ರಾಜಕೀಯದಲ್ಲಿ ಇತಿಹಾಸ ಬರೆದ ಮಂಗಳಮುಖಿಯರು; ಗ್ರಾಮ ಪಂ. ಚುನಾವಣೆ ಗೆದ್ದ 04 ಜನ

ಕರ್ನಾಟಕ ಗ್ರಾಮ ಪಂಚಾಯತಿ ಚುನಾವಣಾ ಮತ ಎಣಿಕೆ ಪ್ರಕ್ರಿಯೆ ಕೊನೆಯ ಹಂತ ತಲುಪಿದೆ. ಇದೂವರೆಗೂ ಸುಮಾರು 54,000ಕ್ಕೂ ಹೆಚ್ಚು ಸ್ಥಾನಗಳ ಫಲಿತಾಂಶ ಪ್ರಕಟವಾಗಿದೆ. ಈ ಬಾರಿಯ ವಿಶೇಷವೆಂದರೆ ಮಂಗಳಮುಖಿ ಸಮುದಾಯಕ್ಕೆ ಸೇರಿದ ನಾಲ್ಕು ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

ಸಮಾಜದ ಮುಖ್ಯವಾಹಿನಿಗೆ ಬಂದು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಮಂಗಳಮುಖಿಯರಿಗಿರುವ ಅವಕಾಶ ತೀರಾ ವಿರಳ. ಆದರೆ ಇತ್ತೀಚೆಗೆ ಈ ಅಂಚಿಗೆ ತಳ್ಳಲ್ಪಟ್ಟ ಸಮುದಾಯದ ಕೆಲವರು ಬಹುತೇಕ ಕ್ಷೇತ್ರಗಳಲ್ಲಿ ಮುನ್ನೆಲೆಗೆ ಬರುತ್ತಿದ್ದಾರೆ.

ಚನ್ನಪಟ್ಟಣ ತಾಲ್ಲೂಕಿನ ಕೂಡ್ಲೂರು ಮತ್ತು ರಾಜಪುರ ಗ್ರಾಮದಿಂದ ಮಮತಾ, ಹೊಸಪೇಟೆ ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದಿಂದ ಸುಧಾ.ಎಂ, ಕೆ.ಆರ್‌.ನಗರದ ಸಾಲಿಗ್ರಾಮದಿಂದ ದೇವಿಕಾ ಮತ್ತು ಬೆಂಗಳೂರು ಗ್ರಾಮಾಂತರ ದೊಡ್ಡಬೊಮ್ಮಸಂದ್ರದಿಂದ ಆರತಿ ಜವರೇಗೌಡ ಎಂಬುವವರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾಗಿ ಇತಿಹಾಸ ಸೃಷ್ಟಿಸಿದ್ದಾರೆ.

Image may contain: 5 people, people standing

ಕರ್ನಾಟಕದ ಇತಿಹಾಸದಲ್ಲಿ ಮಂಗಳಮುಖಿಯರು ಚುನಾವಣೆಯಲ್ಲಿ ಆಯ್ಕೆಯಾಗಿರುವುದು ಇದು ಮೊದಲಬಾರಿ. ಹಾಗಾಗಿ ಈ ಸಮುದಾಯದ ಪ್ರತಿಯೊಬ್ಬರಲ್ಲೂ ಸಂಭ್ರಮ ಮನೆಮಾಡಿದೆ.

ಇತ್ತೀಚೆಗೆ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮಂಗಳಮುಖಿ ಅಕೈ ಪದ್ಮಶಾಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.

ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಕೆಲವು ಮಂಗಳಮುಖಿಯರು ಸ್ಪರ್ಧಿಸಿದ್ದರು. ಒಟ್ಟಿನಲ್ಲಿ ದೇಶದಲ್ಲಿ ಇಂತಹ ಆಶಾದಾಯಕ ಬೆಳವಣಿಗೆಯಾಗುತ್ತಿರುವುದು ನಮ್ಮೆಲ್ಲರ ಹೆಮ್ಮೆಯ ಸಂಗತಿ.


ಇದನ್ನೂ ಓದಿ: ಗ್ರಾಮ ಪಂ. ಚುನಾವಣೆ; 54,041 ಸ್ಥಾನಗಳ ಫಲಿತಾಂಶ ಪ್ರಕಟ; BJPಗೆ ಮೇಲುಗೈ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights