ಉತ್ತರಾಖಂಡ ಹಿಮಪ್ರವಾಹ: ಸುರಂಗದ ಶವಗಳ ಪರೀಕ್ಷಾ ವರದಿ ಕೇಳಿ ನರಳಾಡಿದ ಕುಟುಂಬಸ್ಥರು!
ಉತ್ತರಾಖಂಡದ ಚಮೋಲಿ ಜಿಲ್ಲೆಯ ತಪೋವನ್ ಪ್ರದೇಶದ ಎನ್‌ಟಿಪಿಸಿಯ ಜಲವಿದ್ಯುತ್ ಯೋಜನಾ ಸ್ಥಳದ ಸುರಂಗಕ್ಕೆ ಹಿಮಪ್ರವಾಹ ನುಗ್ಗಿ ಇಂದಿಗೆ ಹತ್ತು ದಿನಗಳೇ ಕಳೆದಿವೆ. ನಾಪತ್ತೆಯಾದ ಕಾರ್ಮಿಕರ ಶೋಧ ಕಾರ್ಯ ಇನ್ನೂ ನಡೆಯುತ್ತಲೇ ಇದೆ. ಆದರೂ ಅದೆಷ್ಟೋ ಜನರನ್ನು ಪತ್ತೆ ಮಾಡಲಾಗಿಲ್ಲ. ಸುರಂಗದಿಂದ ವಶಪಡಿಸಿಕೊಂಡ ಒಂಬತ್ತು ಶವಗಳ ಪರೀಕ್ಷೆ ನಡೆಸಿದ ವೈದ್ಯಾಧಿಕಾರಿಗಳ ಕಾರ್ಮಿಕರ ಸಾವಿಗೆ ಉಸಿರುಗಟ್ಟುವಿಕೆಯೇ ಕಾರಣ ಎಂದು ಹೇಳಿದ್ದಾರೆ. ಮಾತ್ರವಲ್ಲದೇ ಹಿಮಪ್ರವಾಹ ಸುರಂಗದೊಳಗೆ ನುಗ್ಗಿದ ಅರ್ಧ ಗಂಟೆಯೊಳಗೇ ಅವರು ಸಾವನ್ನಪ್ಪಿದ್ದಾರೆಂದು ಜಿಲ್ಲೆಯ ಮುಖ್ಯ ವೈದ್ಯಾಧಿಕಾರಿ ಡಾ.ಜಿ.ಎಸ್.ರಾಣಾ ಹೇಳಿದ್ದಾರೆ.
ಪ್ರವಾಹ ಉಂಟಾಗಿ ಒಂದು ವಾರದ ಬಳಿಕ ಸುರಂಗದಿಂದ ಹೊರತೆಗೆದ ಆರು ಶವಗಳ ಮರಣೋತ್ತರ ಪರೀಕ್ಷೆಯಲ್ಲಿ, ವೈದ್ಯರು ಶವಗಳ ಶ್ವಾಸಕೋಶ ಮತ್ತು ಹೊಟ್ಟೆಯೊಳಗೆ ನೀರು ಮತ್ತು ಮಣ್ಣನ್ನು ಪತ್ತೆ ಮಾಡಿದ್ದಾರೆ.
ಮಾಧ್ಯಮಕ್ಕೆ ಮಾತನಾಡಿದ ಸಿಎಮ್‌ಒ, “ಭಾನುವಾರ ಫೆಬ್ರವರಿ 7ರಂದು ಸುರಂಗದಿಂದ ತೆಗೆಯಲಾದ ಆರು ಶವಗಳ ಮರಣೋತ್ತರ ಪರೀಕ್ಷೆಯಲ್ಲಿ, ಪ್ರವಾಹದ ಮಣ್ಣು ಮತ್ತು ನೀರು ಸೇರಿಕೊಂಡಿತ್ತು. ಇದು ಅವರು ದೇಹಕ್ಕೆ ಪ್ರವೇಶಿಸಿದ ಅರ್ಧ ಘಂಟೆಯೊಳಗೆ ಅವರು ಸಾವನ್ನಪ್ಪದ್ದಾರೆ” ಎಂದು ಹೇಳಿದ್ದಾರೆ.
ಈಗಾಗಲೇ ಜೀವಂತವಾಗಿ ಬೇಡ ಶವಗಳನ್ನಾದರೂ ಹುಡಿಕಿಕೊಡಿ ಎಂದು ಮರಗುತ್ತಿದ್ದ ಕುಟುಂಬಸ್ಥರು ಶವಗಳ ಪರೀಕ್ಷಾ ವರದಿ ಕೇಳಿ ನರಳಾಡಿದ್ದಾರೆ. ಸುರಂಗದಲ್ಲಿ ತಮ್ಮವರು ಉಸಿರುಗಟ್ಟಿ ಅರ್ಧ ಗಂಟೆಯಲ್ಲಿ ಪ್ರಾಣ ಬಿಟ್ಟಿದ್ದಾರೆಂಬ ಸುದ್ದಿ ಕೇಳಿ ದಿಗ್ಭ್ರಾಂತರಾಗಿದ್ದಾರೆ.
ಈಗಾಗಲೇ ಪ್ರತಿನಿತ್ಯ ಸಿಕ್ಕ ಶವಗಳನ್ನು ಕಾರ್ನಾಪ್ರಯಾಗ್ ಮತ್ತು ಗೋಪೇಶ್ವರದಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗುತ್ತಿದೆ. ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ವರದಿಯ ಪ್ರಕಾರ ಸೋಮವಾರದವರೆಗೆ ಒಟ್ಟು 55 ಶವಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇನ್ನೂ 149 ಜನರು ನಾಪತ್ತೆಯಾಗಿದ್ದಾರೆ. ಸೋಮವಾರ, ತಪೋವನ್‌ನ ಸುರಂಗದಿಂದ ಮೂರು ಮತ್ತು ಶ್ರೀನಗರದ ನದಿಯಿಂದ ನಾಲ್ಕು ಶವಗಳನ್ನು ವಶಪಡಿಸಿಕೊಳ್ಳಲಾಗಿದೆ.

