IPL 2021: ಇಬ್ಬರು ಕ್ರಿಕೆಟಿಗರಿಗೆ ಕೊರೊನಾ; ಟೂರ್ನಿಗೆ ಯಾವುದೇ ತೊಡಕಿಲ್ಲ: ಸೌರವ್‌ ಗಂಗೂಲಿ

IPL 2021ರ ಟೂರ್ನಿಗೆ ಕೆಲವೇ ದಿನಗಳು ಬಾಕಿ ಇವೆ. ಈ ಹೊತ್ತಿನಲ್ಲೇ ಐಪಿಎಲ್‌ ಆಡಬೇಕಿರುವ ಹಲವು ಕ್ರಿಕೆಟಿಗರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಐಪಿಎಲ್‌ ನಡೆಯಲಿದೆಯೇ, ಇಲ್ಲವೇ ಎಂಬ ಊಹಾಪೋಹ ಆರಂಭವಾಗಿತ್ತು. ಈ ವದಂತಿಗಳಿಗೆ ತೆರೆ ಎಳೆದಿರುವ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಟೂರ್ನಿ ನಡೆಯುವುದು ಖಚಿತ ಎಂದು ತಿಳಿಸಿದ್ದಾರೆ.

ಆದರೂ, ಆರ್‌ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್‌ ತಂಡದ ಅಭಿಮಾನಿಗಳಿಗೆ ಕೊಂಚ ನಿರಾಸೆಯಾಗಿದೆ. ಆರ್‌ಸಿಬಿ ತಂಡದ ದೇವದತ್‌ ಪಡಿಕ್ಕಲ್‌ ಮತ್ತು ಡೆಲ್ಲಿ ತಂಡದ ಅಕ್ಷಯ್‌ ಪಟೇಲ್‌ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಹೀಗಾಗಿ, ಟೂರ್ನಿಯ ಕೆಲವು ಆಟಗಳಿಂದ ಅಥವಾ ಈ ಟೂರ್ನಿಯಿಂದಲೇ ಇಬ್ಬರೂ ಆಟಗಾರರು ಹೊರಗುಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

ದೇವದತ್‌ ಪಡಿಕಲ್‌ ಅವರಿಗೆ ಸೋಂಕು ತಗುಲಿ ಈಗಾಗಲೆ 12 ದಿನಗಳು ಕಳೆದಿವೆ. ಐಪಿಎಲ್‌ ಅರಂಭವಾಗುವ ವೇಳೆಗೆ ಅವರ ಕ್ವಾರಂಟೈನ್‌ ಅವಧಿ ಸಂಪೂರ್ಣ ಮುಗಿಯಲಿದೆ. ಅದರೂ, ಕೊರೊನಾ ತಗುಲಿದ ನಂತರವು ದೇಹದಲ್ಲಿ ಸುಸ್ತು, ದಣಿವು ಕಾಣಿಸಿಕೊಳ್ಳುವುದರಿಂದ ಬೇಸಿಗೆ ಬಿಸಿಲಿನಲ್ಲಿ ಪಿಚ್‌ನಲ್ಲಿ ಇಳಿಯಲು ಸಾಧ್ಯವಾಗುವುದೇ ಎಂಬ ಗೊಂಲದವಿದೆ.

ಅಂತೆಯೇ ಅಕ್ಷಯ್‌ ಪಟೇಲ್‌ ಅವರಿಗೂ ಕೂಡ ಕಳೆದ ವಾರ ಕೊರೊನಾ ತಗುಲಿದ್ದು, ಅವರೂ ಕ್ರಿಕೆಟ್‌ ಆಡುವುದು ಅನುಮಾನವಿದೆ. ಈ ಮಧ್ಯೆ, ಐಪಿಎಲ್‌ ನಡೆಸಲು ಗುರುತಿಸಲಾಗಿರುವ ಸ್ಟೇಡಿಯಂಗಳಲ್ಲಿ ಒಂದಾಗಿರುವ ಮುಂಬೈನ ಸ್ಟೇಡಿಯಂನಲ್ಲಿರುವ ಸಿಬ್ಬಂದಿಗಳಿಗೂ ಕೂಡ ಕೊರೊನಾ ದೃಢಪಟ್ಟಿದೆ.

ಆದರೂ, ಅದೇ ಸ್ಟೇಡಿಯಂನಲ್ಲೂ ಟೂರ್ನಿಯ ಕೆಲವು ಪಂದ್ಯಗಳ ನಡೆಯುತ್ತವೆ. ಅದಕ್ಕೆ ಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಗಂಗೂಲಿ ಹೇಳಿದ್ದಾರೆ.

ಇದನ್ನೂ ಓದಿ: IPL 2021ಕ್ಕೆ ದಿನಾಂಕ ಫಿಕ್ಸ್‌: ಏಪ್ರಿಲ್‌ 09ರಿಂದ ಮೇ 30ರ ವರೆಗೆ ಐಪಿಎಲ್‌ ಹಂಗಾಮ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights