್‌ ಕೊಟ್ಟು ಅವರನ್ನು ದೆಹಲಿಗೆ ರಾಜಕಾರಣಕ್ಕೆ ಕಳಿಸಲುಗುತ್ತಿದೆ. ಇದರಹಿಂದೆ ಅವರನ್ನು ರಾಜ್ಯ ರಾಜಕಾರಣದಿಂದ ದೂರವಿಡುವ ಹುನ್ನಾರವಿದೆ. ರಾಜ್ಯದಲ್ಲಿ ಸತೀರ್ಶ್ ಅವರಿಗೆ ಪ್ರಾಬಲ್ಯ-ಹಿಡಿತ ಇಲ್ಲದಂತೆ ಮಾಡಿ, ರಾಜ್ಯದಲ್ಲಿ ಅವರನ್ನು ದುರ್ಬಲಗೊಳಿಸುವ ಸಂಜು ಇದರ ಹಿಂದೆ ಇದೆ ಎಂದು ಸತೀಶ್‌ ಬೆಂಬಲಿಗರು ಆರೋಪಿಸಿದ್ದಾರೆ.

ನಮಗೆ ಸತೀಶ್ ಜಾರಕಿಹೊಳಿ ಅವರನ್ನು ಮುಖ್ಯಮಂತ್ರಿಯಾಗಿ ನೋಡುವ ಆಸೆ ಇದೆ. ಹೀಗಾಗಿ ಅವರು ಬೆಳಗಾವಿ ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡ ಎಂದೂ ಅಭಿಮಾನಿಗಳು ಒತ್ತಾಯಿಸಿದ್ದಾರೆ.

ಬೆಳಗಾವಿ ಉಪ-ಚುನಾವಣೆಗೆ ಸಂಭಾವಿತ ಅಭ್ಯರ್ಥಿಗಳ ಪಟ್ಟಿಯಲ್ಲಿ ಸತೀಶ್ ಜಾರಕಿಹೊಳಿ ಬಿಟ್ಟರೆ ಬೇರೆ ಯಾವುದೇ ಹೆಸರನ್ನು ಕಾಂಗ್ರೆಸ್‌ ನಮೂದಿಸಿಲ್ಲ. ಹೀಗಾಗಿ ಸತೀಶ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಎಂಬುದು ಬಹುತೇಕ ಖಚಿತವಾಗಿದೆ. ಆದರೆ, ಹೈಕಮಾಂಡ್‌ ಸತೀಶ್‌ ಅವರೊಂದಿಗೆ ಚರ್ಚಿಸಿ ತೀರ್ಮಾಣ ತೆಗೆದುಕೊಳ್ಳಲಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ನೇರವಾಗಿ ಕೊಡದ ದೂರನ್ನು ಪೊಲೀಸರು ಹೇಗೆ ಸ್ವೀಕರಿಸಿದ್ರು?- ರಮೇಶ್ ಕುಮಾರ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights