ರಾಜ್ಯಕ್ಕೆ ಮತ್ತೆ 2 ವಾರ ಲಾಕ್ಡೌನ್ ಪಕ್ಕಾ? : ಜೂನ್ 7ರವರೆಗೆ ಲಾಕ್ಡೌನ್ ವಿಸ್ತರಣೆ?

ಕೊರೊನಾ ತಡೆಗೆ ರಾಜ್ಯದಲ್ಲಿ ಜಾರಿಯಲ್ಲಿರುವ ಲಾಕ್ಡೌನ್ ಮೇ 24ಕ್ಕೆ ಕೊನೆಗೊಳ್ಳಲಿದ್ದು ಲಾಕ್ಡೌನ್ ಮುಂದುವರೆಯುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಹೌದು… ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದಿದ್ದು ರಾಜ್ಯ ವಿಪತ್ತು ಸಮಿತಿ ಇನ್ನೂ ಎರಡು 2 ವಾರಗಳವರೆಗೆ ಲಾಕ್ ಡೌನ್ ವಿಸ್ತರಣೆ ಮಾಡುವಂತೆ ಮನವಿ ಮಾಡಿದೆ. ಹೀಗಾಗಿ ಮೇ. 24 ತಾರೀಕು ಮುಗಿಯಬೇಕಿದ್ದ ಲಾಗ್ ಡೌನ್ ವಿಸ್ತರಿಸಲಾಗಿದೆ. ರಾಜ್ಯದಲ್ಲಿ ಮುಂದಿನ 2 ವಾರ ಲಾಕ್ ಡೌನ್  ಮುಂದುವರೆಸಲು ಮುಖ್ಯಮಂತ್ರಿ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈಗಾಗಲೇ ರಾಜ್ಯ ರಾಜದಾನಿಯಲ್ಲಿ ಕೊರೊನಾ ಸದ್ದಿಲ್ಲದೇ ಆಟವಾಡುತ್ತಿದೆ. ನಗರದಲ್ಲಿ ಮಾತ್ರವಲ್ಲದೇ ಹಳ್ಳಿಗಳಲ್ಲೂ ಅಬ್ಬರಿಸುತ್ತಿದೆ. ಲಾಕ್ ಡೌನ್ ಮುಂದುವರೆಸುವುದರಿಂದ ಹಾಟ್ ಸ್ಪಾಟ್ ಆಗಿರುವ ಬೆಂಗಳೂರಿನಿಂದ ಜನ ಗ್ರಾಮಗಳಿಗೆ ಹೋಗುವುದು, ಗ್ರಾಮಗಳಿಂದ ನಗರಕ್ಕೆ ಜನ ಬರುವುದಕ್ಕೆ ಕಡಿವಾಣ ಬಿದ್ದಂತಾಗುತ್ತದೆ. ಹೀಗಾಗಿ ಲಾಕ್ಡೌನ್ ವಿಸ್ತರಣೆಯಿಂದ ಕೊರೊನಾ ಸೋಂಕು ಹರಡುವುದನ್ನ ತಡೆಯಬಹುದು ಎಂದು ಕಾರ್ಯದರ್ಶಿ ಸಿಎಸ್ ರವಿಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಹೀಗಾಗಿ ರಾಜ್ಯದಲ್ಲಿ ಲಾಕ್ ಡೌನ್ ಮುಂದುವರೆಯುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಜೊತೆಗೆ ಈ ಬಗ್ಗೆ ಇಂದು ಸಿಎಂ ನಿವಾಸದಲ್ಲಿ ಎಲ್ಲಾ ಸಚಿವರೊಂದಿಗೆ ಸಭೆ ನಡೆಯಲಿದ್ದು ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ. ಬಳಿಕ ಅಧಿಕೃತವಾಗಿ ಸಿಎಂ ಈ ಬಗ್ಗೆ ಘೋಷಣೆ ಮಾಡಲಿದ್ದಾರೆ. ಇಂದು ಸಂಜೆ ರಾಜ್ಯದ ಲಾಕ್ ಡೌನ್ ಭವಿಷ್ಯ ನಿರ್ಧಾರವಾಗಲಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights