ಫ್ಯಾಕ್ಟ್‌ಚೆಕ್: ಬ್ರಿಟನ್ ಪ್ರಧಾನಿ ರಿಷಿ ಸುನಕ್ ತಮ್ಮ ಕಚೇರಿ ಸಿಬ್ಬಂದಿಗೆ ಪೊಂಗಲ್ ಔತಣಕೂಟ ಆಯೋಜಿಸಿದ್ದರೆ?

ಭಾರತದ ಪೊಂಗಲ್ ಹಬ್ಬವನ್ನು ಜಗತ್ತಿನೆಲ್ಲೆಡೆ ಆಚರಿಸುತ್ತಿರುವುದು ವಿಶೇಷ . ಈ ಪೊಂಗಲ್‌ ಹಬ್ಬ ಇಂಗ್ಲೆಂಡ್ ನಲ್ಲಿಯೂ  ಜನಪ್ರಿಯವಾಗಿದೆ.ಅದರಲ್ಲೂ ಭಾರತೀಯ ಮೂಲದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಈಗ ಪೊಂಗಾಲ್ ಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಕಳೆದ ವರ್ಷ ಅಕ್ಟೋಬರ್ 24 ರಂದು ಯುಕೆ ನೂತನ ಪ್ರಧಾನಿಯಾಗಿ ಆಯ್ಕೆಯಾದ ರಿಷಿ ಸುನಕ್ ಅವರು ಭಾರತೀಯ ಮೂಲದ ಬ್ರಿಟನ್ನಿನ 57 ನೇ ಪ್ರಧಾನಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಈಗ ಅಧಿಕಾರ ಸ್ವೀಕರಿಸಿದ ಮೊದಲ ಬಾರಿಗೆ ತಮ್ಮ ಅಧಿಕಾರ ಅವಧಿಯಲ್ಲಿ ಪೊಂಗಲ್ ಹಬ್ಬವನ್ನು ಆಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ತಮ್ಮ ಕಚೇರಿ ಸಿಬ್ಬಂಧಿಗೆ ಭರ್ಜರಿ ಔತಣಕೂಟವನ್ನು ಏರ್ಪಡಿಸುವ ಮೂಲಕ ಭಾರತೀಯ ಸಾಂಪ್ರದಾಯಿಕ ಹಬ್ಬದ ಸೊಬಗನ್ನು ವಿದೇಶಿಗರಿಗೂ ಪರಿಚಯಿಸುವ ಪ್ರಯತ್ನವನ್ನು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

The Indian Express, India Today, Money Control, ಮತ್ತು  Free Press Journal  ವೈರಲ್ ವೀಡಿಯೊದ ಸ್ಟಿಲ್ ಅನ್ನು ಬಳಸಿಕೊಂಡು ಯುಕೆ ಪಿಎಂ ರಿಷಿ ಸುನಕ್ ಪೊಂಗಲ್ ಸಂದರ್ಭದಲ್ಲಿ ಕಚೇರಿ ಸಿಬ್ಬಂದಿಗೆ ಸಾಂಪ್ರದಾಯಿಕ ಔತಣಕೂಟವನ್ನು ಆಯೋಜಿಸಿದ್ದಾರೆ ಎಂದು ವರದಿ ಮಾಡಿದೆ. ಸಾಮಾಜಿಕ ಮಾಧ್ಯಮ ಮತ್ತು ಮುಖ್ಯ ವಾಹಿನಿ ಸುದ್ದಿ ಸಂಸ್ಥೆಗಳು ಪ್ರಸಾರ ಮಾಡಿದ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಬ್ರಿಟನ್ ಫ್ರಧಾನಿ ರಿಷಿ ಸುನಕ್ ತಮ್ಮ ಕಚೇರಿ ಸಿಬ್ಬಂಧಿಗೆ ಪೊಂಗಲ್ ಔತಣಕೂಟ ಆಯೋಜಿಸಿದ್ದರೆ ಎಂದು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಊಟದ ವಿಡಿಯೊ ಯುಕೆಯಲ್ಲಿ ರಿಷಿ ಸುನಕ್ ಆಯೋಜಿಸಿದ ಪೊಂಗಲ್ ಆಚರಣೆಯದ್ದಲ್ಲ ಎಂದು ನ್ಯೂಸ್ ಮೀಟರ್ ವರದಿ ಮಾಡಿದೆ.

ಮತ್ತಷ್ಟು ಮಾಹಿತಿಗಾಗಿ ಗೂಗಲ್ ಸರ್ಚ್ ಮಾಡಿದಾಗ, ತಮಿಳು ಸಂಸ್ಕೃತಿ ವಾಟರ್‌ಲೂ ಫೇಸ್‌ಬುಕ್ ಖಾತೆ ಪ್ರದೇಶವು ಜನವರಿ 15 ರಂದು ಪೋಸ್ಟ್ ಮಾಡಿರುವುದು ನಮಗೆ ಕಂಡುಬಂದಿದೆ. ಶೀರ್ಷಿಕೆಯ ಪ್ರಕಾರ, ವಾಟರ್‌ಲೂ ರಾಜಕಾರಣಿಗಳು, ಪ್ರಾದೇಶಿಕ ಚೇರ್ ಸಿಟಿ ಮೇಯರ್‌ಗಳು, ಪೊಲೀಸ್ ಮುಖ್ಯಸ್ಥರು ಮತ್ತು ಕೌನ್ಸಿಲರ್‌ಗಳು ಭಾಗವಹಿಸಿದ್ದ ತಮಿಳು ಥಾಯ್ ಪೊಂಗಲ್ ಆಚರಣೆಯನ್ನು ವೀಡಿಯೊ ತೋರಿಸುತ್ತದೆ.

ಕಿಚನರ್‌ನ ಮೇಯರ್ ಬೆರ್ರಿ ವ್ರ್ಬನೋವಿಕ್ ಅವರು ಜನವರಿ 16 ರಂದು ಹಲವಾರು ಫೋಟೋಗಳನ್ನು ಟ್ವೀಟ್ ಮಾಡಿದ್ದು,  ಥಾಯ್ ಪೊಂಗಲ್ ಆಚರಿಸುವಾಗ ಸಮುದಾಯದ ಮುಖಂಡರು ಮತ್ತು ಸ್ಥಳೀಯ ತಮಿಳು-ಕೆನಡಿಯನ್ ಸಮುದಾಯದೊಂದಿಗೆ ಅದ್ಭುತ ಸಮಯವನ್ನು ಕಳೆದಿದ್ದೇನೆ ಎಂದು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಪ್ರಸಾರವಾಗಿರುವಂತೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ತಮ್ಮ ಕಚೇರಿ ಸಿಬ್ಬಂಧಿಗಳಿಗೆ ಪೊಂಗಲ್(ಸಂಕ್ರಾಂತಿ) ವಿಶೇಷ ಔತಣ ಕೂಟ ಏರ್ಪಡಿಸಿದ್ದರು ಎಂಬುದು ಸುಳ್ಳು. ರಿಷಿ ಸುನಕ್ ತಮಿಳು ಸಾಂಸ್ಕೃತಿಕ ಸಂಘದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ತಮಿಳು ಅಸೋಸಿಯೇಷನ್ ಆಫ್ ವಾಟರ್‌ಲೂ ಸಾಂಸ್ಕೃತಿಕ ಸಂಘ ನಗರ ಮೇಯರ್ ಮತ್ತು ಪೊಲೀಸರಿಗೆ ಆಯೋಜಿಸಿದ ಪೊಂಗಲ್ ಔತಣಕೂಟವನ್ನು ಸುಳ್ಳು ಪ್ರತಿಪಾದನೆಯೊಂದಿಗೆ ರಿಷಿ ಸುನಕ್ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ನ್ಯೂಸ್ ಮೀಟರ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಈ ಫೋಟೊದಲ್ಲಿ ಇರುವುದು ವಿಶ್ವದ ಅತ್ಯಂತ ಹೆಚ್ಚು ತೂಕದ ಮಗುವಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights