ನಿರ್ಮಾಪಕ ರಾಮು ಸಾವಿಗೆ ಸಚಿವ ಸುಧಾಕರ್‌ ಕಾರಣ: ಇಂದ್ರಜಿತ್‌ ಲಂಕೇಶ್‌ ಆರೋಪ

ಕೊರೊನಾ ಸೋಂಕಿಗೆ ಒಳಗಾಗಿದ್ದ ನಿರ್ಮಾಪಕ ರಾಮು ಅವರು ಸೋಮವಾರ ಸಾವ್ನಪ್ಪಿದ್ದಾರೆ. ಅವರ ಸಾವಿಗೆ ಆರೋಗ್ಯ ಸಚಿವ ಡಾ. ಸುಧಾಕರ್‌ ಕಾರಣ ಎಂದು ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಅವರು ಗಂಭೀರ ಆರೋಪ ಮಾಡಿದ್ದಾರೆ.

ಖಾಸಗಿ ಮಾಧ್ಯಮೊಂದರ ಜೊತೆಗೆ ಮಾತನಾಡಿರುವ ಅವರು ಸುಧಾಕರ್‌ ಅವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಧಾಕರ್‌ ಅವರು ಸ್ಯಾನಿಟೈಸರ್‌, ಮಾಸ್ಕ್‌ಗಳಲ್ಲಿ ಹಣ ಮಾಡಲು ನಿಂತಿದ್ದಾರೆ. ಅವರ ಬೇಜಾವ್ದಾರಿ ತನದಿಂದ ಈ ರೀತಿಯ ಸಾವುಗಗಳನ್ನು ನಾವು ನೋಡಬೇಕಾಗಿದೆ ಎಂದು ಆರೋಪಿಸಿದ್ದಾರೆ.

ನಟಿ ಮಾಲಾಶ್ರೀ ಅವರ ಪತಿ, ನಿರ್ಮಾಪಕ ರಾಮು ಅವರು ಕಳೆದ ಒಂದು ವಾರದಿಂದ ಕರೋನದಿಂದ ನರಳುತ್ತಿದ್ದರು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಳೆದ ಮೂರು ದಿನಗಳ ಹಿಂದೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ವಿಧಿವಶರಾಗಿದ್ದಾರೆ.

ಇದನ್ನೂ ಓದಿ: ಇನ್ನೂ 40 ದಿನ ಜನರು ಮನೆಯಲ್ಲಿಯೇ ಇರುವುದು ಸೂಕ್ತ: ಸಚಿವ ಸುಧಾಕರ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights