ಚಿರು ಅಭಿಮಾನಿಗಳಿಗೆ ಗುಡ್ ನ್ಯೂಸ್ : ನೋಡಿ ಹೇಗಿದ್ದಾನೆ ನಮ್ ಜ್ಯೂನಿಯರ್ ಚಿರು…
ಚಿರು ಅಭಿಮಾನಿಗಳಿಗೆ ಇಂದು ಜ್ಯೂನಿಯರ್ ಚಿರು ನೋಡುವ ಭಾಗ್ಯ ಸಿಕ್ಕಿದೆ. ಕಾಕತಾಳೀಯ ಎನ್ನುವಂತೆ 2020ರ ಅಕ್ಟೋಬರ್ 22ಕ್ಕೆ ಎಂಟ್ರಿಕೊಟ್ಟ ಜ್ಯೂನಿಯರ್ ಚಿರುವನ್ನ ನೋಡಲು ಕರುನಾಡು ಕಾತುರತೆಯಿಂದ ಕಾಯುತ್ತಿತ್ತು. ಇಂದು ಮೇಘನಾ ರಾಜ್ ಇದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
ಹೌದು… ಇದೇ ಫೆ.14ರಂದು ಪ್ರೇಮಿಗಳ ದಿನ ನ್ಯೂನಿಯರ್ ಚಿರು ಫೋಟೋ ಹಾಗೂ ವೀಡಿಯೋವನ್ನು ಮೇಘನಾ ಶೇರ್ ಮಾಡಿದ್ದಾರೆ. ನ್ಯೂನಿಯರ್ ಚಿರುವನ್ನು ನೋಡುತ್ತಿದ್ದಂತೆ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಮೇಘನಾ ರಾಜ್ ಫೋಸ್ಟ್ ನ್ನು ಹಂಚಿಕೊಂಡಿದ್ದಾರೆ.
ಅಣ್ಣನ ಮಗುವನ್ನು ಹಿಡಿದುಕೊಂಡು ಧ್ರುವ ಸರ್ಜಾ ಸಂಭ್ರಮಿಸಿದ ಕ್ಷಣ ಸದ್ಯ ಎಲ್ಲರಿಗೂ ಸಿಕ್ಕಿದೆ. ಚಿರು ಅಗಲಿಕೆ ಬಳಿಕ ಕುಟುಂಬದಲ್ಲಿ ಹೊಸ ನಂದಾದೀಪ ಬೆಳಗಿದ ನ್ಯೂನಿಯರ್ ಚಿರು ಹುಟ್ಟುತ್ತಲೇ ಅಭಿಮಾನಿಗಳ ಬಳಗವನ್ನು ಹೊಂದಿದ್ದಾನೆ.
ಕಳೆದ ಜೂನ್ 7ರಂದು ಚಿರಂಜೀವಿ ಸರ್ಜಾ ಹಠಾತ್ತಾಗಿ ಹೃದಯಾಘಾತದಿಂದ ನಿಧನ ಹೊಂದಿದ್ದು ಕುಟುಂಬಕ್ಕೆ ದೊಡ್ಡ ಅಘಾತ ನೀಡಿತ್ತು. ಈ ಘಟನೆ ಬಳಿಕ ಚಿರು ಕುಟುಂಬದಲ್ಲಿ ನುಗುವ ಹಬ್ಬ ಸೃಷ್ಟಿಸಿದ್ದು ನ್ಯೂನಿಯರ್ ಚಿರು. ಹೀಗಾಗಿ ಸದ್ಯ ಜ್ಯೂನಿಯರ್ ಚಿರುವನ್ನು ನೋಡುವ ಅವಕಾಶ ಮೇಘನಾ ರಾಜ್ ಮಾಡಿಕೊಟ್ಟಿದ್ದು ಟ್ವೀಟರ್ ನಲ್ಲಿ ವೀಡಿಯೋವನ್ನು ಫೋಸ್ಟ ಮಾಡಿದ್ದಾರೆ.