ಇವರು ಕಳ್ಳರನ್ನ ,ಕದೀಮರನ್ನ ಹಿಡಿಯೋಕೂ ಸೈ.. ಕಷ್ಟದಲ್ಲಿರುವ ಜನರ ರಕ್ಷಣೆಗೂ ಸೈ…

ಪೊಲೀಸರು ಎಂದ್ರೆ ಮಾರುದ್ದ ಓಡಿ ಹೋಗುವವರೆ ಜನ್ರೆ ಜಾಸ್ತಿ.. ಅವರನ್ನು ಕಂಡರೆ ಸಾಕು ಭಯ ಪಡುತ್ತಾರೆ. ಅಂತರದಲ್ಲಿ ನಸುಕಿನ ಜಾವ ೩ ಗಂಟೆಯ ನಂತ್ರ ಪೊಲೀಸರಿಗೆ ಕಾಲ್ ಮಾಡಿ, ಅವರ ಸಹಾಯ ವಾಣಿ ಕರೆ ಮಾಡಿ, ತುಂಬು ಗರ್ಭಿಣಿ ಮಹಿಳೆಯ ಪ್ರಾಣವನ್ನು ರಕ್ಷಣೆ ಮಾಡಿಕೊಂಡಿದ್ದಾರೆ. ಸಮಯ ಸರಿಯಾದ ಬರಬೇಕಿದ ೧೦೮ ಅಂಬ್ಯುಲೆನ್ಸ್ ಮಾತ್ರ ಬಂದಿಲ್ಲ.. ಹೀಗಾಗಿ ಅಂಬ್ಯುಲೆನ್ಸ್ ಸೇವೆ ಒದಗಿಸದ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ತುಂಬು ಗರ್ಭಿಣಿಯ ಪ್ರಾಣ ರಕ್ಷಣೆ ಮಾಡಿ ಮಾನವೀಯ ಮೆರೆದ ಪೋಲಿಸ್ ಇಲಾಖೆಗೆ ಕುಟುಂಬಸ್ಥರ ಕೃತಜ್ಞತೆ ಸಲ್ಲಿಸಿದ್ದಾರೆ.

ರಾತ್ರೋರಾತ್ರಿ ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ ಪೊಲೀಸರು. ಆಂಬ್ಯಲೆನ್ಸ್ ಸಿಗದೇ ಪರದಾಡಿದ ತುಂಬು ಗರ್ಭೀಣಿ ಮಹಿಳೆ. ಪೊಲೀಸ ಇಲಾಖೆಯ ಮಹಿಳಾ ರಕ್ಷಣೆ ಸಹಾಯ ವಾಣಿಗೆ ಕರೆ ಮಾಡಿದ ಪತಿರಾಯ. ಹೌದು.. ಇಂತಹದೊಂದು ಮಾನವೀಯಗೆ ಸಾಕ್ಷಿಯಾಗಿದ್ದು ಗದಗ ಪೋಲಿಸ್ ಇಲಾಖೆ.. ಗದಗ- ಬೆಟಗೇರಿಯ ಕಬಾಡಿ ಓಣಿಯ ಜ್ಯೋತಿ ಎನ್ನುವ ಮಹಿಳೆ ಹೆರಿಗೆ ನೋವಿನಿಂದ ಬಳಲುತ್ತಿದ್ದಳ್ಳು. ಅದು ನಸುಕಿನ ಜಾವಾ 3 ಗಂಟೆಯ ಸಮಯ, ಪತಿ ರಾಘವೇಂದ್ರ ಆಂಬ್ಯಲೆನ್ಸ್ ಹಾಗೂ ಖಾಸಗಿ ವಾಹಗಳಿಗೆ ಸಮರ್ಪಕಿಸಿದ್ದಾನೆ.

ಆದ್ರೆ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಗದಗ ಜಿಲ್ಲೆಯ ಪೋಲಿಸ್ ಇಲಾಖೆಯ ಹೊಸದಾಗಿ ಆರಂಭಿಸಿದ ಮಹಿಳಾ ರಕ್ಷಣಾ ಸಹಾಯವಾಣಿಗೆ ಕರೆ ಮಾಡಿದ್ದಾನೆ. ಆಗ ಕಂಟ್ರೋಲ್ ರೂಂ ಸಿಬ್ಬಂದಿಗಳು ಬೆಟಗೇರಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಆಗ ಬೆಟಗೇರಿ ಪೊಲೀಸ ಠಾಣೆಯ ಸಹಾಯ ವಾಣಿ ಕೇಂದ್ರದಿಂದ ಬಿಟ್ ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳು ತುಂಬ ಗರ್ಭಿಣಿ ಮಹಿಳೆಯನ್ನು ಪೊಲೀಸ ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೀಗಾಗಿ ನಾನು ಪೊಲೀಸರಿಗೆ ಧನ್ಯವಾದ ಹೇಳುತ್ತೇನೆ ಅಂತಾರೆ ಗರ್ಭಿಣಿ ಮಹಿಳೆಯ ಪತಿ ರಾಘವೇಂದ್ರ.

ಕಂಟ್ರೋಲ್ ರೂಂ ನಿಂದ ಕರೆ ಬಂದ್ ಕೂಡಲೇ ಬಿಟ್ ನಲ್ಲಿ‌ ಕೆಲಸ ಮಾಡುತ್ತಿದ್ದ ಮುತ್ತು ರೆಡ್ಡಿ ಹಾಗೂ ದಶರಥ ಮಾದರ ಎನ್ನುವ ಬೆಟಗೇರಿ ಪೊಲೀಸ ಸಿಬ್ಬಂದಿಗಳು, ಗರ್ಭಿಣಿ ಮಹಿಳೆಯ ಮನೆಗೆ ತೆರಳಿ, ಅವಳನ್ನು ಪೊಲೀಸ್ ವಾಹನದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಬೆಳಗಿನ ಜಾವ ೩ ಗಂಟೆಯ ನಂತ್ರ ಆಸ್ಪತ್ರೆಗೆ ಕರಿದುಕೊಂಡು ಹೋದ ನಂತ್ರ ನಾರ್ಮಲ್ ಹೆರಿಗೆಯಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಸದ್ಯ ಜ್ಯೋತಿ ಹಾಗೂ ಜನ್ಮ ನೀಡಿದ ಗಂಡು ಮಗು ಸಹ ಆರೋಗ್ಯವಾಗಿದ್ದಾರೆ.

ಇನ್ನು ಎರಡು ಜೀವಗಳ ಪ್ರಾಣ ರಕ್ಷಣೆ ಮಾಡಿದ ಪೋಲೀಸ್ ಪೇದೆಗಳಿಗೆ ನಾಡಿನಾದ್ಯಂತ ಕೃತಜ್ಞತೆಗಳು ಮಹಾಪೂರ ಹರಿದು ಬರುತ್ತಿದೆ. ಹೀಗಾಗಿ ಪೇದೆಗಳ ಕಾರ್ಯಕ್ಕೆ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ್ ಜೋಶಿ ಸಿಬ್ಬಂದಿಗಳಿಗೆ ಬಹುಮಾನ ಘೋಷಣೆ ಮಾಡಿದ್ದು. ಮಹಿಳಾ ರಕ್ಷಣಾ ಸಹಾಯ ವಾಣಿ ಮಾಸ್ಟರ್ ಪ್ಲಾನ್ ಗದಗನಲ್ಲಿ ಫುಲ್ ಸೆಕ್ಸಸ್ ಆಗಿದೆ. ಅಷ್ಟೆ ಅಲ್ದೇ ತುಂಬು ಗರ್ಭಿಣಿಯ ರಕ್ಷಣೆ ಮಾಡಿದ ಪೋಲಿಸ್ ಪೇದೆ ಹಾಗೂ ಎಸ್ಪಿ ಶ್ರೀನಾಥ್ ಜೋಶಿ ನ್ಯೂಸ್ ೧೮ ಕನ್ನಡ ಜೊತೆಗೆ ಹಂಚಿಕೊಂಡಿದ್ದಾರೆ.

ಪೊಲೀಸರ ಮಾನವೀಯಗೆ ತಾಯಿ ಹಾಗೂ ಗಂಡು ಮಗು ಆರೋಗ್ಯವಾಗಿದ್ದಾರೆ. ಹೆರಿಗೆಯಾದ ಪೊಲೀಸರ ಮಾನವೀಯತೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಗದಗ ಜಿಲ್ಲೆಯ ಪೊಲೀಸರು‌ ಜನ‌ ಸ್ನೇಹಿಯಾಗಿ ಕೆಲಸ ಮಾಡುತ್ತಿದ್ದಾರೆ..

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights