ದೇಶದಲ್ಲಿ ಒಂದೇ ದಿನ 4 ಲಕ್ಷ ಕೋವಿಡ್ -19 ಕೇಸ್ : 4,092 ಜನ ಬಲಿ!
ದೇಶದಲ್ಲಿ ಕೊರೊನಾ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು ಪ್ರಕರಣಗಳ ಸಂಖ್ಯೆ ಕಡಿಮೆಯಾಗುವ ಲಕ್ಷಣಗಳೇ ಕಾಣಸಿಗುತ್ತಿಲ್ಲ.
ಕೇಂದ್ರ ಆರೋಗ್ಯ ಇಲಾಖೆಯ ಪ್ರಕಾರ, ದೇಶದಲ್ಲಿ ಒಂದೇ ದಿನ 4 ಲಕ್ಷ ಕೋವಿಡ್ -19 ಕೇಸ್ ದಾಖಲಾಗಿದ್ದು, ಈವರೆಗೆ ಒಟ್ಟು ಪ್ರಕರಣಗಳ ಸಂಖ್ಯೆ 2,18,92,676 ಕ್ಕೆ ತಲುಪಿದೆ. ಒಂದೇ ದಿನ 4,092 ಜನ ಬಲಿಯಾಗಿದ್ದು ಈವರೆಗೆ ವೈರಸ್‌ನಿಂದ ಸಾವನ್ನಪ್ಪಿದವರ ಸಂಖ್ಯೆ 2.38 ಲಕ್ಷಕ್ಕೂ ಅಧಿಕವಾಗಿದೆ.
ಭಾರತ ಸತತ ಮೂರನೇ ದಿನವೂ 4,01,078 ಹೊಸ ಕೋವಿಡ್ -19 ಪ್ರಕರಣಗಳ ಏರಿಕೆಯಾಗಿದ್ದು, ಕಳೆದ ಎರಡು ದಿನಗಳಿಂದ ಸ್ವಲ್ಪ ಕುಸಿತ ಕಂಡಿದೆ. ಗುರುವಾರ 4.12 ಲಕ್ಷ ಮತ್ತು ಶುಕ್ರವಾರ 4.14 ಲಕ್ಷ ಪ್ರಕರಣಗಳನ್ನು ಕಂಡಿದೆ.
ಕಳೆದ 24 ಗಂಟೆಗಳಲ್ಲಿ ಗರಿಷ್ಠ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದ ಮೊದಲ ಐದು ರಾಜ್ಯಗಳಲ್ಲಿ ಮಹಾರಾಷ್ಟ್ರದಲ್ಲಿ 54,022 ಪ್ರಕರಣಗಳು, ನಂತರ ಕರ್ನಾಟಕದಲ್ಲಿ 48,781 ಪ್ರಕರಣಗಳು, ಕೇರಳ 38,460 ಪ್ರಕರಣಗಳು, ಉತ್ತರ ಪ್ರದೇಶ 27,763 ಪ್ರಕರಣಗಳು ಮತ್ತು ತಮಿಳುನಾಡು 26,465 ಪ್ರಕರಣಗಳು ದಾಖಲಾಗಿವೆ.
ಆಮ್ಲಜನಕ, ಆಸ್ಪತ್ರೆ ಹಾಸಿಗೆಗಳು ಮತ್ತು ಲಸಿಕೆ ಪೂರೈಕೆಯ ಕೊರತೆಯಿಂದ ಬಳಲುತ್ತಿರುವ ಭಾರತಕ್ಕೆ 3,000 ಟನ್‌ಗೂ ಹೆಚ್ಚು ವಿದೇಶಿ ನೆರವು ದೊರೆತಿದೆ.

