ತೆಲಂಗಾಣದಲ್ಲಿ ರಾತ್ರಿ 9 ರಿಂದ ಬೆಳಿಗ್ಗೆ 5 ರವರೆಗೆ 10 ದಿನ ನೈಟ್ ಕರ್ಫ್ಯೂ!

ಕೊರೊನಾ ಹೆಚ್ಚಾಗುತ್ತಿದ್ದರಿಂದ ತೆಲಂಗಾಣದಲ್ಲಿ ಇಂದಿನಿಂದ ರಾತ್ರಿ 9 ರಿಂದ ಬೆಳಿಗ್ಗೆ 5 ರವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ.

ಕೊರೊನಾ ಹೆಚ್ಚುತ್ತಿರುವ ರಾಜ್ಯಗಳು ಸ್ವಯಂ ನಿರ್ಧಾರ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರ ಆದೇಶದಿಂದ ತೆಲಂಗಾಣ ಹತ್ತು ದಿನಗಳ ಕಾಲ ರಾತ್ರಿ 9 ರಿಂದ ಬೆಳಿಗ್ಗೆ 5 ರವರೆಗೆ ಮೇ 1 ರವರೆಗೆ ರಾತ್ರಿ ಕರ್ಫ್ಯೂ ವಿಧಿಸಿದೆ.

ಈ 10 ದಿನದ ರಾತ್ರಿ ಕರ್ಫ್ಯೂ ಸಂದರ್ಭದಲ್ಲಿ ಎಲ್ಲಾ ಕಚೇರಿಗಳು, ಮಾಲ್‌ಗಳು, ರೆಸ್ಟೋರೆಂಟ್‌ಗಳು ಸಂಜೆ 8 ಗಂಟೆ ಬಳಿಕ ಬಂದ್ ಇರಲಿವೆ. ಆಸ್ಪತ್ರೆ, ಡಯಾಗ್ನೊಸ್ಟಿಕ್ ಲ್ಯಾಬ್‌ಗಳು, ಔಷಧ ಅಂಗಡಿಗಳು ತೆರೆದಿರಲಿವೆ. ಪೆಟ್ರೋಲ್ ಪಂಪ್, ಎಲ್‌ಪಿಜಿ, ಚಿಎನ್‌ಜಿ, ಗ್ಯಾಸ್ ಔಟ್‌ಲೆಟ್, ನೀರಿನ ಸರಬರಾಜುಉ, ಸ್ಯಾನಿಟೈಸೇಷನ್, ಖಾಸಗಿ ಭದ್ರತಾ ಸೇವೆಗಳು ಸೇರಿದಂತೆ ಇತರೆ ಸೇವೆಗಳಿಗೆ ಅವಕಾಶವಿದೆ.

ಇದರ ಜೊತೆಗೆ ತೆಲಂಗಾಣ ಸೋಂಕಿನಿಂದ ಸಾಯುತ್ತಿರುವವರ ಸಂಖ್ಯೆ ಹೆಚ್ಚಿದ್ದರು ಅದನ್ನ ಮುಚ್ಚಿಡಲಾಗುತ್ತಿದೆ ಎನ್ನುವ ಆರೋಪಗಳಿವೆ.

ಇನ್ನೂ ಭಾರತದ ಒಟ್ಟು ಕೋವಿಡ್ -19 ಪ್ರಕರಣಗಳು 1.50 ಕೋಟಿ ದಾಟಿದ್ದು, ಕೇವಲ 15 ದಿನಗಳಲ್ಲಿ ಸುಮಾರು 25 ಲಕ್ಷ ಪ್ರಕರಣಗಳು ಸೇರ್ಪಡೆಯಾಗಿದ್ದು, ಸಕ್ರಿಯ ಪ್ರಕರಣಗಳು 19 ಲಕ್ಷಗಳನ್ನು ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳಿಂದ ಸೋಮವಾರ ತಿಳಿದಿದೆ. ಕೋವಿಡ್ -19 ಪ್ರಕರಣಗಳ ರಾಷ್ಟ್ರವ್ಯಾಪಿ 1,50,61,919 ಕ್ಕೆ ಏರಿಕೆಯಾಗಿದ್ದು, ಏಕದಿನದಲ್ಲಿ 2,73,810 ಕೊರೊನಾವೈರಸ್ ಸೋಂಕುಗಳು ದಾಖಲಾಗಿವೆ. 1,619 ದೈನಂದಿನ ಹೊಸ ಸಾವುನೋವುಗಳೊಂದಿಗೆ ಸಾವಿನ ಸಂಖ್ಯೆ 1,78,769 ಕ್ಕೆ ಏರಿಕೆಯಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights