ಫ್ಯಾಕ್ಟ್‌ಚೆಕ್: ಮೂರು ಕಣ್ಣಿನ ಮಗು ಜನಿಸಿದ್ದು ನಿಜವೇ?

ಸೌದಿ ಅರೇಬಿಯಾದಲ್ಲಿ ಮೂರು ಕಣ್ಣುಗಳ ಮಗುವೊಂದು ಜನಿಸಿದ್ದು, ಇದು ಭಗವಂತನ ಅದ್ಭುತ ಸೃಷ್ಟಿ. ಶಿವನೇ ಮಗುವಿನ ರೂಪದಲ್ಲಿ ಜನಿಸಿದ್ದಾನೆ. ಸುಂದರ ಮಗು ನಿಜವಾಗಿಯೂ ಶಿವನೇ ಆಗಿದ್ದಾನೆ. ಸರ್ವಶಕ್ತನು ಅವನಿಗೆ ಉತ್ತಮ ಆರೋಗ್ಯದೊಂದಿಗೆ ದೀರ್ಘಾಯುಷ್ಯವನ್ನು ನೀಡಲಿ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ಇದೇ ವಿಡಿಯೋವನ್ನು ಇನ್ನು ಕೆಲವರು ಜರ್ಮನಿಯಲ್ಲಿ ಮೂರು ಕಣ್ಣುಗಳೊಂದಿಗೆ ಜನಿಸಿದ ಮಗು ಎಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಸಾಮಾಜಿಕ ಮಾಧ್ಯಮ ಬಳಕೆದಾರರು ಇಂತಹದೊಂದು ಮೂರು ಕಣ್ಣನ್ನು ಹೊಂದಿರುವ ಮಗು ನಿಜವಾಗಿಯೂ ಜನಿಸಿದಿಯೇ ಎಂದು ತಿಳಿಸುವಂತೆ ವಾಟ್ಸಾಪ್‌ ಮೂಲಕ ವಿನಂತಿಸಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊ ಪೋಸ್ಟ್‌ನಲ್ಲಿ ಮೂರು ಕಣ್ಣುಗಳೊಂದಿಗೆ ಜನಿಸಿದ ಮಗುವಿನ ಬಗ್ಗೆ ಸರ್ಚ್ ಮಾಡಿದಾಗ, ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅಂತಹ ಮೂರು ಕಣ್ಣಿನ ಮಗು ನಿಜವಾಗಿಯೂ ಜನಿಸಿದ್ದೇ ಆಗಿದ್ದರೆ, ಮಗುವಿನ ಹೆಚ್ಚಿನ ವೀಡಿಯೊಗಳು ಮತ್ತು ಚಿತ್ರಗಳು ಅಂತರ್ಜಾಲದಲ್ಲಿ ಕಂಡುಬರುತ್ತಿದ್ದವು, ಆದರೆ ಅಂತಹ ಯಾವುದೇ ವೀಡಿಯೊ ಅಥವಾ ಫೋಟೋ ಕಂಡುಬಂದಿಲ್ಲ. ಅಲ್ಲದೆ, ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಪ್ರತಿ ಫ್ರೇಮ್‌ನಲ್ಲಿ ಎಡ ಮತ್ತು ಹಣೆಯ ಮೇಲಿನ ಕಣ್ಣಿನಲ್ಲಿ ಒಂದೇ ರೀತಿ ಚಲನೆಯನ್ನು ಕಾಣಬಹುದು.

ಎಡಿಟಿಂಗ್ ಸಾಫ್ಟ್‌ವೇರ್ ಬಳಸಿ, ಮಗುವಿನ ಎಡಗಣ್ಣನ್ನು ನಕಲಿಸಲಾಗುತ್ತದೆ ಮತ್ತು ಹಣೆಯ ಮೇಲೆ ಹೆಚ್ಚುವರಿ ಕಣ್ಣಿನಂತೆ ಇರಿಸಲಾಗುತ್ತದೆ. ‘ಆಫ್ಟರ್ ಎಫೆಕ್ಟ್ಸ್’ ಸಾಫ್ಟ್‌ವೇರ್ ಬಳಸಿ, ಅದೇ ಮಗುವಿಗೆ ಒಂದು ವೀಡಿಯೊದಲ್ಲಿ ಎರಡು ಕಣ್ಣುಗಳು, ಇನ್ನೊಂದರಲ್ಲಿ ನಾಲ್ಕು ಕಣ್ಣುಗಳು ಕಾಣುವಂತೆ ಎಡಿಟ್ ಮಾಡಿರುವ ವಿಡಿಯೋವನ್ನು ಕಾಣಬಹುದು.  ‘ಆಫ್ಟರ್ ಎಫೆಕ್ಟ್ಸ್’ ಸಾಫ್ಟ್‌ವೇರ್‌ನಲ್ಲಿ ಎಡಿಟಿಂಗ್ ತಂತ್ರಾಂಶದ ಸಹಾಯದಿಂದ ಎಷ್ಟು ಕಣ್ಣುಗಳನ್ನು ಬೇಕಾದರೂ ಇಡಬಹುದು.

ಅಲ್ಲದೆ, 9 ಜುಲೈ 2020 ರಂದು ಚೀನೀ ಬಳಕೆದಾರರಿಂದ ಟ್ವಿಟರ್‌ನಲ್ಲಿ ವೀಡಿಯೊದ ಆರಂಭಿಕ ಅಪ್‌ಲೋಡ್‌ಗಳಲ್ಲಿ ಒಂದಾಗಿದೆ ಎಂದು ಕಂಡುಬಂದಿದೆ. ಅದೇ ಬಳಕೆದಾರರು ಡೈನೋಸಾರ್‌ನ ಮತ್ತೊಂದು ಎಡಿಟ್ ಮಾಡಿದ ವೀಡಿಯೊವನ್ನು ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಕಂಡುಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಎಡಿಟ್ ಮಾಡಿದ ವೀಡಿಯೊವನ್ನು ‘ಮೂರು ಕಣ್ಣುಗಳೊಂದಿಗೆ ಜನಿಸಿದ ಮಗುವಿನ’ ವೀಡಿಯೊ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಪಾಕ್‌ನಲ್ಲಿ ಗೋಧಿ ಹಿಟ್ಟಿಗಾಗಿ ಕಿತ್ತಾಡುತ್ತಿರುವ ದೃಶ್ಯಗಳು ಇತ್ತೀಚಿನದಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.