ಜಾರ್ಖಂಡ್: ಬುಡಕಟ್ಟು ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದೆ ಎಸ್‌ಐಎಲ್ ಉದ್ಯೋಗಿ ಸ್ಥಾಪಿಸಿದ ಸಣ್ಣ ಶಾಲೆ!

ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (SIL) ನ ನಾಲ್ಕನೇ ದರ್ಜೆಯ ಉದ್ಯೋಗಿಯೊಬ್ಬರು ಪ್ರಾಥಮಿಕ ಶಾಲೆಯನ್ನು ನಡೆಸುತ್ತಿದ್ದಾರೆ. ವಿಶೇಷವಾಗಿ ಆ ಶಾಲೆ ಬುಡಕಟ್ಟು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದು, ಆ ಶಾಲೆಯಲ್ಲಿ 35 ಮಕ್ಕಳು ದಾಖಲಾಗಿದ್ದಾರೆ. ಜಾರ್ಖಂಡ್‌ನ ಚೈಬಾಸಾದ ಸರಂಡಾ ಕಾಡುಗಳ ಮಧ್ಯೆ ಇರುವ ಆದಿವಾಸಿ ಹಳ್ಳಿಗಳಲ್ಲಿನ ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸುವುದು ಅವರ ಉದ್ದೇಶವಾಗಿದೆ.

ಸಂತೋಷ್ ಸಿಂಗ್ ಪಾಂಡ ಎಂಬುವವರು ತಮ್ಮ ತಂದೆ ನಿರ್ಮಿಸಿದ್ದ ಮನೆಯಲ್ಲಿ ತಮ್ಮ ‘ಶಾಲೆ’ ಸ್ಥಾಪಿಸಿದ್ದಾರೆ. ಪಕ್ಕದ ಹಳ್ಳಿಗಳಲ್ಲಿರುವ ಮಕ್ಕಳನ್ನು ಶಾಲೆಯು ಸೆಳೆಯುತ್ತಿದೆ. ಈ ಪ್ರದೇಶದಲ್ಲಿ ಹುಟ್ಟಿ ಬೆಳೆದ ಮಕ್ಕಳ ಜೀವನವನ್ನು ಸೂಕ್ಷ್ಮವಾಗಿ ಗಮನಿಸಿದ ಅವರು ಆ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಮಾರ್ಗದರ್ಶನದ ಕೊರತೆಯಿದೆ. ಈ ಮಕ್ಕಳು ಕಾಡಿನಲ್ಲಿ ತಮ್ಮ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಬೆಳದ ನಂತರ ಅವರು ಶಾಲೆಗೆ ಹೋಗಲು ಹಿಂಜರಿಯುತ್ತಾರೆ ಎಂದು ಕಂಡುಕೊಂಡಿದ್ದು, ಅವರನ್ನು ಕಲಿಕೆಗೆ ಪ್ರರೇಪಿಸಲು ಶಾಲೆಯನ್ನು ಆರಂಭಿಸಿದ್ದಾರೆ.

ತಮ್ಮ ಶಾಲೆಯು ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಪ್ರೇರೇಪಿಸುತ್ತದೆ ಎಂದು ಅವರು ನಂಬುತ್ತಾರೆ. ಸಂತೋಷ್ ಅವರು ಇಂಗ್ಲಿಷ್ ಮಾಧ್ಯಮ ಶಾಲೆಯಾದ ವಿಕಾಸ್ ನರ್ಸರಿ ಶಾಲೆಯ ಜೊತೆ ಸೇರಿ ತಮ್ಮ ಕೆಲಸವನ್ನು ಪ್ರಾರಂಭಿಸಿದರು. ಕೆಲವು ವರ್ಷಗಳ ಹಿಂದೆ ಅವರ ಕುಟುಂಬವು ತೊರೆದು ಹೋಗಿದ್ದ ಮನೆಯನ್ನು ತಮ್ಮ ಶಾಲೆಗಾಗಿ ಬಳಸಿಕೊಂಡರು. ಅವರ ಪತ್ನಿ ಮತ್ತು ಇನ್ನಿಬ್ಬರು ಮಹಿಳಾ ಸ್ವಯಂಸೇವಕರು 20 ಮಕ್ಕಳಿಗೆ ಶಿಕ್ಷಣ ಕಲಿಸಲು ಪ್ರಾರಂಭಿಸಿದರು.

“ಹೆಚ್ಚಿನ ಸಂಖ್ಯೆಯಲ್ಲಿ ಅನಕ್ಷರಸ್ಥರಾಗಿರುವ ಪೋಷಕರನ್ನು ಮನವೊಲಿಸಲು ನಾವು ಬಹಳ ಪ್ರಯತ್ನಗಳನ್ನು ಮಾಡಬೇಕಾಗಿತ್ತು. ಅವರ ಮಕ್ಕಳನ್ನು ನಮ್ಮ ಶಾಲೆಗೆ ಉಚಿತವಾಗಿ ಸೇರಿಸಿಕೊಳ್ಳುತ್ತೇವೆ. ಉತ್ತಮ ಶಿಕ್ಷಣ ಕೊಡಿಸುತ್ತೇವೆ ಎಂದು ಮನವೊಲಿಸಿದೆವು” ಎಂದು ಸಂತೋಷ್ ಹೇಳುತ್ತಾರೆ.

2017 ರಲ್ಲಿ 20 ಮಕ್ಕಳ ದಾಖಲಾತಿಯೊಂದಿಗೆ ಆರಂಭವಾದ ಈ  ಶಾಲೆಯಲ್ಲಿ ಈಗ 35 ವಿದ್ಯಾರ್ಥಿಗಳಿದ್ದಾರೆ. ಲಾಕ್ ಡೌನ್ ಸಮಯದಲ್ಲಿ, ಅವರು ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಅನುವು ಮಾಡಿಕೊಡುವ ಸ್ಮಾರ್ಟ್ ಫೋನ್‌ಗಳನ್ನು ಹೊಂದಿಲ್ಲ. ಹೀಗಾಗಿ ನಾವು ಇತರ ಖಾಸಗಿ ಮತ್ತು ಸರ್ಕಾರಿ ಶಾಲೆಗಳಿಗಿಂತ ಭಿನ್ನವಾಗಿ ಮಕ್ಕಳ ಮನೆ ಬಾಗಿಲಿಗೆ ಅಧ್ಯಯನ ಸಾಮಗ್ರಿಗಳನ್ನು ಒದಗಿಸಿದೆವು”ಎಂದು ಸಂತೋಷ್ ತಿಳಿಸಿದ್ದಾರೆ.

ಸರಂಡಾ ಕಾಡುಗಳ ಎಲ್ಲಾ ಭಾಗಗಳಲ್ಲಿ ಅಂತಹ ಶಾಲೆಗಳನ್ನು ತೆರೆಯಲು ಸಂತೋಷ್‌ ಬಯಸುತ್ತಾರೆ. ಇದರಿಂದಾಗಿ ಅಲ್ಲಿ ವಾಸಿಸುವ ಜನರು ತಮ್ಮ ಹಿಂದುಳಿದಿರುವಿಕೆಯಿಂದ ಹೊರಬರುತ್ತಾರೆ. ಕಾಡುಗಳಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಸಾಕಷ್ಟು ಅರಿವು ಮೂಡಿಸಲು ಅವರು ಬಯಸುತ್ತಾರೆ. ಇದರಿಂದ ಅವರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ಪ್ರಾರಂಭಿಸುತ್ತಾರೆ ಎಂದು ಸಂತೋಷ್‌ ಹೇಳುತ್ತಾರೆ.

ಅವರೊಂದಿಗೆ ಕೆಲಸ ಮಾಡುವ ಸ್ವಯಂಸೇವಕರಲ್ಲಿ ಒಬ್ಬರಾದ ಭಾರತಿ ಬರುವಾ ಅವರು ವಿಜ್ಞಾನ ಪದವೀಧರರಾಗಿದ್ದು, ಅವರ ಮನೆಯಲ್ಲಿ ಉನ್ನತ ವರ್ಗದ ವಿದ್ಯಾರ್ಥಿಗಳಿಗೆ ಬೋಧನೆ ನೀಡುತ್ತಾರೆ.

ಇಲ್ಲಿನ ಜನರು ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದಿಲ್ಲ ಮತ್ತು ಗುರಿಯಿಲ್ಲದೆ ಕಾಡುಗಳಲ್ಲಿ ಸುತ್ತಾಡುತ್ತಿರುವುದು ನಿಜಕ್ಕೂ ತುಂಬಾ ದುಃಖದ ಸಂಗತಿ. ಅದು ಅವರ ಹಿಂದುಳಿದಿರುವಿಕೆಗೆ ಪ್ರಾಥಮಿಕ ಕಾರಣವಾಗಿದೆ ”ಎಂದು ಬರುವಾ ಹೇಳುತ್ತಾರೆ.

ಶಾಲೆಯು ನೋಟ್‌ಬುಕ್‌ಗಳು, ಸಮವಸ್ತ್ರ ಮತ್ತು ಶಾಲಾ ಚೀಲಗಳನ್ನು ಉಚಿತವಾಗಿ ನೀಡುತ್ತದೆ. ಶಾಲೆಯನ್ನು ನಡೆಸಲು ಅವರಿಗೆ ಹೆಚ್ಚಿನ ಹಣದ ಅಗತ್ಯವಿಲ್ಲ. ಏಕೆಂದರೆ ಅವರು ಶಿಕ್ಷಕರಿಗೆ ಸಂಬಳವನ್ನು ಪಾವತಿಸಬೇಕಾಗಿಲ್ಲ. ಕಿರಿಬುರಿನಲ್ಲಿ ಕಬ್ಬಿಣದ ಅದಿರು ಗಣಿಗಳಲ್ಲಿ ಕೆಲಸ ಮಾಡುವ ಸ್ಥಳೀಯ ಉದ್ಯೋಗಿಗಳಿಂದ ದತ್ತಿ ಮೂಲಕ ಇತರ ಅವಶ್ಯಕತೆಗಳನ್ನು ಪೂರೈಸಲಾಗುತ್ತದೆ; ಆ ಉದ್ಯೋಗಿಗಳಲ್ಲಿ ಕೆಲವರು ನೋಟ್‌ಬುಕ್‌ಗಳನ್ನು ದಾನ ಮಾಡುತ್ತಾರೆ, ಇತರರು ಶಾಲಾ ಸಮವಸ್ತ್ರವನ್ನು ನೀಡುತ್ತಾರೆ ಮತ್ತು ಇನ್ನೂ ಅನೇಕರು ಶಾಲಾ ಬ್ಯಾಗ್‌ಗಳಿಗೆ ಹಣ ನೀಡುತ್ತಾರೆ ಎಂದು ಸಂತೋಷ್ ಹೇಳುತ್ತಾರೆ.

ಶಿಕ್ಷಕರು ಕೆಲಸಕ್ಕಾಗಿ ಸ್ವಯಂಪ್ರೇರಣೆಯಿಂದ ಮುಂದೆ ಬಂದಿದ್ದಾರೆ. ಕೆಲವೊಮ್ಮೆ, ನಾನು ಸ್ವಲ್ಪ ಹಣವನ್ನು ಸಹ ಹಾಕಬೇಕಾಗಿದೆ. ತಮ್ಮ ಉದ್ಯೋಗದ ನಂತರ ಉಳಿಯುವ ಸಮಯದ ಹೆಚ್ಚು ಭಾಗವನ್ನು ಅವರು ಶಾಲೆಗಾಗಿ ಮೀಸಲಿಟ್ಟಿದ್ದೇನೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ರೈತ ಹೋರಾಟಕ್ಕೆ ಆರು ತಿಂಗಳು: ಮೇ 26ರಂದು ದೇಶಾದ್ಯಂತ ಕಪ್ಪು ದಿನ ಆಚರಣೆಗೆ ರೈತರ ಕರೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights