ಕೋವಿಡ್‌ನ ಭಯದಿಂದ ಅಂತ್ಯಸಂಸ್ಕಾರಕ್ಕೆ ಗ್ರಾಮಸ್ಥರ ಅಡ್ಡಿ : ಪತ್ನಿ ಶವ ಸೈಕಲ್ ಮೇಲೆ ಸಾಗಿಸಿದ ವೃದ್ಧ!

ಕೋವಿಡ್‌ನ ಭಯದಿಂದ ಗ್ರಾಮಸ್ಥರು ಶವಸಂಸ್ಕಾರಕ್ಕೆ ನಿರಾಕರಿಸಿದ್ದರಿಂದ ವೃದ್ಧನೊಬ್ಬ ಪತ್ನಿಯ ಶವವನ್ನು ಸೈಕಲ್‌ನಲ್ಲಿ ಹೊತ್ತು ಗಂಟೆಗಟ್ಟಲೆ ಸವಾರಿ ಮಾಡಿದ್ದಾನೆ.

ಇದು ಉತ್ತರ ಪ್ರದೇಶದ ಜೌನ್‌ಪುರದಲ್ಲಿ ನಡೆದ ಹೃದಯ ವಿದ್ರಾವಕ ಘಟನೆ. ಜೌನ್‌ಪುರ ಜಿಲ್ಲೆಯ ಮಡಿಯಾಹು ಕೊಟ್ವಾಲಿ ಪ್ರದೇಶದ ಅಂಬರ್ಪುರ ನಿವಾಸಿ ತಿಲಖಧರಿ ಸಿಂಗ್ ಅವರ 50 ವರ್ಷದ ಪತ್ನಿ ರಾಜ್‌ಕುಮಾರಿ ದೀರ್ಘಕಾಲದವರೆಗೆ ಅನಾರೋಗ್ಯದಿಂದ ಬಳಲುತ್ತಿದ್ದರು. ಸೋಮವಾರ ಪತಿ ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದಾಗ ಆಕೆಯ ಸ್ಥಿತಿ ಹದಗೆಟ್ಟಿತು. ಹೀಗಾಗಿ ಆಕೆ ಸಾವನ್ನಪ್ಪಿದ್ದಾಳೆ. ಈ ವೇಳೆ ಆಸ್ಪತ್ರೆ ಆಂಬ್ಯುಲೆನ್ಸ್ನಲ್ಲಿ ಅವಳ ದೇಹವನ್ನು ವಾಪಸ್ ಕಳುಹಿಸಲಾಗಿದೆ.

ದೇಹವು ಕೊಳೆಯಲು ಪ್ರಾರಂಭಿಸಿದ್ದರಿಂದ ಶವಸಂಸ್ಕಾರ ಮಾಡಲು ವಯಸ್ಸಾದವನಿಗೆ ಸಹಾಯ ಮಾಡಲು ಗ್ರಾಮಸ್ಥರು ಮುಂದೆ ಬರಲಿಲ್ಲ. ಮೃತ ಪತ್ನಿ ಕೊರೊನಾ ಸೋಂಕಿತಳು ಎಂದು ಖಚಿತವಾಗದೇ ಕೊರೊನಾ ಭಯದಿಂದ ಮಹಿಳೆಯ ಅಂತ್ಯಕ್ರಿಯೆಗೆ ಗ್ರಾಮದ ಸ್ಥಳೀಯರು ಅನುಮತಿಸಲಿಲ್ಲ. ಹೀಗಾಗಿ ವೃದ್ಧನು ತನ್ನ ಹೆಂಡತಿ ಶವವನ್ನು ಬೈಸಿಕಲ್‌ನಲ್ಲಿ ಹೊತ್ತುಕೊಂಡು ಗಂಟೆಗಟ್ಟಲೆ ಸ್ಥಳದ ಸುತ್ತಲೂ ಸವಾರಿ ಮಾಡಿದ್ದಾನೆ.

ವಿಶ್ರಾಂತಿ ಪಡೆಯಲು ರಸ್ತೆ ಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಹಾಗೂ ಬೈಸಿಕಲ್ ಜೊತೆಗೆ ರಸ್ತೆಯ ಮೇಲೆ ಬಿದ್ದ ಪತ್ನಿಯ ಶವದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ದುರಂತವನ್ನು ತಡೆಯಲು ಆಡಳಿತ ವಿಫಲವಾಗಿದೆ ಎಂದು ಟೀಕಿಸಲಾಗಿದೆ.

ಕಡೆಗೆ ಈ ಬಗ್ಗೆ ಮಾಹಿತಿ ತಿಳಿದ ಜಾನ್‌ಪುರ ಪೊಲೀಸರು ಮಂಗಳವಾರ ರಾಮ್‌ಘಾಟ್‌ನಲ್ಲಿ ಮಹಿಳೆಯ ಅಂತಿಮ ವಿಧಿಗಳನ್ನು ನಡೆಸಿದ್ದಾರೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights