ಪೋಟೋ ವೈರಲ್: ಅಕ್ಕ-ತಂಗಿ ಇಬ್ಬರನ್ನೂ ಮದುವೆಯಾದ ಯುವಕ!

ಯುವಕನೊಬ್ಬ ಅಕ್ಕ-ತಂಗಿ ಇಬ್ಬರನ್ನೂ ಮದುವೆಯಾಗಿರುವ ಫೊಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಹಲವರು ಈ ಆ ಫೋಟೊವನ್ನು ಹಂಚಿಕೊಂಡು ಹಾಸ್ಯ ಮಾಡುತ್ತಿದ್ದಾರೆ. ಆದರೆ, ಆತ ಬಲವಾದ ಕಾರಣದಿಂದಾಗಿ ಇಬ್ಬರನ್ನೂ ಒಂದೇ ಮಂಟಪದಲ್ಲಿ ವಿವಾಹವಾಗಿದ್ದಾನೆ ಎಂದು ನಂತರದಲ್ಲಿ ತಿಳಿದು ಬಂದಿದೆ.

ಕೋಲಾರ ಜಿಲ್ಲೆಯ ಮುಳುಬಾಗಿಲು ತಾಲೂಕಿನ ವೇಗಮಡಗು ಗ್ರಾಮದಲ್ಲಿ ಉಮಾಪತಿ ಎಂಬಾತ ಅಕ್ಕ-ತಂಗಿಯರಾದ ಸುಪ್ರಿಯ ಮತ್ತು ಲಲಿತ ಎಂಬ ಯುವತಿಯರನ್ನು ಮೇ 7 ರಂದು ವಿವಾಹವಾಗಿದ್ದಾನೆ.

ವಿವಾದ ಯುವತಿಯರ ತಾಯಂದಿರಾದ ರಾಣೆಮ್ಮ ಮತ್ತು ಸುಬ್ಬಮ್ಮ ಅವರು ಉಮಾಪತಿ ಅವರ ಸೋದರಿಯರು. ಹೀಗಾಗಿ ಉಮಾಪತಿ ಅವರು ಯುವತಿಯರಿಗೆ ಸಂಬಂಧದಲ್ಲಿ ಸೋದರ ಮಾವನಾಗಬೇಕು. ಆ ಇಬ್ಬರು ಯುವತಿಯರ ಪೈಕಿ ಸುಪ್ರಿಯಾ ಎಂಬುವವರಿಗೆ ಮಾತು ಬಾರದು ಮತ್ತು ಕಿವಿ ಕೇಳುವುದಿಲ್ಲ. ಹೀಗಾಗಿ ಆಕೆಯನ್ನು ಬೇರಾವ ವರನೂ ಮದುವೆಯಾಗಲು ಮುಂದೆ ಬರುವುದಿಲ್ಲ ಎಂದು ಲಲಿತಾ ಭಾವಿಸಿದ್ದಳು.

ಹೀಗಾಗಿ ತನ್ನ ಅಕ್ಕನನ್ನೂ ಮದುವೆಯಾದರೆ ಮಾತ್ರ ತಾನು ಮದುವೆಯಾಗುವುದಾಗಿ ಲಲಿತಾ ಪಟ್ಟು ಹಿಡಿದಿದ್ದಾಳೆ. ಈ ಕಾರಣದಿಂದಾಗಿ ಉಮಾಪತಿ ಆ ಇಬ್ಬರೂ ಅಕ್ಕ-ತಂಗಿಯರನ್ನು ವಿವಾಹವಾಗಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಟೌಕ್ಟೇ ಚಂಡಮಾರುತ : ಕಾಸರ್‌ಗೋಡ್‌ನಲ್ಲಿ ಕುಸಿದ ಮನೆ – ಕೇರಳದಲ್ಲಿ ವಿದ್ಯುತ್ ಕಡಿತ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights