ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ : ಕಿಡ್ನ್ಯಾಪ್ ಬಗ್ಗೆ ಸಿಡಿ ಸಂತ್ರಸ್ತೆ ಹೇಳಿದ್ದೇನು…?

ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಮತ್ತಷ್ಟು ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು ವಿಡಿಯೋ, ಲೈಂಗಿಕ ದೌರ್ಜನ್ಯಕ್ಕೆ ಯುವತಿ ಮತ್ತಷ್ಟು ಸಾಕ್ಷ್ಯಗಳನ್ನು ಕೊಟ್ಟಿದ್ದಾಳೆ. 5 ನೇ ದಿನ ವಿಚಾರಣೆಯಲ್ಲಿ ಯುವತಿ ಬಹಳಷ್ಟು ಹೇಳಿಕೆಗಳನ್ನು ಕೊಟ್ಟಿದ್ದಾಳೆ.

ಆಡುಗೋಡೆಯ ಟೆಕ್ನಿಕಲ್ ವಿಂಗ್ ನಲ್ಲಿ ಯುವತಿಯನ್ನು ವಿಚಾರಣೆ ಮಾಡಲಾಗುತ್ತಿದ್ದು ಎರಡುವರೆ ಗಂಟೆಯಿಂದ ಸಂತ್ರಸ್ತೆ ಕೊಟ್ಟ ಸಾಕ್ಷ್ಯಾಧಾರಗಳನ್ನಿಟ್ಟುಕೊಂಡು ಎಸ್ಐಟಿ ಹತ್ತಾರು ಪ್ರಶ್ನೆಗಳನ್ನು ಕೇಳುತ್ತಿದೆ. ಎಸ್ಐಟಿ ಕೇಳಿದ ಪ್ರಶ್ನೆಗಳಿಗೆ ಯುವತಿ ಕೊಟ್ಟ ಉತ್ತರ ಹೀಗಿದೆ..

ನಿಮ್ಮನ್ನು ಯಾರಾದ್ರು ಕಿಡ್ಯ್ನಾಪ್ ಮಾಡಿದ್ರಾ?

ನಿಮ್ಮನ್ನು ಯಾರಾದ್ರು ಕಿಡ್ಯ್ನಾಪ್ ಮಾಡಿ ಬಲವಂತವಾಗಿ ಬಂಧನದಲ್ಲಿ ಇರಿಸಿದ್ರಾ? ಕಿಡ್ನ್ಯಾಪ್ ಅನ್ನೋ ದೂರು ನಿಮ್ಮ ಮನೆಯವರೇ ಕೊಟ್ಟಿದ್ದಾರೆ. ಇದಕ್ಕೆ ಸರಿಯಾದ ರೀತಿಯಿಂದ ಉತ್ತರ ಕೊಡಿ ಎಂದು ಎಸ್ಐಟಿ ಪ್ರಶ್ನೆ ಕೇಳಿದ್ದಾರೆ. ತಂದೆ- ತಾಯಿ ದೂರು ಯಾಕೆ ಕೊಟ್ಟರು ಎನ್ನುವ ಪ್ರಶ್ನೆಗೆ ಯುವತಿ“ ನನ್ನನ್ನು ಯಾರೂ ಕಿಡ್ನ್ಯಾಪ್ ಮಾಡಿರಲಿಲ್ಲ. ಸಿಡಿ ಬಿಡುಗಡೆಯಿಂದ ಮನಸಿಗೆ ತುಂಬಾ ನೋವಾಗಿತ್ತು. ಮನಸ್ಸಿಗೆ ನೋವಾಗಿ ಜೀವ ಬೆದರಿಕೆ ಇತ್ತು ಹೀಗಾಗಿ ನಾನೇ ಹೋಗಿದ್ದೆ” ಎಂದು ಸಂತ್ರಸ್ತೆ ಹೇಳಿದ್ದಾಳೆ.

ಸಿಡಿ ಬಿಡುಗಡೆಯಾದ ಬಳಿಕ ನೀವು ಎಲ್ಲಿಗೆ ಹೋಗಿದ್ರಿ?

ಬೆಂಗಳೂರಿನಿಂದ ನಿಮ್ಮನ್ನು ಕರೆದುಕೊಂಡು ಹೋದವರು ಯಾರು? ಕಾಸಿಗೆ ಯಾರು ಸಹಾಯ ಮಾಡಿದ್ರು? ಆ ಸಂದರ್ಭದಲ್ಲಿ ನಿಮಗೆ ಸಾತ್ ಕೊಟ್ಟಂತವರು ಯಾರು? ಕೋರ್ಟ್ ಗೆ ಕರೆದಂತದವರು ಯಾರು? ಯಾವ್ಯಾವ ಪ್ರದೇಶಕ್ಕೆ ಹೋಗಿದ್ದಿರಿ? ಯಾವ ಊರಲ್ಲಿದ್ರಿ? ಅಲ್ಲಿರಲು ನಿಮಗೆ ಸಹಾಯ ಮಾಡಿದವರು ಯಾರು? ಎನ್ನುವ ಎಸ್ಐಟಿ ಪ್ರಶ್ನೆಗಳಿಗೆ ಯುವತಿ ಉತ್ತರ ಕೊಟ್ಟಿದ್ದಾಳೆ.

ನನಗೆ ಸಿಡಿ ಬಿಡುಗಡೆ ಮಾಡಿದ್ದು ತುಂಬಾ ಬೇಸರವಾಗಿತ್ತು. ಗೆಳೆಯ ಆಕಾಶ್ ಸಹಾಯ ಪಡೆದು ಗೋವಾಕ್ಕೆ ಹೋಗಿದ್ದೆ. ನನ್ನ ಬಳಿ ಇದ್ದ ಸ್ವಲ್ಪ ದುಡ್ಡನ್ನು ತೆಗೆದುಕೊಂಡು ಹೋಗಿದ್ದೆ. ಅಜ್ಞಾತ ಸ್ಥಳದಲ್ಲಿರಲು ಗೆಳೆಯರ ಸಹಾಯ ಪಡೆದಿದ್ದೆ. ವಿಡಿಯೋ ಮಾಡಲು ಅವರ ಸಹಾಯ ಪಡೆದಿದ್ದೆ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾಳೆ.

ಅಜ್ಞಾತ ಸ್ಥಳದಿಂದ ವಡಿಯೋ ಮಾಡಿದ್ದು ಹೇಗೆ? ಯಾಕೆ?

ಅಜ್ಞಾತ ಸ್ಥಳದಲ್ಲಿ ಒತ್ತಡ ಹಾಕಿ ನಿಮ್ಮಿಂದ ವಿಡಿಯೋ ಮಾಡಿದ್ರಾ? ವಿಡಿಯೋ ಮಾಡಿದವರು ಯಾರು? ನನ್ನ ಮೇಲೆ ಆರೋಪ ಬಂತು. ಷಡ್ಯಂತ್ರ ಮಾಡುತ್ತಿದ್ದಾರೆ. ಹನಿಟ್ರ್ಯಾಪ್ ಮಾಡುತ್ತಿದ್ದಾರೆನ್ನುವ ಆರೊಪಗಳನ್ನು ನಾನು ಟಿವಿಯಿಂದ ತಿಳುದುಕೊಂಡೆ. ನಾನೂ ಕೂಡ ಅಪರಾಧಿ ಎನ್ನುವಂತೆ ಬಿಂಬಿಸಲಾಗುತ್ತಿತ್ತು. ಹೀಗಾಗಿ ನಾನು ವಿಡಿಯೋ ಮಾಡಬೇಕಾಯಿತು ಎಂದು ಹೇಳಿದ್ದಾಳೆ.

ಇದಕ್ಕೆ ಬೇಕಾದ ಸಾಕ್ಷಿಗಳನ್ನೂ ಯುವತಿ ನೀಡಿದ್ದಾಳೆ. ಜೊತೆಗೆ ಎಸ್ಐಟಿ ವಿಚಾರಣೆಗೂ ಯುವತಿ ಸ್ಪಂದಿಸುತ್ತಿದ್ದಾರೆ. ಹೀಗಾಗಿ ವಿಚಾರಣೆ ಚುರುಕುಗೊಳಿಸಿದ ಎಸ್ಐಟಿ ಸಂತ್ರಸ್ತೆಯಿಂದ ಮಾಹಿತಿ ಪಡೆದು ರಮೇಶ್ ಜಾರಕಿಹೊಳಿ ವಿಚಾರಣೆ ಮಾಡುತ್ತದೆ. ಇನ್ನೇನು ರಮೇಶ್ ಜಾರಕಿಹೊಳಿ ಕೂಡ ವಿಚಾರಣೆಗೆ ಹಾಜರಾಗುವ ಸಾಧ್ಯತೆಗಳು ಇವೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights