ರೈತರ ಕೋಪಕ್ಕೆ ಗುರಿಯಾದ ಬಿಜೆಪಿ; ಪಂಜಾಬ್‌-ಹರಿಯಾಣದಲ್ಲಿ ಕೇಸರಿ ನಾಯಕರಿಗೆ ಘೇರಾವ್‌-ದಾಳಿ!

ಪಂಜಾಬ್‌ನಲ್ಲಿ ವಿಧಾನಸಭಾ ಚುನಾವಣೆಗೆ ಒಂದು ವರ್ಷಕ್ಕಿಂತಲೂ ಕಡಿಮೆ ಸಮಯ ಬಾಕಿ ಇದೆ. ಈ ಹಿನ್ನೆಲೆಯಲ್ಲಿ, ಆಡಳಿತಾರೂಢ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷ ಮತ್ತು ಶಿರೋಮಣಿ ಅಕಾಲಿ ದಳಗಳು ಚುನಾವಣೆಗೆ ಸಿದ್ಧತೆ ನಡೆಸುತ್ತಿವೆ.

ಆದರೆ, ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ಬಿಜೆಪಿ ತೀವ್ರ ಹಿನ್ನಡೆ ಎದುರಿಸುತ್ತಿದೆ.

ಭಾನುವಾರ, ಕೇಂದ್ರ ಸಚಿವ ಸೋಮ್ ಪರ್ಕಾಶ್ ಅವರ ವಾಹನವನ್ನು ಹೋಶಿಯಾರ್‌ಪುರದ ಬಿಜೆಪಿ ಕಚೇರಿಯ ಬಳಿ ತಡೆಯಲು ರೈತರು ಪ್ರಯತ್ನಿಸಿದರು. ಈ ಮೂಲಕ ಬಿಜೆಪಿ ವಿರುದ್ದ ರೈತರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ, ರಾಜ್ಯ ಉಪಾಧ್ಯಕ್ಷ ಪರ್ವೀನ್ ಬನ್ಸಾಲ್ ಅವರನ್ನು ಬರ್ನಾಲಾದಲ್ಲಿ ರೈತರು ಘೆರಾವ್ ಮಾಡಿದ್ದರು.

ಕಳೆದ ವಾರ, ಮುಕ್ತಸರ್ ಜಿಲ್ಲೆಯ ಮಾಲೌಟ್‌ನಲ್ಲಿ ಅಬೋಹರ್ ಅರುಣ್ ನಾರಂಗ್‌ ಕ್ಷೇತ್ರದ ಬಿಜೆಪಿ ಶಾಸಕರನ್ನು ರೈತರ ಗುಂಪೊಂದು ಥಳಿಸಿ ಬಟ್ಟೆಗಳನ್ನು ಹರಿದು ಹಾಕಿದ್ದರು.

ಸ್ಥಳೀಯ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಮುಖಂಡರಿಗೆ ಪ್ರಚಾರ ನಡೆಸಲು ಅವಕಾಶವಿರಲಿಲ್ಲ. ಕಪುರ್ಥಾಲಾ, ಮೊಗಾ, ಜಲಂಧರ್, ಅಮೃತಸರ ಸೇರಿದಂತೆ ಹಲವು ಸ್ಥಳಗಳಲ್ಲಿ ಪಂಜಾಬ್ ಬಿಜೆಪಿ ಅಧ್ಯಕ್ಷ ಅಶ್ವನಿ ಶರ್ಮಾ ಮತ್ತು ಮಾಜಿ ಕೇಂದ್ರ ಸಚಿವ ವಿಜಯ್ ಸಂಪ್ಲಾ ರೈತರ ಆಕ್ರೋಶವನ್ನು ಎದುರಿಸಿದರು. ಹೋಶಿಯಾರ್ಪುರ್ ಬಳಿ ಶರ್ಮಾ ಅವರ ಕಾರಿನ ಮೇಲೆ ದಾಳಿ ಮಾಡಲಾಗಿದೆ.

ಇನ್ನೂ, ಪಕ್ಷದ ರಾಜ್ಯ ಘಟಕವು ಸಾರ್ವಜನಿಕ ಸಭೆಗಳ ಮೂಲಕ ಸ್ವಲ್ಪ ಬೆಂಬಲವನ್ನು ಪಡೆಯಲು ಪ್ರಯತ್ನಿಸುತ್ತಿದೆ.

“ನಾವು ಪ್ರತಿದಿನ ಎರಡು ಮೂರು ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ. ಮೇ ತಿಂಗಳಲ್ಲಿ ನಾವು ಲುಧಿಯಾನ ಅಥವಾ ಜಲಂಧರ್‌ನಲ್ಲಿ ದೊಡ್ಡ ರ್ಯಾಲಿಯನ್ನು ಆಯೋಜಿಸಲಿದ್ದೇವೆ ”ಎಂದು ಪಂಜಾಬ್ ಬಿಜೆಪಿಯ ಸಂಘಟನಾ ಕಾರ್ಯದರ್ಶಿ ದಿನೇಶ್ ಕುಮಾರ್ ಹೇಳಿದರು.

ಅಲ್ಲದೆ, ನೆರೆಯ ರಾಜ್ಯವಾಗಿರುವ ಹರಿಯಾಣದಲ್ಲಿ ಸರ್ಕಾರವನ್ನು ಬೆಂಬಲಿಸುವ ಬಿಜೆಪಿ-ಜೆಜೆಪಿ ಮತ್ತು ಸ್ವತಂತ್ರ ಶಾಸಕರ ವಿರುದ್ಧ ಪ್ರತಿಭಟನೆ ತೀವ್ರಗೊಂಡಿದೆ.

ಸಿಎಂ ಎಂಎಲ್ ಖಟ್ಟರ್, ಡಿಸಿಎಂ ದುಶ್ಯಂತ್ ಚೌತಲಾ, ಸಚಿವರು, ಶಾಸಕರು ಮತ್ತು ಸಂಸದರು ರೈತರ ಆಕ್ರೋಶವನ್ನು ಎದುರಿಸುತ್ತಿದ್ದಾರೆ. ಕಳೆದ ವಾರ, ಚೌತಲಾ ಅವರಿಗೆ ಎರಡು ಗಂಟೆಗಳ ಕಾಲ ವಿಮಾನ ನಿಲ್ದಾಣದಿಂದ ಹೊರಬರಲು ಅವಕಾಶವಿರಲಿಲ್ಲ. ರೈತರು ಅವರನ್ನು ಏರ್‌ಪೋರ್ಟ್‌ನಲ್ಲಿಯೇ ಘೇರಾವ್‌ ಹಾಕಿದ್ದರು.

ಇದನ್ನೂ ಓದಿ: ಬಂಗಾಳ ಚುನಾವಣೆ; ಮತದಾನದ ಮಧ್ಯೆ ಹಲವು BJP ಮುಖಂಡರು TMCಗೆ ಸೇರ್ಪಡೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights