ಕಾಗದದ ದೋಣಿಯಂತೆ ತೇಲಾಡಿದ ಕಾರುಗಳು : ಭಾರೀ ಮಳೆ ಪ್ರವಾಹಕ್ಕೆ ತತ್ತರಿಸಿದ ಚೀನಿಗರು!

ಚೀನಾದಲ್ಲಿ ಭಾರೀ ಪ್ರವಾಹಕ್ಕೆ ಸಿಲುಕಿದ ಕಾರುಗಳು ಆಟಿಕೆಗಳಂತೆ ನೀರಿನಲ್ಲಿ ತೇಲಾಡುವ ದೃಶ್ಯಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ.

ಚೀನಾದ ಮಧ್ಯ ನಗರವಾದ ಝಿಂಗ್‌ಝೌನಲ್ಲಿ ದಾರಾಕಾರ ಮಳೆ ಸುರಿಯುತ್ತಿದ್ದು ರಸ್ತೆಗಳು, ಮೆಟ್ರೋ ಸ್ಟೇಷನ್ ಗಳು ಹಾಗೂ ಮನೆಗಳಿಗೆ ಭಾರೀ ಪ್ರಮಾಣದ ನೀರು ನುಗ್ಗಿ ನದಿಗಳಂತಾಗಿವೆ. ಇದರಿಂದಾಗಿ ಝಿಂಗ್‌ಝೌನ 200,000 ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಧಾರಾಕಾರ ಮಳೆಯಿಂದಾಗಿ ಹೆನಾನ್ ಪ್ರಾಂತ್ಯದ ರಾಜಧಾನಿಯಲ್ಲಿ ಭೂಕುಸಿತ ಮತ್ತು ಪ್ರವಾಹ ಉಂಟಾಗಿ ಕನಿಷ್ಠ 25 ಜನರು ಸಾವನ್ನಪ್ಪಿದ್ದಾರೆ.

ಬ್ಲೂಮ್‌ಬರ್ಗ್‌ನ ವರದಿಯ ಪ್ರಕಾರ, ಮಂಗಳವಾರ ಸಂಜೆ 5 ರಿಂದ 24 ರವರೆಗೆ ನಗರವು 18 ಇಂಚುಗಳಷ್ಟು ನೀರು ತುಂಬುವಷ್ಟು ಮಳೆಯಾಗಿದ್ದು, ಸುರಂಗಮಾರ್ಗಗಳನ್ನು ಮುಳುಗಿಸಿದೆ. ಮರಗಳು, ಮನೆಗಳು ನೆಲಕ್ಕಿಚ್ಚಿವೆ. ಕಾರುಗಳು ನೀರಿನಲ್ಲಿ ಆಟಿಕೆಗಳಂತೆ ತೇಲಾಡುವ ದೃಶ್ಯಗಳನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ದುರಂತದಿಂದ ಹೊರಹೊಮ್ಮಿದ ಒಂದು ಭಯಾನಕ ವೀಡಿಯೊದಲ್ಲಿ ಕಾರುಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿರುವುದನ್ನು ತೋರಿಸುತ್ತದೆ. ಚೀನಾದ ರಾಜ್ಯ-ಅಂಗಸಂಸ್ಥೆ ಮಾಧ್ಯಮ ಶಾಂಘೈ ಐ ಹಂಚಿಕೊಂಡಿರುವ ಈ ವೀಡಿಯೊ, ಪ್ರವಾಹದ ರಸ್ತೆಯಲ್ಲಿ ಕಾರುಗಳು ಕಾಗದದ ದೋಣಿಗಳಂತೆ ತೇಲುತ್ತವೆ.

ವಿಶ್ವದ ಅತಿದೊಡ್ಡ ಐಫೋನ್ ಉತ್ಪಾದನಾ ಕೇಂದ್ರದ ನೆಲೆಯಾದ ಝಿಂಗ್‌ಝೌದಿಂದ ಪ್ರವಾಹಕ್ಕೆ ಸಿಲುಕಿದ ರೈಲುಗಳು ಹಾಗೂ ನಿವಾಸಿಗಳ ಫೋಟೋಗಳು ಜೊತೆಗೆ ಮನೆ ಭೈಕುಸಿದತದ ವೀಡಿಯೊಗಳು ವೈರಲ್ ಆಗುತ್ತಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights