ಫ್ಯಾಕ್ಟ್‌ಚೆಕ್: ಈ ಫೋಟೊದಲ್ಲಿ ಇರುವುದು ವಿಶ್ವದ ಅತ್ಯಂತ ಹೆಚ್ಚು ತೂಕದ ಮಗುವಲ್ಲ
ವೈದ್ಯರೊಬ್ಬರು ಅತೀ ಹೆಚ್ಚಿನ ತೂಕದೊಂದಿಗೆ ಜನಿಸಿರುವ ನವಜಾತ ಶಿಶುವನ್ನು ಹಿಡಿದಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸ್ವಾಭಾವಿಕವಾಗಿ ಜನಿಸಿದ ಅತ್ಯಂತ ಭಾರವಾದ ಮಗು ಮತ್ತು 8.6 ಕೆ.ಜಿ ತೂಕವನ್ನು ಹೊಂದಿದೆ ಮತ್ತು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆಯುತ್ತಿದೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.
Biggest Baby born by Natural Birth 8.6 KG or 18.9 pounds, Guinness Book of world Record.😱 pic.twitter.com/pSbExOVFqS
— Pacik Kentang (@pacik_kentang) January 13, 2023
8.6 ಕೆಜಿ ತೂಕದೊಂದಿಗೆ ಆಗತಾನೆ ಜನಿಸಿದ ಮಗು. ವಿಶ್ವದ ಅತೀ ಹೆಚ್ಚು ತೂಕ ಹೊಂದಿವ ಮೂಲಕ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸೇರಿದೆ ಎಂದು ಪ್ರತಿಪಾದಸಿ ನವಜಾತ ಶಿಶುವಿನ ಫೋಟೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ವೈರಲ್ ಆಗಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್:
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಹೆಚ್ಚು ತೂಕದ ನವಜಾತ ಶಿಶು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸೇರಿದೆ ಎಂಬ ಪೋಸ್ಟ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ದಾಖಲೆಯನ್ನು ಸರ್ಚ್ ಮಾಡಲಾಗಿದೆ, ವೆಬ್‌ಸೈಟ್ ಲೇಖನದ ಪ್ರಕಾರ, 1879 ರಲ್ಲಿ ಜನಿಸಿದ ಗಂಡು ಮಗು ವಿಶ್ವದ ಅತ್ಯಂತ ತೂಕದ ಮಗುವಿನ ದಾಖಲೆಯನ್ನು ಹೊಂದಿದೆ. ‘ದೈತ್ಯ ಅನ್ನಾ ಬೇಟ್ಸ್ (ನೀ ಸ್ವಾನ್) (ಕೆನಡಾ, ಬಿ. 6 ಆಗಸ್ಟ್ 1846; ಡಿ. 5 ಆಗಸ್ಟ್ 1888), ಅವರು 241.3 ಸೆಂ (7 ಅಡಿ 11 ಇಂಚು) ಅಳತೆ ಮಾಡಿದರು, 9.98 ಕೆಜಿ (22 ಪೌಂಡ್) ತೂಕದ ಮತ್ತು 71.12 ಸೆಂಟಿಮೀಟರ್‌ಗಳ ಅಳತೆಯ ಗಂಡು ಮಗುವಿಗೆ ಜನ್ಮ ನೀಡಿದರು ) USA, ಓಹಿಯೋದ ಸೆವಿಲ್ಲೆಯಲ್ಲಿ 19 ಜನವರಿ 1879 ರಂದು ಜನಿಸಿದ್ದ ಗಂಡು ಮಗು 11 ಗಂಟೆಗಳ ನಂತರ ಮರಣಹೊಂದಿತ್ತು.
2009ರಲ್ಲಿ ಇಂಡೋನೇಷ್ಯಾದಲ್ಲಿ 8.7 ಕೆಜಿ ಮಗುವಿನ ಜನನದ ಬಗ್ಗೆ ವರದಿಗಳು ಲಭ್ಯವಾಗಿದ್ದು, ಕೆಲವು ಸುದ್ದಿ ಲೇಖನಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಇದು ವೈರಲ್ ಫೋಟೋದಲ್ಲಿರುವ ಮಗುವಿನ ತೂಕಕ್ಕೆ ಬಹುತೇಕ ಹತ್ತಿರದಲ್ಲಿದೆ ಆದರೆ ವೈರಲ್ ಫೋಟೋದಲ್ಲಿರುವ ಮಗು ಅದಲ್ಲ ಎಂದು ತಿಳಿದು ಬಂದಿದೆ.
ವೈರಲ್ ಫೋಟೊದಲ್ಲಿರುವ ಮಗುವಿನ ಬಗ್ಗೆ ಏನಾದರೂ ಮಾಹಿತಿ ಇದೆಯೇ? ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದೆಯೇ ಎಂದು ಮತ್ತಷ್ಟು ಪರಿಶೀಲಿಸಿದಾಗ ಅಂತಹ ಯಾವುದೇ ವರದಿಗಳು ಲಭ್ಯವಾಗಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಶ್ವದಲ್ಲಿಯೇ ಅತೀ ಹೆಚ್ಚು ತೂಕದ ಮಗು ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಮೂರು ಕಣ್ಣಿನ ಮಗು ಜನಿಸಿದ್ದು ನಿಜವೇ?