ಇಬ್ಬರು ಹೆಂಡತಿಯರ ಮುದ್ದಿನ ಗಂಡ ಒಂದೇ ಪಂಟಪದಲ್ಲಿ ಒಟ್ಟಿಗೆ ಮದುವೆಯಾದ…!

ಇಬ್ಬರು ಹೆಂಡತಿಯರ ಮುದ್ದಿನ ಗಂಡ ಒಂದೇ ಪಂಟಪದಲ್ಲಿ ಒಟ್ಟಿಗೆ ಮದುವೆಯಾದ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ. ಇದೇ ಜನವರಿ 3ರಂದು ಛತ್ತೀಸ್‌ಗಢದ ಬಸ್ತಾರ್ ಗ್ರಾಮದಲ್ಲಿ ಇಬ್ಬರು ಯುವತಿಯರನ್ನು ಒಬ್ಬನೇ ಯುವಕ ವಿವಾಹವಾಗಿದ್ದಾನೆ. ಮಾತ್ರವಲ್ಲದೇ ಈ ಮದುವೆ ಗ್ರಾಮಸ್ಥರ ಸಮ್ಮುಖದಲ್ಲೇ ನೆರವೇರಿದೆ.

ಹುಡುಗಿಯರಾದ ಹಸೀನಾ ಮತ್ತು ಸುಂದರಿ ಇಬ್ಬರೂ ವರನಾದ ಚಂದು ಮೌರ್ಯ ಅವರನ್ನು ಇಷ್ಟಪಡುತ್ತಿದ್ದರು. ಹೀಗಾಗಿ ಅವರು ಬಸ್ತಾರ್‌ನ ಟಿಕಾರ ಲೋಹ್ಂಗ ಗ್ರಾಮದಲ್ಲಿ ಅದೇ ಮಂಟಪದಲ್ಲಿ ಅವರನ್ನು ವಿವಾಹವಾದರು.

“ನಾನು ಅವರಿಬ್ಬರನ್ನೂ ಇಷ್ಟಪಡುತ್ತಿದ್ದೆ ಮತ್ತು ಅವರು ಕೂಡ ನನ್ನನ್ನು ಇಷ್ಟಪಟ್ಟರು. ನಾವು ಎಲ್ಲಾ ಗ್ರಾಮಸ್ಥರ ಸಮ್ಮುಖದಲ್ಲಿ ಒಮ್ಮತದಿಂದ ವಿವಾಹವಾದೆವು. ಆದಾಗ್ಯೂ, ನನ್ನ ಹೆಂಡತಿಯರ ಕುಟುಂಬ ಸದಸ್ಯರು ನಮ್ಮ ವಿವಾಹ ಕಾರ್ಯಕ್ಕೆ ಬರಲಿಲ್ಲ” ಎಂದು ಚಂದು ಹೇಳಿದ್ದಾರೆ.

ಆಶ್ಚರ್ಯವೇನೆಂದರೆ ಈ ಮದುವೆ ಸಮಾರಂಭಕ್ಕೆ ಅಧಿಕ ಸಂಖ್ಯೆಯಲ್ಲಿ ಗ್ರಾಮಸ್ಥರು ಹಾಜರಾಗಿದ್ದರೂ ಅದರ ವಿರುದ್ಧ ಯಾರೂ ಕೂಡ ಧ್ವನಿ ಎತ್ತಲಿಲ್ಲ. ಹಸೀನಾ 19 ವರ್ಷ, ಸುಂದರಿ 21 ವರ್ಷ, ಇಬ್ಬರೂ ವಧುಗಳು ತಮ್ಮ 12 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅವರ ಮದುವೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅದೂ ಅದ್ಧೂರಿ ಆಚರಣೆಯೊಂದಿಗೆ, ಬಸ್ತಾರ್ ಜಿಲ್ಲೆಯಲ್ಲಿ ಇದು ಮೊದಲ ಬಾರಿಗೆ ಎಲ್ಲಾ ಗ್ರಾಮಸ್ಥರ ಮುಂದೆ ಇಂತಹ ವಿವಾಹ ನಡೆದಿದೆ.

ಹಿಂದೂ ವಿವಾಹ ಕಾಯ್ದೆಯಲ್ಲಿ ಈ ರೀತಿಯ ವಿವಾಹ ಅಪರಾಧವಾಗಿದೆ. ಆದರೆ ಇದರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights