ದಲಿತ ಎಂಬ ಕಾರಣಕ್ಕೆ ಪಂಚಾಯತ್‌ ಸಭೆಯಲ್ಲಿ ಅಧ್ಯಕ್ಷರನ್ನೇ ನೆಲದ ಮೇಲೆ ಕೂರಿಸಿ ಶೋಷಣೆ!

ಗ್ರಾಮ ಪಂಚಾಯತಿ ಸಭೆಯಲ್ಲಿ ಪಂಚಾಯತ್‌ನ ಅಧ್ಯಕ್ಷರು ದಲಿತ ಎಂಬ ಕಾರಣಕ್ಕೆ ನೆಲದಲ್ಲಿ ಕುಳ್ಳಿರಿಸಿ, ಉಳಿದವರು ಕುರ್ಚಿಗಳ ಕುಳಿತು ಶೋಷಣೆ ನಡೆಸಿರುವ ಘಟನೆ ತಮಿಳುನಾಡಿನ ಕಡಲೂರು ಗ್ರಾಮ ಪಮಚಾಯತಿಯಲ್ಲಿ ನಡೆದಿದೆ.

ಕಡಲೂರಿನ ಥರ್ಕುತಿಟ್ಟೈ ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಜೇಶ್ವರಿ ಅವರನ್ನು ಪಂಚಾಯತ್ ಮಂಡಳಿಯ ಸಭೆಗಳಲ್ಲಿ ನೆಲದ ಮೇಲೆ ಕುಳಿತುಕೊಳ್ಳುವಂತೆ ಅಲ್ಲಿನ ಉಪಾಧ್ಯಕ್ಷ ಮೋಹನ್ ರಾಜ್ ಹೇಳಿದ್ದು, ಆಧ್ಯಕ್ಷೆಯಾಗಿದ್ದರೂ ಆಕೆ ನೆಲದ ಮೇಲೆ ಕುಳಿತು ಸಭೆ ನಡೆಸಿದ್ದಾರೆ.

ಥರ್ಕುಟ್ಟಿಟ್ಟೈ ಗ್ರಾಮವು ಸುಮಾರು 500 ಕುಟುಂಬಗಳನ್ನು ಒಳಗೊಂಡಿದೆ. ಅವರಲ್ಲಿ ಸುಮಾರು 100 ಕುಟುಂಬಗಳು ಹೆಚ್ಚಿನ ಜನರು ವನ್ನಿಯಾರ್‌ ಮತ್ತು ಎಸ್ಸಿ ಸಮುದಾಯಕ್ಕೆ ಸೇರಿದವರು. ಪಂಚಾಯಿತಿಯನ್ನು ಎಸ್‌ಸಿ ಸಮುದಾಯಕ್ಕೆ ಕಾಯ್ದಿರಿಸಲಾಗಿದ್ದು, ರಾಜೇಶ್ವರಿ ಅವರು ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.

ಈ ವರ್ಷದ ಜನವರಿಯಲ್ಲಿ ಅವರು ಅಧ್ಯಕ್ಷ ಹುದ್ದೆಗೆ ಆಯ್ಕೆಯಾಗಿದ್ದಾರೆ. ಎಲ್ಲಾ ಸಭೆಗಳಲ್ಲಿ ಅವರು ನೆಲದ ಮೇಲೆ ಕುಳಿತುಕೊಂಡಿದ್ದಾಳೆ ಎಂದು ಅವರು ಆರೋಪಿಸಿದ್ದಾರೆ.

ಎಸ್‌ಸಿ / ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 3(1)(ಆರ್‌) ಅಡಿಯಲ್ಲಿ ಹಿಂದೂ ಉಪಜಾತಿಗೆ ಸೇರಿದ ಮೋಹನ್ ರಾಜ್ ಎಂಬವವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, ಒಬ್ಬ ಪಂಚಾಯತ್ ಕಾರ್ಯದರ್ಶಿಯನ್ನು ಸಹ ಅಮಾನತುಗೊಳಿಸಲಾಗಿದೆ.

ಇತ್ತೀಚೆಗೆ ತಿರುವಳ್ಳೂರಿನಲ್ಲಿ ಗ್ರಾಮ ಪಂಚಾಯತಿಯ ದಲಿತ ಅಧ್ಯಕ್ಷರಿಗೆ ಸ್ವಾತಂತ್ರ್ಯ ದಿನದಂದು ರಾಷ್ಟ್ರಧ್ವಜವನ್ನು ಹಾರಿಸಲು ಅವಕಾಶ ನೀಡಿರಲಿಲ್ಲ.


ಇದನ್ನೂ ಓದಿ: ದಲಿತ ಯುವತಿ ಮೇಲೆ ಅತ್ಯಾಚಾರ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights