ಆಪರೇಷನ್‌ ಕಮಲಕ್ಕೆ ಮತ್ತೊಂದು ಬೇಟೆ ಜಾರ್ಖಂಡ್‌?; ಮೈತ್ರಿ ಸರ್ಕಾರ ಉರುಳಿಸಲು ನಡೆಯುತ್ತಿದೆ ಸಂಚು!

ಜಾರ್ಖಂಡ್‌ನಲ್ಲೂ ಆಪರೇಷನ್‌ ಕಲಮ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಜಾರ್ಖಂಡ್‌ನಲ್ಲಿರುವ ಜೆಎಂಎಂ-ಕಾಂಗ್ರೆಸ್-ಆರ್‌ಜೆಡಿ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಪಿತೂರಿ ನಡೆಯುತ್ತಿದ್ದು, ಕೆಲವು ಅಪರಿಚಿತರು ತಮ್ಮನ್ನು ಸಂಪರ್ಕಿಸಿ 1 ಕೋಟಿ ರೂ. ಹಣ ಮತ್ತು ಮಂತ್ರಿಸ್ಥಾನ ನೀಡುವ ಆಮಿಷವೊಡ್ಡುತ್ತಿದ್ದಾರೆ ಎಂದು ಕಾಂಗ್ರೆಸ್‌ ಶಾಸಕರೊಬ್ಬರು ಆರೋಪಿಸಿದ್ದಾರೆ.

ಅಲ್ಲದೆ, ಜಾರ್ಖಂಡ್‌ ಸಮ್ಮಿಶ್ರ ಸರ್ಕಾರದ ವಿರುದ್ಧ ಪಿತೂರಿ ನಡೆಸಿದ ಆರೋಪದ ಮೇಲೆ ಮೂರು ಜನರನ್ನು ಶನಿವಾರ ಬಂಧಿಸಲಾಗಿದೆ.

ದೇಶದ ಹಲವು ರಾಜ್ಯದಗಳಲ್ಲಿ ಆಪರೇಷನ್ ಕಮಲ ಮಾಡಿ ಅಧಿಕಾರ ಹಿಡಿದಿರುವ ಬಿಜೆಪಿಯ ಮುಂದಿನ ಗುರಿ ಜೆಎಂಎಂ-ಕಾಂಗ್ರೆಸ್-ಆರ್‌ಜೆಡಿ ಸಮ್ಮಿಶ್ರ ಸರ್ಕಾರವಿರುವ ಜಾರ್ಖಂಡ್‌ ಆಗಿದೆಯೆ ಎಂದು ಸಂಶಯ ಮೂಡತೊಡಗಿದೆ. 81 ಸದಸ್ಯ ಬಲವಿರುವ ರಾಜ್ಯದಲ್ಲಿ ಆಡಳಿತರೂಢ ಜೆಎಂಎಂಗೆ 30 ಸ್ಥಾನಗಳಿದ್ದರೆ, ಕಾಂಗ್ರೆಸ್‌ಗೆ 18 ಮತ್ತು ಆಜೆಡಿಗೆ 1 ಸ್ಥಾನವಿದೆ. ಬಿಜೆಪಿ 26 ಸ್ಥಾನಗಳನ್ನು ಹೊಂದಿದ್ದು, ಇತರೆ ಪಕ್ಷಗಳು ಏಳು ಸ್ಥಾನಗಳನ್ನು ಹೊಂದಿದೆ.

“ಮೂವರು ವ್ಯಕ್ತಿಗಳು ಕನಿಷ್ಠ ಆರು ಬಾರಿ ನನ್ನನ್ನು ಸಂಪರ್ಕಿಸಿದ್ದಾರೆ” ಎಂದು ಜಾರ್ಖಂಡ್‌ ನ ಕೋಲೆಬೀರಾ ಕ್ಷೇತ್ರದ ಕಾಂಗ್ರೆಸ್ ಶಾಸಕ ನಮನ್ ಬಿಕ್ಸಲ್ ಕೊಂಗಾರಿ ಹೇಳಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಇದನ್ನೂ ಓದಿ: ಜಾರ್ಖಂಡ್: ಇಲ್ಲಿಯವರೆಗೂ 137 ಜನಕ್ಕೆ ಮಾತ್ರ ಕೊರೊನ ಸೋಂಕು ಪತ್ತೆ ಪರೀಕ್ಷೆ; ಒಂದೂ ಸೋಂಕಿತ ಪ್ರಕರಣ ಇಲ್ಲ

“ನನ್ನ ಪಕ್ಷದ ಕಾರ್ಯಕರ್ತರ ಮೂಲಕ ಮೂರು ಜನರು ನನ್ನನ್ನು ಸಂಪರ್ಕಿಸಿದ್ದರು, ಅವರು ಕೆಲವು ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ನಾನು ಅವರನ್ನು ನನ್ನನ್ನು ಸಂಪರ್ಕಿಸಬೇಡಿ ಎಂದು ಕೇಳಿದರೂ, ಅವರು ಮತ್ತೇ ಸಂಪರ್ಕಿಸಿದ್ದರು. ಒಮ್ಮೆ, ಅವರು ನನಗೆ 1 ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ನೀಡುವುದಾಗಿ ಹೇಳಿದ್ದಾರೆ. ನಾನು ತಕ್ಷಣ ಸಿಎಲ್‌ಪಿ (ಕಾಂಗ್ರೆಸ್ ಶಾಸಕಾಂಗ ಪಕ್ಷ) ನಾಯಕ ಆಲಮ್‌ಗೀರ್ ಆಲಂ ಮತ್ತು ಕಾಂಗ್ರೆಸ್ ಜಾರ್ಖಂಡ್ ಉಸ್ತುವಾರಿ ಆರ್.ಪಿ.ಎನ್. ಸಿಂಗ್ ಅವರಿಗೆ ಮಾಹಿತಿ ನೀಡಿದ್ದೇನೆ. ನಾನು ಈ ಬಗ್ಗೆ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರಿಗೆ ಮಾಹಿತಿ ನೀಡಿದ್ದೇನೆ” ಎಂದು ಶಾಸಕ ಹೇಳಿದ್ದಾರೆ.

ಆದರೆ ಈ ಬಗ್ಗೆ ಪತ್ರಿಕೆಗಳೊಂದಿಗೆ ಚರ್ಚಿಸಲು ಸಾಧ್ಯವಿಲ್ಲ ಎಂದು, ಆರ್.ಪಿ.ಎನ್. ಸಿಂಗ್ ಅವರು ಹೇಳಿದ್ದಾರೆಂದು ಪತ್ರಿಕೆ ವರದಿ ಮಾಡಿದೆ. ಈ ವಿಷಯದ ಬಗ್ಗೆ ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂ‌ತ್‌ ಸೊರೆನ್ ಕೂಡಾ ಮೌನ ತಾಳಿದ್ದಾರೆ.

ನಮನ್ ಬಿಕ್ಸಲ್ ಕೊಂಗಾರಿ, “ಹಣದ ಹೊರತಾಗಿ, ಮಂತ್ರಿ ಸ್ಥಾನವನ್ನು ನೀಡುವುದಾಗಿ ಅವರು ನನ್ನನ್ನು ಸಂಪರ್ಕಿಸಿದ್ದರು. ಅವರು ಬಿಜೆಪಿಗಾಗಿ ಇದನ್ನು ಮಾಡುತ್ತಿದ್ದಾರೆ ಎಂದು ಅವರು ನನಗೆ ಹೇಳಿದ್ದಾರೆ. ಆದರೆ ಬಿಜೆಪಿ ಕಾರ್ಯಕರ್ತರು ಯಾರೂ ನನ್ನನ್ನು ಸಂಪರ್ಕಿಸಲಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಜಾರ್ಖಂಡ್‌ನ ರಾಂಚಿಯಲ್ಲಿ ಹಾನಿಗೊಳಗಾದ ಶಿವಲಿಂಗ : ಕೋಮು ಬಣ್ಣಹಚ್ಚಿ ಫೋಟೋ ವೈರಲ್…! 

ಶನಿವಾರ ಬಂಧನಕ್ಕೊಳಗಾದ ಮೂವರು ವ್ಯಕ್ತಿಗಳು ಅವರೆನಾ ಎಂದು ಖಚಿತಪಡಿಸಲು ಸಾಧ್ಯವಿಲ್ಲ, ಯಾಕೆಂದರೆ ಅವರ ಮುಖಗಳು ನನಗೆ ನೆನಪಿಲ್ಲ ಎಂದು ಶಾಸಕ ಹೇಳಿದ್ದಾರೆ.

ಬರ್ಮೋ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಕುಮಾರ್ ಜೈಮಂಗಲ್‌ ನೀಡಿದ ದೂರಿನ ಮೇರೆಗೆ ರಾಂಚಿಯ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದಾಗಿ ಎರಡು ದಿನಗಳ ನಂತರ ಅಭಿಷೇಕ್ ದುಬೆ, ಅಮಿತ್ ಸಿಂಗ್ ಮತ್ತು ನಿವಾರನ್ ಪ್ರಸಾದ್ ಮಹತೋ ಅವರನ್ನು ಶನಿವಾರ ಬಂಧಿಸಲಾಯಿತು.

ಈ ಪ್ರಕರಣವನ್ನು ಐಪಿಸಿ ಸೆಕ್ಷನ್ 419 (ಕ್ರಿಮಿನಲ್ ಪಿತೂರಿ), 420 (ಮೋಸ), 124 ಎ (ದೇಶದ್ರೋಹ), 120 ಬಿ (ಕ್ರಿಮಿನಲ್ ಪಿತೂರಿ) ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯಡಿ ದಾಖಲಿಸಲಾಗಿದೆ.

ಇದನ್ನೂ ಓದಿ: ಜನರನ್ನು ಪ್ರಯೋಗಾಲಯದ ಇಲಿಗಳನ್ನಾಗಿಸಬೇಡಿ; ಲಸಿಕೆಯ ಸತ್ಯಾಸತ್ಯತೆ ತಿಳಿಸಿ: ಜಾರ್ಖಂಡ್‌ ಆರೋಗ್ಯ ಸಚಿವ

ಆರೋಪಿ ನಿವಾರನ್ ಪ್ರಸಾದ್ ಮಹತೋ ಅವರ ಫೇಸ್‌ಬುಕ್ ಪೇಜ್‌‌ನಲ್ಲಿ ಅವರು ಬಿಜೆಪಿಯ ಧನ್ಬಾದ್ ಸಂಸದ ಪಶುಪತಿ ನಾಥ್ ಮತ್ತು ಕೆಲವು ಸ್ಥಳೀಯ ನಾಯಕರೊಂದಿಗೆ ಇರುವ ಚಿತ್ರಗಳು ಬಹಿರಂಗವಾಗಿದೆ. ನಿವಾರನ್‌ ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಜಾರ್ಖಂಡ್ ಬಿಜೆಪಿ ವಕ್ತಾರ ಪ್ರತುಲ್ ಶಹದೇವ್, “ನನಗೆ ತಿಳಿದ ಮಟ್ಟಿಗೆ ಅವರು ಬಿಜೆಪಿ ಸದಸ್ಯರಲ್ಲ” ಎಂದು ಹೇಳಿದ್ದಾರೆ.

ಪ್ರತುಲ್‌ ಶಹದೇವ್ ಪ್ರಕರಣವನ್ನು ಸಿಬಿಐ ನೀಡುವಂತೆ ಒತ್ತಾಯಿಸಿದರೆ, ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಬಾಬುಲಾಲ್ ಮರಂಡಿ ಅವರು ಪೊಲೀಸರು ಪತ್ರಿಕಾಗೋಷ್ಠಿ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಅಂಶಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಒತ್ತಾಯಿಸಿದ್ದಾರೆ.

ಜಾರ್ಖಂಡ್‌ ಪೊಲೀಸರು ಈ ಪ್ರಕರಣದ ಕಾರ್ಯವಿಧಾನವನ್ನು ಇಲ್ಲಿಯವರೆಗೆ ವಿವರಿಸಿಲ್ಲ. ಕೇವಲ ಮೂವರು ಆರೋಪಿಗಳು ತಾವು ಸರ್ಕಾರದ ವಿರುದ್ಧದ ಪಿತೂರಿಯಲ್ಲಿ ಭಾಗಿಯಾಗಿದ್ದೇವೆ ಮತ್ತು ಅದನ್ನು ಅಸ್ಥಿರಗೊಳಿಸಲು ಯೋಜಿಸುತ್ತಿದ್ದೇವೆ ಎಂದು ಹೇಳಿದ್ದಾರೆ ಎಂಬ ಪತ್ರಿಕಾ ಪ್ರಕಟಣೆಯನ್ನು ಮಾತ್ರ ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಜಾರ್ಖಂಡ್: ಬುಡಕಟ್ಟು ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದೆ ಎಸ್‌ಐಎಲ್ ಉದ್ಯೋಗಿ ಸ್ಥಾಪಿಸಿದ ಸಣ್ಣ ಶಾಲೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights