‘ಸಾಹುಕಾರ್ ಸಿಡಿ ವಿಚಾರದಲ್ಲಿ ನನ್ನ ಪಾತ್ರವಿಲ್ಲ’- ನರೇಶ್ ಗೌಡ, ಭವಿತ್ ವಿಡಿಯೋ ರಿಲೀಸ್!

ಸಾಹುಕಾರ್ ಸಿಡಿ ವಿಚಾರದಲ್ಲಿ ಪ್ರಮುಖ ಕಿಂಗ್ ಪಿನ್ ಎಂದು ಆರೋಪಿಸಲಾಗುತ್ತಿದ್ದ ಮಾಜಿ ಪತ್ರಕರ್ತ ನರೇಶ್ ಗೌಡ ಮತ್ತು ಭವಿತ್ ವಿಡಿಯೋವೊಂದನ್ನು ರಿಲೀಸ್ ಮಾಡಿದ್ದಾರೆ.

ಸಿಡಿ ತಯಾರಿಸುವಲ್ಲಿ ನರೇಶ್ ಮತ್ತು ಭವಿತ್ ಪಾತ್ರ ಪ್ರಮುಖವಾಗಿದೆ ಎಂದು ಆರೋಪಿಸಲಾಗುತ್ತಿತ್ತು. ಸದ್ಯ ಅವರೇ ವಿಡಿಯೋವೊಂದನ್ನ ರಿಲೀಸ್ ಮಾಡಿದ್ದಾರೆ. ನರೇಶ್ ವಿಡಿಯೋದಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಹರಿಹಾಯ್ದಿದ್ದಾರೆ. ಇಡಿ ಕೇಸ್ ನಲ್ಲಿ ನನ್ನನ್ನು ಸಿಗಿಸಿ ಹಾಕಲಾಗಿದೆ ಎಂದು ಹೇಳಿದ್ದಾರೆ.

ನರೇಶ್ ಗೌಡ, ಮಾಜಿ ಪತ್ರಕರ್ತ, ವಿಡಿಯೋದಲ್ಲಿ ಹೇಳಿದ್ದೇನು?

ಸಿಡಿಯಲ್ಲಿ ನನ್ನ ಪಾತ್ರವಿಲ್ಲ, “ಈ ಕೇಸ್ ಗೂ ನನಗೂ ಸಂಬಂಧವಿಲ್ಲ. ನನ್ನ ಸ್ನೇಹಿತರ ಮೂಲಕ ನನಗೆ ಆ ಯುವತಿ ಕರೆ ಮಾಡಿದ್ದಳು. ಒಬ್ಬ ಪತ್ರಕರ್ತನಾಗಿದ್ದರಿಂದ ನನಗೆ ಯುವತಿ ನ್ಯಾಯಕ್ಕಾಗಿ ಬೇಡಿಕೆ ಇಟ್ಟಿದ್ದಳು. ಹೀಗಾಗಿ ನಾನು ಕೆಲ ಬಾರಿ ಅವಳೊಂದಿಗೆ ಮಾತನಾಡಿದ್ದೆ. ಅವಳ ಬಳಿ ಯಾವುದೇ ಪುರಾವೆಗಳು ಇಲ್ಲದ ಕಾರಣ ನಾನು ವಿಚಾರವನ್ನು ಅಲ್ಲಿಗೆ ಬಿಟ್ಟಿದ್ದೆ. ಜೊತೆಗೆ ನನ್ನ ತಾಯಿಗೆ ಆರೋಗ್ಯ ಸರಿಯಿರಲಿಲ್ಲ. ನನ್ನ ಮಗಳ ನಾಮಕರಣ ಇದೆ ಎಂದು ಆ ಹುಡುಗಿಗೆ ಹೇಳಿದ್ದೆ. ಈ ವೇಳೆ ಹುಡುಗಿ ನನ್ನನ್ನು ಕರೆಯೋದಿಲ್ಲವೇ ಎಂದು ಹೇಳಿದ್ದಳು. ನಾನು ಬನ್ನಿ ಎಂದು ಹೇಳಿದ್ದೆ. ಹೀಗಾಗಿ ಆಕೆ ಕೂಡ ನನ್ನ ಮಗಳ ನಾಮಕರಣಕ್ಕೆ ಬಂದಿದ್ದಳು. ಆ ನಾಮಕರಣದಲ್ಲಿ ಬಿಜೆಪಿಯವರೂ, ಜೆಡಿಎಸ್, ಕಾಂಗ್ರೆಸ್ ನವರು ಬಂದಿದ್ದರು” ಎಂದು ಹೇಳಿದ್ದಾರೆ.

” ಮಾತ್ರವಲ್ಲ ನನ್ನ ಹೆಸರು ಕೋಟಿ ಕೋಟಿ ಹಣದ ಡೀಲ್ ಮಾಡಿದ್ದಾರೆಂದು ತಳುಕು ಹಾಕಿದ್ದಾರೆ. ಇದು ಅಪ್ಪಟ ಸುಳ್ಳು ಬದುಕಲು ನಾನು ಏನ್ ಮಾಡುತ್ತಿದ್ದೇನೆ ಎಂದು ನನಗೆ ಗೊತ್ತು. 5ಲಕ್ಷ ಸಾಲ ಕಟ್ಟಲು ನಾನು ಪಡುತ್ತಿರುವ ಕಷ್ಟ ನನಗೆ ಗೊತ್ತು. ನನ್ನ ಮನೆ ನೋಡಿದ್ರೆ ಸಾಕು ನನ್ನ ಆರ್ಥಿಕ ಜೀವನ ಹೇಗಿದೆ ಅನ್ನೋದು ಗೊತ್ತಾಗುತ್ತದೆ. ಕೋಟಿ ಹಣ ಪಡೆದಿರುವ ಒಂದು ಸಣ್ಣ ಪಾತ್ರ ನನ್ನದು ಕಂಡು ಬಂದರೆ ಸಾಬೀತಾದರೆ ನಾನೇ ಒಪ್ಪಿಕೊಂಡು ಬಿಡುತ್ತೇನೆ. ಹೀಗಾಗಿ ನನು ಕಿಂಗ್ ಪಿನ್ ಅಲ್ಲ. ಸಿಡಿ ವಿಚಾರದಲ್ಲಿ 5 ಕೋಟಿ ಅಲ್ಲ 5 ರೂಪಾಯಿ ಪಡೆದ ಸಾಕ್ಷಿ ಇದ್ದರೆ ನಾನು ಬಂದು ಶರಣಾಗುತ್ತೇನೆ” ಎಂದು ನರೇಶ್ ಗೌಡ ಹೇಳಿದ್ದಾರೆ.

” ಒಬ್ಬ ಪತ್ರಕರ್ತನಾಗಿ ನಾನು ಬೇರೆ ಬೇರೆ ಸ್ಟೋರಿ ಮಾಡಿದ್ದೇನೆ. ಈ ರೀತಿ ಜೀವನ ಮಾಡಿಲ್ಲ. ಇದರಲ್ಲಿ ರಮೇಶ್ ಜಾರಕಿಹೊಳಿ ಪಾತ್ರ ಬಿಟ್ಟು ಬೇರೆ ಬೇರೆ ವ್ಯಕ್ತಿಗಳನ್ನು ಸಿಕ್ಕಿಹಾಕಿಸಲಾಗುತ್ತಿದೆ” ಎಂದು ನರೇಶ್ ಗೌಡ ಆರೋಪಿಸಿದ್ದಾರೆ.

“ಇಂಥಹ ಗಂಭೀರವಾದ ಆರೋಪ ಮಾಡಿದ್ದರಿಂದ ನಮ್ಮ ಹೆಂಡತಿ ಮಕ್ಕಳ ಮೇಲೆ ಅಘಾತವಾಗಿದೆ. ಸಾಹುಕಾರ್ ನೇ ಇಲ್ಲಿ ಒಳ್ಳೆಯವನೇ ಎನ್ನುವಂತೆ ಬಿಂಬಿಸಲಾಗುತ್ತಿದೆ. ಹುಡುಗಿಯನ್ನು ಕೆಟ್ಟವಳೆಂದು ದೂರಲಾಗುತ್ತಿದೆ. ಘೋಷಿತರ ವಿರುದ್ಧ ನಿಲ್ಲಬೇಕಾಗಿರುವುದು ನಮ್ಮೆಲ್ಲರ ಹಕ್ಕು. ಆದರೆ ಇಲ್ಲಿ  ಆಕೆ ವಿರುದ್ಧ ದೂರಲಾಗುತ್ತಿದೆ. ಹೀಗಿರಬೇಕಾದರ ಆತ ಎಂಥೆಲ್ಲಾ ಕೆಲಸ ಮಾಡುತ್ತಿರಬೇಡ?. ಇಲ್ಲಿ ಹಿಂಸೆ ಅನುಭವಿಸಬೇಕಾಗಿರೋದು ರಮೇಶ್ ಅದನ್ನು ಬಿಟ್ಟು ಎಲ್ಲರನ್ನೂ ಇದರಲ್ಲಿ ತಳುಕು ಹಾಕಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.

” ನಾನು ಯಾಕೆ ಬಂದಿಲ್ಲ ಅಂದರೆ, ಅಲ್ಲೇನಾಗುತ್ತದೆ ಎನ್ನುವ ವಿಚಾರ ನನಗೆ ಗೊತ್ತಿದೆ. ಆದರೂ ಇಷ್ಟರಲ್ಲೇ ನಾನು ಬರುತ್ತೇನೆ. ಯಾವ ತನಿಖೆಗೂ ನಾನು ಸಿದ್ಧನಿದ್ದೇನೆ” ಎಂದು ಹೇಳಿದ್ದಾರೆ.

ಭವಿತ್, ಮಾಜಿ ಪತ್ರಕರ್ತ, ವಿಡಿಯೋ :-

ಸಿಡಿ ವಿಚಾರದಲ್ಲಿ ಭವಿತ್ ಕೂಡ ತಮ್ಮ ಹೇಳಿಕೆ ವಿಡಿಯೋವನ್ನು ಬಿಡುಗಡೆ ಮಾಡಿದ್ಧಾರೆ, ” ನನಗೂ ಸಿಡಿ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ. ನಾನು ತನಿಖೆಗೆ ಸಿದ್ದನಿದ್ದೇನೆ. ನನ್ನ ಮೇಲೆ ವಿನಾಕಾರಣ ಆರೋಪ ಮಾಡಲಾಗುತ್ತಿದೆ ” ಎಂದು ಹೇಳಿದ್ದಾರೆ.

ಇನ್ನೂ ಎಸ್ ಐಟಿ ಈ ಪ್ರಕರಣದಲ್ಲಿ 30 ಜನರನ್ನು ವಿಚಾರಣೆ ಮಾಡಿದೆ. ತಲೆ ಮರಿಸಿಕೊಂಡವರನ್ನು ಹುಡುಕಾಟ ನಡೆಸುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights