ಅಸಭ್ಯ ಫೋಟೋಗಳಿಂದ ಬೆದರಿಕೆ, ಹಣಕ್ಕಾಗಿ ಬೇಡಿಕೆ ಇಟ್ಟ ಚಾಲಕಿ ಕೈಗೆ ಬಿತ್ತು ಕೋಳ!

ಅಸಭ್ಯ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುವ ಬೆದರಿಕೆ ಹಾಕಿ ದಕ್ಷಿಣ ದೆಹಲಿಯ ಮಹಿಳಾ ನಿವಾಸಿಯೊಬ್ಬರಿಂದ ಹಣ ವಸೂಲಿ ಮಾಡಲು ಯತ್ನಿಸಿದ್ದ 26 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಸುಮಿತ್ ಎಂದು ಹೆಸರಿಸಲಾಗಿದೆ. ಈತನನ್ನು ಹತ್ತೀಸ್ಗಢದಲ್ಲಿ ಬಂಧನದ ಬಳಿಕ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಅಮಾಯಕ ಹೆಣ್ಣುಮಕ್ಕಳ ಖಾಸಗಿ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದಾಗಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಚಾಲಕಿ ರೀತಿ ಬೆದರಿಸಿ ಮಹಿಳೆಯರನ್ನು ಬಲೆಗೆ ಬೀಳಿಸಿಕೊಳ್ಳುತ್ತಿದ್ದನು. ಹೀಗೆ ನೂರಾರು ಜನ ಮಹಿಳೆಯರಿಗೆ ಈತ ಬೆದರಿಕೆ ಹಾಕಿದ್ದಾನೆ.

ದೆಹಲಿ ಮಹಿಳೆಯೊಬ್ಬಳ ಇನ್ಸ್ಟಾಗ್ರಾಮ್ನಲ್ಲಿ ತನ್ನ ಖಾತೆ ಹ್ಯಾಕ್ ಮಾಡಿ ಆಕೆಯ ನಗ್ನ ಚಿತ್ರಗಳನ್ನು ಪೋಸ್ಟ್ ಮಾಡುವುದಾಗಿ ಹೇಳಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದನು. ಮಾತ್ರವಲ್ಲದೇ ಆಕೆಯ ಸಂಪರ್ಕ ಪಟ್ಟಿಯಲ್ಲಿರುವ ಜನರಿಂದಲೂ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ಇದರಿಂದ ಬೇಸತ್ತ ಮಹಿಳೆ ದೂರು ದಾಖಲಿಸಿದ್ದಾಳೆ. ದೆಹಲಿ ಪೊಲೀಸರ ಸೈಬರ್ ಸೆಲ್ ಈತನ ಜಾಡು ಹಿಡಿದು ಹೆಡೆಮುರಿ ಕಟ್ಟಿದ್ದಾರೆ.ಸೈಬರ್ ಸೆಲ್ ಇನ್ಸ್ಟಾಗ್ರಾಮ್ನಿಂದ ತಾಂತ್ರಿಕ ವಿವರಗಳನ್ನು ಕೋರಿತು ಮತ್ತು ಟೆಲಿಕಾಂ ಸೇವಾ ಪೂರೈಕೆದಾರರು ನೀಡಿದ ವಿವರಗಳ ಆಧಾರದ ಮೇಲೆ ಆರೋಪಿಯನ್ನು ಪತ್ತೆ ಮಾಡಲಾಗಿದೆ.

ಈತನ ವಿರುದ್ಧ ದೂರಿನಲ್ಲಿ ಸುಲಿಗೆ ಲೈಂಗಿಕ ಕಿರುಕುಳ ಮತ್ತು ಕ್ರಿಮಿನಲ್ ಬೆದರಿಕೆ ಪ್ರಕರಣವನ್ನು ದಾಖಲಿಸಲಾಗಿದೆ.ಸದ್ಯ ಈತನಿಂದ ಬಳಸಿದ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ .

ಪೊಲೀಸರ ಪ್ರಕಾರ, ಈತ ಮಹಿಳೆಯರಿಗೆ ಬ್ಲ್ಯಾಕ್ಮೇಲ್ ಮಾಡಿ ಹಣ ಸುಲಿಗೆ  ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳಿಂದ ಅವರ ಪ್ರೊಫೈಲ್ ಚಿತ್ರಗಳನ್ನು ತೆಗೆಯುವ ಬೆದರಿಕೆ ಹಾಕುವ ಫೋಟೋಗಳನ್ನು ಮಾರ್ಫ್ ಮಾಡಿ ನಕಲಿ ಪ್ರೊಫೈಲ್ಗಳನ್ನು ರಚಿಸುತ್ತಿದ್ದ ಎಂದು ಹೇಳಿದ್ದಾರೆ. ಇಂಥವರು ಪ್ರಸ್ತುತ ನೋಯ್ಡಾದಲ್ಲಿ ವಾಸಿಸುತ್ತಿರುವ ಪದವೀಧರರಾಗಿದ್ದು ಫಿಶಿಂಗ್ ತಂತ್ರಗಳನ್ನು ಕಲಿತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights