ಫ್ಯಾಕ್ಟ್‌ಚೆಕ್: 6000 ರೂ ಮೌಲ್ಯದ ಇಂಧನ ಸಬ್ಸಿಡಿ ಗಿಫ್ಟ್ ನೀಡಲಿದೆಯೇ Indian Oil ಕಾರ್ಪೊರೇಷನ್?

Indian Oil ಕಾರ್ಪೊರೇಷನ್ ಹೆಸರಿನಲ್ಲಿ 6,000 ರೂಪಾಯಿ ಮೌಲ್ಯದ ಇಂಧನ ಸಬ್ಸಿಡಿ ಗಿಫ್ಟ್ ಗೆಲ್ಲುವ ಲಕ್ಕಿ ಡ್ರಾ ಅವಕಾಶ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮದಲ್ಲಿ Indian Oil ಹೆಸರಿನ ವೆಬ್‌ಲಿಂಕ್‌ವೊಂದು ವೈರಲ್ ಆಗುತ್ತಿದೆ. ‘Indian Oil ಕಾರ್ಪೊರೇಷನ್’ ರೂ 6,000 ಮೌಲ್ಯದ ಇಂಧನ ಸಬ್ಸಿಡಿ ಉಡುಗೊರೆಯನ್ನು ನೀಡುತ್ತಿದೆ ಎಂದು ಜಾಹಿರಾತಿನಲ್ಲಿ ಹೇಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೊಣ.

A stamp of fake on an image which claims to provide Indian Oil Fuel Subsidy Gift. The headline reads "Beware of such scams"

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ Indian Oil ಲಕ್ಕಿ ಡ್ರಾ ಎಂದು ಪ್ರತಿಪಾದಿಸಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಕ್ಕಿ ಡ್ರಾದಲ್ಲಿ ರೂ 6,000 ಮೌಲ್ಯದ ಇಂಧನ ಸಬ್ಸಿಡಿ ಉಡುಗೊರೆಯನ್ನು ನೀಡಲಾಗುತ್ತಿದೆಯೇ ಎಂದು ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ ಎಂದು PIB ಫ್ಯಾಕ್ಟ್‌ಚೆಕ್ ತಂಡ ತಮ್ಮ ಟ್ವಿಟರ್‌ನಲ್ಲಿ ಟ್ವೀಟ್‌ಅನ್ನು ಹಂಚಿಕೊಂಡಿದೆ.

ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ತನ್ನ ಫ್ಯಾಕ್ಟ್‌ಚೆಕ್ ವರದಿಯಲ್ಲಿIndian Oil ಹೆಸರಿನಲ್ಲಿ ಲಕ್ಕಿ ಡ್ರಾ ಮೂಲಕ 6000 ಮೌಲ್ಯದ ಇಂಧನ ಸಬ್ಸಿಡಿ ಉಡುಗೊರೆಯನ್ನು ನೀಡಲಾಗುತ್ತಿದೆ ಎಂಬುದು ನಕಲಿ ಮತ್ತು ಮೋಸದಿಂದ ಕೂಡಿದೆ ಎಂದು ಹೇಳಿದೆ. ಇದು Indian Oil ಕಾರ್ಪೊರೇಷನ್ ನ ಅಧಿಕೃತ ಜಾಹಿರಾತಲ್ಲ ಎಂದು ದೃಢಪಡಿಸಿದೆ. ಇಂತಹ ವಂಚನೆಗಳ ಬಗ್ಗೆ ಜನರು ಜಾಗೃತರಾಗುವಂತೆ ಎಚ್ಚರಿಕೆಯನ್ನೂ ನೀಡಿದೆ.

PIB ಫ್ಯಾಕ್ಟ್ ಚೆಕ್ ಟ್ವಿಟರ್ ಮೂಲಕ ಇದನ್ನು ಸುಳ್ಳು ಸುದ್ದಿ ಎಂದು ತಿಳಿಸಿದ್ದು, “Indian Oil ಕಾರ್ಪೊರೇಶನ್‌ನಿಂದ ₹ 6,000 ಮೌಲ್ಯದ ಇಂಧನ ಸಬ್ಸಿಡಿ ಉಡುಗೊರೆಯನ್ನು ಗೆಲ್ಲುವ ಅವಕಾಶ ಎಂಬ ಜಾಹಿರಾತು ಆಕರ್ಷಕವಾಗಿ ಧ್ವನಿಸುತ್ತದೆ ಸರಿ? ಆದರೆ, ಈ ಅದೃಷ್ಟದ ಡ್ರಾ  ನಕಲಿಯಾಗಿದೆ. ಇದು ಜನರನ್ನು ವಂಚಿಸುವ ಉದ್ದೇಶದಿಂದ ಮಾಡಲಾದ ಜಾಹಿರಾತು ಎಂದು PIB ತಿಳಿಸಿದೆ. ವಾಸ್ತವವಾಗಿ ಈ ಜಾಹಿರಾತು Indian Oil ಗೆ ಸಂಬಂಧಿಸಿಲ್ಲ. ಭಾರತ ಸರ್ಕಾರಕ್ಕೆ ಸಂಬಂಧಿಸಿದ ಯಾವುದೇ ಅನುಮಾನಾಸ್ಪದ ಮಾಹಿತಿಯನ್ನು ಪರಿಶೀಲಿಸದೆ ಹಂಚಬೇಡಿ ಎಂದು PIB Fact Check ವಿನಂತಿಸಿದೆ.

ಮೂರು ವರ್ಷದ ಹಿಂದೆ ಇಂಡಿಯನ್ ಆಯಿಲ್‌ಗೆ ಸಂಬಂಧಿಸಿದಂತೆ ಇದೇ ರೀತಿಯ ಸಂದೇಶವೊಂದು ವೈರಲ್ ಆಗಿತ್ತು. ಪೋಸ್ಟ್‌ನಲ್ಲಿ, “ಮುಂದಿನ ದಿನಗಳಲ್ಲಿ ತಾಪಮಾನವು ಹೆಚ್ಚಾಗಲಿದೆ, ಆದ್ದರಿಂದ ನಿಮ್ಮ ವಾಹನದಲ್ಲಿ ಗರಿಷ್ಠ ಮಿತಿಗೆ ಪೆಟ್ರೋಲ್ ತುಂಬಬೇಡಿ. ಇದು ಇಂಧನ ಟ್ಯಾಂಕ್ನಲ್ಲಿ ಸ್ಫೋಟಕ್ಕೆ ಕಾರಣವಾಗಬಹುದು. ದಯವಿಟ್ಟು ನಿಮ್ಮ ವಾಹನದಲ್ಲಿ ಅರ್ಧ ಟ್ಯಾಂಕ್ ಇಂಧನವನ್ನು ತುಂಬಿಸಿ ಮತ್ತು ಗಾಳಿಗೆ ಜಾಗವನ್ನು ಇರಿಸಿ ಎಂಬ ಪೋಸ್ಟ್‌ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

ಇಂತಹ ಸುದ್ದಿಗಳನ್ನು ಕಂಡಾಗ ಗಿಫ್ಟ್‌ ಮತ್ತು ಆಮಿಷಗಳಿಗೆ ಒಳಗಾಗಿ ಹಿಂದೆ ಮುಂದೆ ಪರಿಶೀಲಿಸದೆ ವಯಕ್ತಿಕ ವಿವರ ಮತ್ತು ಬ್ಯಾಂಕ್ ವಿವರಗಳನ್ನು ನೀಡಿ ವಂಚನೆಗೆ ಳಗಾಗಿರುವವರು ಸಾಕಷ್ಟು ಜನ ನಮ್ಮ ನಡುವೆ ಇದ್ದಾರೆ. ಹಾಗಾಗಿ ಇಂತಹ ಜಾಹಿರಾತುಗಳನ್ನು ನಂಬಿ ಮೋಸಹೋಗಬೇಡಿ.

ಕೃಪೆ: PIB

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಈ ಫೋಟೊದಲ್ಲಿ ಇರುವುದು ವಿಶ್ವದ ಅತ್ಯಂತ ಹೆಚ್ಚು ತೂಕದ ಮಗುವಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.