ಕಾಬೂಲ್ ಶಾಲೆ ಬಳಿ ಬಾಂಬ್ ಸ್ಪೋಟ : ಸಾವಿನ ಸಂಖ್ಯೆ 50ಕ್ಕೇರಿಕೆ!
ಕಾಬೂಲ್ ಶಾಲೆ ಬಳಿ ಸಂಭವಿಸಿದ ಬಾಂಬ್ ಸ್ಪೋಟದಲ್ಲಿ ಸಾವಿನ ಸಂಖ್ಯೆ 50ಕ್ಕೇರಿಕೆಯಾಗಿದೆ ಎಂದು ತಿಳಿದುಬಂದಿದೆ.
ಶುಕ್ರವಾರ ಸಂಜೆ 4.30 ರ ಸುಮಾರಿಗೆ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ಸಯೀದ್ ಉಲ್ ಶುಹಾದಾ ಬಾಲಕಿಯರ ಶಾಲೆಯೊಂದರ ಬಳಿ ಬಾಂಬ್ ಸ್ಪೋಟಗೊಂಡಿತ್ತು.
ಹೆಣ್ಣುಮಕ್ಕಳ ಶಾಲೆಯನ್ನು ಗುರಿಯಾಗಿರಿಸಿಕೊಂಡು ಉಗ್ರರು ದಾಳಿ ಮಾಡಿದ್ದಾರೆ. ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ವಿದ್ಯಾರ್ಥಿನಿಯರೇ ಇದ್ದು, ಶಾಲೆಯ ಹಲವು ಅಧಿಕಾರಿಗಳು ಸಹ ಇದ್ದರು ಎಂದು ತಿಳಿದುಬಂದಿದೆ. ಘಟನೆಯಲ್ಲಿ 100ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಇದೀಗ ಸಾವಿನ ಸಂಖ್ಯೆ 50ಕ್ಕೆ ಏರಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ.
ಇನ್ನು ದಾಳಿಯ ಜವಾಬ್ದಾರಿಯನ್ನು ಯಾವುದೇ ಗುಂಪು ವಹಿಸಿಕೊಂಡಿಲ್ಲ ಎನ್ನಲಾಗುತ್ತಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಮುಂದಿನ ವಾರ ಮುಸ್ಲಿಂ ಪವಿತ್ರ ತಿಂಗಳಾದ ರಂಜಾನ್ ಅಂತ್ಯವನ್ನು ಸೂಚಿಸುವ ಈದ್-ಅಲ್-ಫಿತರ್ಗಿಂತ ಮುಂಚಿತವಾಗಿ ನಿವಾಸಿಗಳು ಶಾಪಿಂಗ್ ಮಾಡುತ್ತಿದ್ದರಿಂದ ಸಂದರ್ಭವನ್ನು ಗುರಿಯಾಗಿಸಿಕೊಂಡು ಉಗ್ರರು ಬಾಂಬ್ ಸಿಡಿಸಿದ್ದಾರೆ.