ರಾಜ್ಯಾದ್ಯಂತ ನಾಳೆಯಿಂದ ಸಂಪೂರ್ಣ ಲಾಕ್ ಡೌನ್ : ಬೆಂಗಳೂರು ಮಾರುಕಟ್ಟೆ, ನಿಲ್ದಾಣಗಳಲ್ಲಿ ಜನವೋ ಜನ!

ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ನಾಳೆಯಿಂದ ಕಠಿಣ ನಿಯಮ ಜಾರಿಗೊಳಿಸಲಾಗುತ್ತಿದೆ. ಹೀಗಾಗಿ ರೈಲ್ವೆ ನಿಲ್ದಾಣಗಳಲ್ಲಿ ಮಾರುಕಟ್ಟೆಗಳಲ್ಲಿ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ ಜನ ಸಾಗರವೇ ನೆರೆದಿದೆ.

ಹೌದು… ನಾಳೆಯಿಂದ ತುರ್ತು ಸಂದರ್ಭ ಬಿಟ್ಟರೆ ಜನ ಹೊರಬರುವಂತಿಲ್ಲ. ಬೈಕ್ ತೆಗೆದುಕೊಂಡು ಸುಖಾ ಸುಮ್ಮನೆ ಸುತ್ತುವಂತಿಲ್ಲ. ಒಂದೆಡೆ ಸೇರುವಂತಿಲ್ಲ. ಸಂಪೂರ್ಣವಾಗಿ ಲಾಕ್ ಡೌನ್ ಮಾಡಲಾಗುತ್ತದೆ. ಹೀಗಾಗಿ ಜನ ಇಂದೇ ಊರತ್ತ ಕುಟುಂಬ ಸಮೇತವಾಗಿ ಹೊರಟಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ಜನ ಜಾತ್ರೆಯಂತೆ ತುಂಬಿಕೊಂಡಿದ್ದಾರೆ. ಚಿಕ್ಕ ಮಕ್ಕಳು ವಯಸ್ಸಾದವರು ಕುಟುಂಬ ಸಮೇತ ಊರತ್ತ ಪ್ರಯಾಣ ಬೆಳಸಿದ್ದಾರೆ.

ಮಾಸ್ಕ್ ಇಲ್ಲ, ಸಾಮಾಜಿಕ ಅಂತರವಿಲ್ಲ, ಸ್ಯಾನಿಟೈಸರ್ ಅಂತೂ ಕೇಳುವ ಹಾಗೇ ಇಲ್ಲ. ಮಾರುಕಟ್ಟೆಯಲ್ಲು ಜನ ತುಂಬಿ ಹೋಗಿದ್ದಾರೆ. ಪ್ರತಿನಿತ್ಯ ದಿನ ಬಳಕೆ ವಸ್ತುಗಳ ಖರೀದಿಗೆ ಅವಕಾಶವಿದ್ದರೂ ಜನ ಇಂದೇ ಅಗತ್ಯ ವಸ್ತುಗಳ ಖರೀದಿಗೆ ಮುಂದಾಗಿದ್ದಾರೆ.

ಇನ್ನೂ ಖಾಸಗಿ ವಾಹನಗಳ ಮೂಲಕವೂ ಜನ ತಮ್ಮ ಊರುಗಳತ್ತ ಹೊರಟಿದ್ದು ಅಲ್ಲಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights