ಕೃಷಿ ಕಾಯ್ದೆಗಳ ಬಗ್ಗೆ ರೈತರಿಗೆ ಅರ್ಥವಾದರೆ ದೇಶವೇ ಭುಗಿಲೇಳಲಿದೆ: ರಾಹುಲ್‌ಗಾಂಧಿ

ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಸರ್ಕಾರ ಈಗಲಾದರೂ ರದ್ದುಮಾಡಬೇಕು. ಕಾಯ್ದೆಗಳ ಬಗ್ಗೆ ಇನ್ನೂ ದೇಶದ ಎಲ್ಲಾ ರೈತರಿಗೂ ಅರ್ಥವಾಗಿಲ್ಲ. ಅವರು ರೈತರಿಗೆ ಸಂಪೂರ್ಣವಾಗಿ ಅರ್ಥವಾದರೆ ದೇಶವೇ ಭುಗಿಲೇಳಲಿದೆ ಎಂದು ರಾಹುಲ್‌ಗಾಂಧಿ ಹೇಳಿದ್ದಾರೆ.

ಕೃಷಿ ಕಾಯ್ದೆಗಳು ಇತ್ತೀಚೆಗೆ ರೈತರ ಮೇಲೆ ನಡೆಯುತ್ತಿರುವ ಮಾರಕ ದಾಳಿಯಾಗಿವೆ ಎಂದು ರಾಹುಲ್‌ಗಾಂಧಿ ತಮ್ಮ ಕ್ಷೇತ್ರ ವಯನಾಡಿನ ಕಲ್ಪೆಟ್ಟದಲ್ಲಿ ನಡೆದ ಯುಡಿಎಫ್‌ ಸಮಾವೇಶದಲ್ಲಿ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ದೇಶದ ಕೃಷಿ ವ್ಯವಸ್ಥೆಯನ್ನು ಮೂರು ಅಥವಾ ನಾಲ್ಕು ಉದ್ಯಮಿಗಳಿಗೆ ಹಸ್ತಾಂತರಿಸುವುದು ಮೋದಿ ಸರ್ಕಾರದ ಮೂಲ ಉದ್ದೇಶವಾಗಿದೆ ಎಂದು ಆರೋಪಿಸಿದ್ದಾರೆ.

ಕೇಂದ್ರದಲ್ಲಿನ ಬಿಜೆಪಿ ಸರ್ಕಾರವು ತನ್ನ ಕೇಂದ್ರ ಏಜೆನ್ಸಿಗಳಾದ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ(ಇಡಿ)ವನ್ನು ವಿರೋಧ ಪಕ್ಷಗಳು ಆಳ್ವಿಕೆಯಲ್ಲಿರುವ ರಾಜ್ಯಗಳ ಮೇಲೆ ಆಕ್ರಮಣಕಾರಿಯಾಗಿ ಬಳಸುತ್ತಿದೆ. ಆದರೆ ಎಡಪಂಥೀಯ ಕೇರಳದ ಮೇಲೆ ಅಂತಹ ಯಾವುದೇ ಒತ್ತಡವನ್ನು ಹೇರಲು ಕೇಂದ್ರಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.


ಇದನ್ನೂ ಓದಿ: ರೈತ ಮುಖಂಡರ ವಿರುದ್ಧ ಲುಕ್‌ಔಟ್‌ ಸುತ್ತೋಲೆ ಹೊರಡಿಸಲು ಅಮಿತ್‌ ಶಾ ಆದೇಶ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights