ರಿಂಕು ಶರ್ಮಾ ಹತ್ಯೆ: BJP ಹಾದಿಯಲ್ಲೇ ಕೇಸರಿ ಪಡೆಯನ್ನು ಇಕ್ಕಟ್ಟಿಗೆ ಸಿಕ್ಕಿಸುತ್ತಿದೆ AAP!

ಬಿಜೆಪಿಯ ಯುವ ಮೋರ್ಚಾ ಕಾರ್ಯಕರ್ತ ಮತ್ತು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಸದಸ್ಯ ರಿಂಕು ಶರ್ಮಾ ಅವರ ಕೊಲೆ ಪ್ರಕರಣವು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಮತ್ತೊಂದು ಉದಾಹರಣೆಯಾಗಿದೆ ಎಂದು ಎಎಪಿ ಆರೋಪಿಸಿದೆ.

ದೆಹಲಿಯ ಕಾನೂನು ಮತ್ತು ಸುವ್ಯವಸ್ತೆಯನ್ನು ಅತ್ಯಂತ ಕೆಟ್ಟದಾಗಿ ಹದಗೆಟ್ಟಿದೆ. ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವಲ್ಲಿ ಎಂಎಚ್‌ಒ (ಕೇಂದ್ರ ಗೃಹ ಸಚಿವಾಲಯ) ವಿಫವಾಗಿದೆ. ಹೀಗಾಗಿ ದೆಹಲಿಯಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇವೆ. ಈ ಭೀಕರ ಹತ್ಯೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ದೆಹಲಿಯ ಕಾನೂನು ಸುವ್ಯವಸ್ಥೆ ವ್ಯವಸ್ಥೆಯ ಬಗ್ಗೆ ಜನರಲ್ಲಿ ನಂಬಿಕೆಯನ್ನು ಪುನಃಸ್ಥಾಪಿಸಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಎಎಪಿ ಹೇಳಿದೆ.

ರಿಂಕು ಶರ್ಮಾ ಅವರು ತಮ್ಮ ಸ್ನೇಹಿತ ಬರ್ತಡೇ ಪಾರ್ಟಿಗೆ ತೆರಳಿದ್ದ ಸಂದರ್ಭದಲ್ಲಿ ಅವರ ನೆರೆಹೊರೆಯವರು ಅವರನ್ನು ಇರಿದು ಕೊಂದಿದ್ದರು. ಇದಾದ ನಂತರ ದೆಹಲಿಯಲ್ಲಿ ಈ ಘಟನೆ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಅವರು ಜೈ ಶ್ರೀರಾಮ್‌ ಎಂದು ಘೋಷಣೆ ಕೂಗಿದ್ದಕ್ಕಾಗಿ ಅವರ ಹತ್ಯೆಯಾಗಿದೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ ಎಂದು ಎಎಪಿ ಶಾಸಕ ರಾಘವ್ ಚಾಧಾ ಹೇಳಿದ್ದು, ಬಿಜೆಪಿ ಆಡಳಿತದಲ್ಲಿ ಹಿಂದೂಗಳೂ ಸಹ ಸುರಕ್ಷಿತವಾಗಿಲ್ಲ ಎಂದು ಹೇಳಿದ್ದಾರೆ.

“‘ಜೈ ಶ್ರೀ ರಾಮ್ ’ಎಂದು ಹೇಳಿದ್ದಕ್ಕಾಗಿ ಕೊಲೆಗಳು ನಡೆಯುತ್ತಿರುವುದು ದುರದೃಷ್ಟಕರ. ಇಂದು, ದೇಶದಲ್ಲಿ ‘ಜೈ ಶ್ರೀ ರಾಮ್’ ಎಂದು ಹೇಳುವುದು ಅಸುರಕ್ಷಿತವಾಗಿದೆ. ಈ ಘೋಷಣೆಯನ್ನು ಭಾರತದಲ್ಲಿ ಎತ್ತಲು ಸಾಧ್ಯವಾಗದಿದ್ದರೆ, ಅದನ್ನು ಎಲ್ಲಿ ಎತ್ತಬೇಕು? ಪಾಕಿಸ್ತಾನದಲ್ಲಿಯೇ?” ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.

ರಿಂಕು ಶರ್ಮಾ ಅವರ ಕುಟುಂಬಕ್ಕೆ ಆಮ್‌ ಆದ್ಮಿ ಪಕ್ಷವು 1 ಕೋಟಿ ರೂ. ಪರಿಹಾರ ನೆರವು ನೀಡಿದೆ.

ಫೆಬ್ರವರಿ 10 ರ ರಾತ್ರಿ ಮಂಗೋಲ್ಪುರಿಯಲ್ಲಿ ರಿಂಕು ಶರ್ಮಾ (25) ಕೊಲೆಯಾಗಿದ್ದಾರೆ. ಕೊಲೆಗೆ ಸಂಬಂಧಿಸಿದಂತೆ ಐದು ಜನರನ್ನು ಬಂಧಿಸಿರುವ ದೆಹಲಿ ಪೊಲೀಸರು, ಇದು ವ್ಯಾಪಾರ ಪೈಪೋಟಿಯ ಪರಿಣಾಮ ಎಂದು ಇದುವರೆಗೂ ಸಮರ್ಥಿಸಿಕೊಂಡಿದ್ದಾರೆ.

ಆದರೆ ರಾಮ ಮಂದಿರ ದೇಣಿಗೆ ಸಂಗ್ರಹ ಅಭಿಯಾನದ ಚಾಲನೆಯಲ್ಲಿ ಭಾಗವಹಿಸಿದ್ದರಿಂದ ಶರ್ಮಾ ಕೊಲ್ಲಲ್ಪಟ್ಟರು ಎಂದು ಆರೋಪಿಸಿ ಸ್ವಯಂ ಶೈಲಿಯ ಕೇಸರಿ ನಾಯಕರಾದ ಉಪದೇಶ್ ರಾಣಾ ಮತ್ತು ಬಿಜೆಪಿ ನೇತೃತ್ವದ ವಿಎಚ್‌ಪಿ ಕಾರ್ಯಕರ್ತರು ಪ್ರಚಾರ ಮಾಡುತ್ತಿದ್ದಾರೆ.

“ಒಬ್ಬರು ಘೋಷಣೆ ಎತ್ತಿದ್ದಕ್ಕಾಗಿ ಕೊಲ್ಲಲ್ಪಟ್ಟರು ಎಂದು ಊಹಿಸಬೇಕಾದರೂ, ದೆಹಲಿ ಪೊಲೀಸರು ಈಗ ಬಿಜೆಪಿಯ ನಿಯಂತ್ರಣದಲ್ಲಿಯೇ ಇದ್ದಾರೆ ಅಲ್ಲವೆ? ಬಿಜೆಪಿ ತನ್ನದೇ ಆಡಳಿತದಲ್ಲಿ, ತನ್ನ ನಿಯಂತ್ರಣದಲ್ಲಿರುವ ಸಂಸ್ಥೆಯ ಮೇಲೆ ಹೇಗೆ ಆಕ್ರಮಣ ಮಾಡುತ್ತಿದೆ ಎಂಬುದನ್ನು ನಾವು ಬಹಿರಂಗಪಡಿಸಲು ಬಯಸಿದ್ದೇವೆ” ಎಂದು ಎಎಪಿ ಮುಖಂಡರೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ದಿಶಾ ರವಿ ಬಿಡುಗಡೆಗೆ ಒತ್ತಾಯ; ಹೆಣ್ಣುಮಕ್ಕಳು ಓದಿ ಅಂತಾರೆ; ಪ್ರಶ್ನಿಸಿದ್ರೆ ಅವರನ್ನೇ ಬಂಧಿಸುತ್ತಾರೆ: ಸಿದ್ದರಾಮಯ್ಯ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights