ಫ್ಯಾಕ್ಟ್‌ಚೆಕ್ : ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಬಂದಿದ್ದ ಮಾಲಾಧಾರಿ ಮಗುವನ್ನು ಬಲವಂತವಾಗಿ ಕೂಡಿಹಾಕಲಾಗಿತ್ತೇ?

ಶಬರಿಮಲೆ ದೇವಸ್ಥಾನಕ್ಕೆ ಪ್ರವೇಶಿಸಲು ಅವಕಾಶ ನೀಡದೆ ಬಾಲಕನನ್ನು ಬಲವಂತವಾಗಿ ಕೂಡಿಹಾಕಿ ತಂದೆಯಿಂದ ಬೇರ್ಪಡಿಸಲಾಗಿದೆ. ಮಕ್ಕಳ ಸುರಕ್ಷತೆಗಾಗಿ ಪ್ರಾರ್ಥಿಸಿ. ಮತ ಹಾಕುವ ಮುನ್ನ ಯೋಚಿಸದಿದ್ದರೆ ಹಿಂದೂಗಳ ಸ್ಥಿತಿ ಇನ್ನೂ ಚಿಂತಾಜನಕವಾಗಲಿದೆ ಎಂದು ಪ್ರತಿಪಾದಿಸಿ ಎಂಬ ಪ್ರತಿಪಾದನೆಯೊಂದಿಗೆ ಮಾಲಾಧಾರಿ ಮಗುವೊಂದು ಅಳುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಶಬರಿಮಲೆ ಅಯ್ಯಪ್ಪನ ದೇವಸ್ಥಾನಕ್ಕೆ ಸಾಮಾನ್ಯವಾಗಿ ಕಾರ್ತಿಕ ಮಾಸ ಮತ್ತು ಮಾಘ ಮಾಸಗಳಲ್ಲಿ ಭಕ್ತರು ಭೇಟಿ ನೀಡುವುದು ವಾಡಿಕೆ. ಈ ವೇಳೆ, “ಶಬರಿಮಲೆ ದೇವಸ್ಥಾನದಲ್ಲಿ ಅನುಮತಿಯಿಲ್ಲದೆ ಬಾಲಕನನ್ನು ಬಲವಂತವಾಗಿ ತಂದೆಯಿಂದ ಬೇರ್ಪಡಿಸಲಾಗಿದೆ. ಶಬರಿಮಲೆಯಲ್ಲಿ ಮಕ್ಕಳು ಸುರಕ್ಷಿತವಾಗಿಲ್ಲ ಎಂದು ಬಲಪಂಥೀಯರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವನ್ನು ವೈರಲ್ ಮಾಡಲಾಗುತ್ತಿದೆ.

ಕೇರಳದ ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಭಕ್ತಾದಿಗಳ ಮೇಲೆ ಕಮ್ಯೂನಿಸ್ಟ್ ಸರ್ಕಾರದ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ಬಿಜೆಪಿ ಮತ್ತು ಸಂಘಪರಿವಾರ ಆರೋಪಿಸಿದೆ. ಮಗುವೊಂದು ಕೈ ಮುಗಿದು ಅಳುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು’ ಹಿಂದೂ ರಾಷ್ಟ್ರದಲ್ಲಿ ಹಿಂದೂಗಳಿಗೆ ರಕ್ಷಣೆಯಿಲ್ಲ ಎಂದು ಆರೋಪಿಸಿದ್ದಾರೆ. ಹಾಗಿದ್ದರೆ ಈ ವಿಡಿಯೋ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು ಪರಿಶೀಲಿಸದಾಗ, ವರದಿಗಳ ಪ್ರಕಾರ, ವ್ಯಾಪಕವಾಗಿ ಹರಿದಾಡುತ್ತಿರುವ ಮಗು ಕೈಮುಗಿದು ಬೇಡಿಕೊಂಡ ವಿಡಿಯೋ ಹಿಂದೂಗಳ ಮೇಲಿನ ದಾಳಿಯದಲ್ಲ. ಮಗು ತನ್ನ ತಂದೆಯಿಂದ ತಪ್ಪಿಸಿಕೊಂಡಾಗ ತಂದೆಯ ಹತ್ತಿರ ಸೇರಿಸುವಂತೆ ಕೈ ಮುಗಿದು ಬೇಡಿಕೊಂಡಿದೆ ಎಂದು ತಿಳಿದು ಬಂದಿದೆ.

ವೈರಲ್ ವೀಡಿಯೊವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ, ಬಸ್ಸು ಚಲಿಸಲು ಪ್ರಾರಂಭಿಸಿದಾಗ ಮಾತ್ರ ಮಗು ಅಳಲು ಪ್ರಾರಂಭಿಸುತ್ತದೆ. ಆಗ ಬಸ್ಸಿನಿಂದ ಹೊರಗೆ ನಿಂತಿದ್ದ ಸೆಕ್ಯೂರಿಟಿಯೊಬ್ಬ  ಮಗುವನ್ನು ಸಮಾಧಾನ ಮಾಡಲು ಪ್ರಯತ್ನಿಸುತ್ತಾನೆ. ಇದೇ ಸಂದರ್ಬದಲ್ಲಿ  ಮಗುವಿನ ತಂದೆ ಹಿಂತಿರುಗುತ್ತಾನೆ. ಮಗುವು ತಂದೆಯನ್ನು ನೋಡಿದಾಗ, ಅವನು ಅವನನ್ನು “ಅಪ್ಪ” ಎಂದು ಕರೆಯುವುದನ್ನು ನೋಡಬಹುದು.. ನಂತರ ಮಗು ಸಮಾದಾನದಿಂದ, ಕಣ್ಣು ಒರೆಸಿಕೊಳ್ಳುತ್ತ, ಕೈಗಳನ್ನು ಬೀಸುತ್ತ ಬೈ ಹೇಳುವುದನ್ನು ವೀಡಿಯೊದಲ್ಲಿ ಸ್ಪಷ್ಟವಾಗಿ ಕಾಣಬಹುದು.

ವೈರಲ್ ಆಗಿರುವ ವೀಡಿಯೋದಲ್ಲಿ ಬಾಲಕ ಕೇರಳದ ಸರ್ಕಾರಿ ಬಸ್‌ನಲ್ಲಿ (KSRTC) ಇರುವುದನ್ನು ಕಾಣಬಹುದು, ಆದರೆ ಇದನ್ನು ಪೊಲೀಸ್  ವಾಹನದಲ್ಲಿ ಬಾಲಕನನ್ನು ಕರೆದುಕೊಂಡು ಹೋಗಲಾಗುತ್ತಿದೆ ‘ಶಬರಿಮಲೆ ಹಿಂದೂಗಳು ಸುರಕ್ಷಿತವಾಗಿಲ್ಲ’ ಎಂಬ ಸುಳ್ಳು ಪ್ರತಿಪಾದನೆಯೊಂದಿಗೆ ಬಲಪಂಥೀಯ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ತಪ್ಪಾಗಿ ಹಂಚಿಕೊಳ್ಳುತ್ತಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಶಬರಿಮಲೆಯಲ್ಲಿ ಅನುಮತಿಯಿಲ್ಲದೆ ಬಾಲಕನನ್ನು ತಂದೆಯಿಂದ ಬಲವಂತವಾಗಿ ಬೇರ್ಪಡಿಸಲಾಗಿದೆ,  ಕೇರಳದ ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಭಕ್ತಾದಿಗಳ ಮೇಲೆ ಕಮ್ಯೂನಿಸ್ಟ್ ಸರ್ಕಾರದ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ಬಿಜೆಪಿ ಮತ್ತು ಸಂಘಪರಿವಾರ ಸುಳ್ಳು ಮತ್ತು ಆಧಾರರಹಿತ ಆರೋಪಗಳನ್ನು ಮಾಡುತ್ತ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಮತ್ತೊಂದು ಸುಳ್ಳು ಹೇಳಿದ ಸುವರ್ಣ ನ್ಯೂಸ್‌ನ ಅಜಿತ್ ಹನುಮಕ್ಕನವರ್


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights