‘ತನಿಖೆ ಆರಂಭದಲ್ಲೇ ರಮೇಶ್ ಜಾರಕಿಹೊಳಿಯನ್ನು ಬಂಧಿಸಲು ಆಗೋದಿಲ್ಲ’ – ಡಿಜಿ, ಐಜಿ ಪ್ರವೀಣ್ ಸೂದ್

ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಬಹಿರಂಗವಾಗಿ ಇಂದಿಗೆ ಬರೊಬ್ಬರಿ ಒಂದು ತಿಂಗಳು ಆಗಿದೆ. ಈ ಬಗ್ಗೆ ಪ್ರಶ್ನಿಸಿದರೆ ‘ತನಿಖೆ ಆರಂಭದಲ್ಲೇ ರಮೇಶ್ ಜಾರಕಿಹೊಳಿಯನ್ನು ಬಂಧಿಸಲು ಆಗೋದಿಲ್ಲ’ ಎಂದು ಡಿಜಿ,ಐಜಿ ಪ್ರವೀಣ್ ಸೂದ್ ಹೇಳಿದ್ದಾರೆ.

ಹೌದು.. ಇಂದು ಬೆಂಗಳೂರಿನಲ್ಲಿ ಮಾಧ್ಯಮದ ಮುಂದೆ ಮಾತನಾಡಿದ ಡಿಜಿ, ಐಜಿ ಪ್ರವೀಣ್ ಸೂದ್, ” ಎಸ್ಐಟಿ ಹಂತ ಹಂತವಾಗಿ ತನಿಖೆ ನಡೆಸುತ್ತಿದೆ. ಹೀಗಾಗಿ ತನಿಖೆ ಆರಂಭದಲ್ಲೇ ರಮೇಶ್ ಜಾರಕಿಹೊಳಿ ಅವರನ್ನು ಬಂಧಿಸೋಕೆ ಆಗೋದಿಲ್ಲ. ತನಿಖೆ ಮುಗಿದ ಬಳಿಕ ಬಂಧನ ಮಾಡಿಲ್ಲ ಅಂದರೆ ಪ್ರಶ್ನೆ ಮಾಡಬೇಕು. ಜೊತೆಗೆ ತನಿಖೆ ಹಂತದಲ್ಲಿ ಬಂಧಿಸಲು ಆಗ್ರಹಿಸೋದು ತಪ್ಪು” ಎಂದಿದ್ದಾರೆ.

ಹೀಗಾಗಿ ಇದೇ ರೀತಿ ಯುವತಿ ಒಬ್ಬ ಸಾಮಾನ್ಯನಿಂದ ಮೋಸ ಹೋಗಿದ್ದೇ ಆದರೆ ಆ ವ್ಯಕ್ತಿ ಅದಾಗಲೇ ಬಂಧನಕ್ಕೆ ಒಳಪಡಿಸಲಾಗುತ್ತಿದ್ದನು. ಆದರೆ ರಮೇಶ್ ಜಾರಕಿಹೊಳಿ ವಿಚಾರದಲ್ಲಿ ಈ ಪ್ರಕರಣ ಬದಲಾಗಿದೆ. ಇಲ್ಲಿ ತಾರತಮ್ಯ ಮಾಡಲಾಗುತ್ತಿದೆ. ತನಿಖೆ ಮುಂದಿಟ್ಟುಕೊಂಡು ರಮೇಶ್ ಜಾರಕಿಹೊಳಿ ಬಂಧನವಾಗುತ್ತಿಲ್ಲ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಇದಕ್ಕೆ ರಾಜಕೀಯ ಕೆಸರೆರೆಚಾಟ ನಡೆಯುತ್ತಿದೆ.

ಈಗಾಗಲೇ ಸಿಡಿ ಸಂತ್ರಸ್ತೆ ರಮೇಶ್ ಜಾರಕಿಹೊಳಿ ಅಪರಾಧಿ ಎಂದು ಅರ್ಥಮಾಡಿಕೊಳ್ಳಲು ಬೇಕಾದ ಸಾಕ್ಷಿಗಳನ್ನು ನೀಡಿದ್ದಾಳೆ. ರಮೇಶ್ ಜಾರಕಿಹೊಳಿ ಕೊಟ್ಟ ಗಿಫ್ಟ್, ಮೊಬೈಲ್, ಬಂಗಾರ, ಫೋನ್ ಚಾಟ್, ವಿಡಿಯೋ ಕಾಲ್, ಫೋಟೋ ಇವೆಲ್ಲವನ್ನು ಕೊಟ್ಟಿದ್ದಾಳೆ. ಸ್ಥಳದ ಮಹಜರ ನಡೆದಿದೆ. ಯುವತಿ ವೈದ್ಯಕೀಯ ಪರೀಕ್ಷೆ ಕೂಡ ನಡೆದಿದೆ. ಈ ಎಲ್ಲಾ ವಿಚಾರಣೆಯಲ್ಲಿ ರಮೆಶ್ ಜಾರಕಿಹೊಳಿ ಪಾತ್ರ ಇರುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಹೀಗಾಗಿ ಮುಂದಿನ ದಿನಗಳಲ್ಲಿ ರಮೇಶ್ ಬಂಧನವಾಗುತ್ತಾ..? ಅಥವಾ ಎಸ್ಐಟಿ ತಿಪ್ಪೆ ಸಾರಿಸುವ ಕೆಲಸ ಮಾಡುತ್ತಾ? ಕಾದು ನೋಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights