ಭಾರತದಲ್ಲಿ ಕೊರೊನಾ ಸ್ಪೋಟ; ಒಂದೇ ದಿನ 62 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು!

ಕೊರೊನಾ ಸೋಂಕಿನ ಎರಡನೇ ಅಲೆ ಮತ್ತೆ ಶುರುವಾಗಿದೆ. ಕಳೆದ 18 ದಿನಗಳಿಂದ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಮತ್ತೆ ಭಾರೀ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಭಾರತದಲ್ಲಿ ಶನಿವಾರ ಹೊಸದಾಗಿ 62,714 ಜನರಿಗೆ ಸೋಂಕು ತಗುಲಿದ್ದು, 312 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಕಳೆದ ಮೂರು ತಿಂಗಳಲ್ಲಿ ಇದು ದಾಖಲೆಯ ಪ್ರಮಾಣವನ್ನು ತಲುಪಿದೆ.

ಶನಿವಾರ ಸಾವನ್ನಪ್ಪಿದ 312 ಜನರ ಪೈಕಿ 112 ಮಂದಿ ಮಹಾರಾಷ್ಟ್ರದಲ್ಲಿ ಸಾವನ್ನಪ್ಪಿದ್ದಾರೆ. ಪಂಜಾಂಬ್‌ನಲ್ಲಿ 59, ಛತ್ತೀಸ್‌ಘಡದಲ್ಲಿ 22, ಕೇರಳ ಹಾಗೂ ಕರ್ನಾಟಕದಲ್ಲಿ ತಲಾ 14 ಮಂದಿ ಸಾವನ್ನಪ್ಪಿದ್ದಾರೆ.

ಭಾನುವಾರ ಬೆಳಗ್ಗೆ 08 ಗಂಟೆಗೆ ಪ್ರಕಟವಾದ ವರದಿಯಂತೆ ದೇಶದಲ್ಲಿ 4,86,310 ಸಕ್ರಿಯ ಕೊರೋನಾ ಪ್ರಕರಣಗಳಿವೆ. ಭಾರತದಲ್ಲಿ ಒಟ್ಟು 1,19,71,624 ಜನರಿಗೆ ಸೋಂಕು ತಗುಲುದೆ. ಈ ಪೈಕಿ ಸಾವಿನ ಸಂಖ್ಯೆ 1,61,552ಕ್ಕೆ ತಲುಪಿದೆ.

1,19,71,624 ಮಂದಿ ಒಟ್ಟಾರೆ ಸೋಂಕಿತರ ಪೈಕಿ ನಿನ್ನೆ ಒಂದೇ ದಿನ 28,739 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಇದರೊಂದಿಗೆ ಚೇತರಿಸಿಕೊಂಡವರ ಸಂಖ್ಯೆ 1,13,23762ಕ್ಕೆ ತಲುಪಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 4,86,310ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಇದನ್ನೂ ಓದಿ: TMCಗೆ ಮತ ಹಾಕಿದರೆ ವಿವಿಪ್ಯಾಟ್‌ BJPಗೆ ಮತ ತೋರಿಸುತ್ತಿದೆ: ಆಯೋಗಕ್ಕೆ TMC ದೂರು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights