ಬಿಜೆಪಿ ಸೇರಿದ್ದು ತಪ್ಪಾಯಿತು; ಟಿಎಂಸಿಗೆ ಹಿಂದಿರುಗಲು ಅವಕಾಶ ಕೊಡಿ: ಬಂಗಾಳ ಬಿಜೆಪಿ ಸೇರಿದ್ದವರ ಪರದಾಟ!

ಪಶ್ಚಿಮ ಬಂಗಾಳ ಚುನಾವಣೆಗೂ ಮುನ್ನ ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ಹಲವರು ಇದೀಗ ಮತ್ತೆ ಟಿಎಂಸಿಗೆ ವಾಪಸ್‌ ಆಗುವ ಇಂಗಿತ ವ್ಯಕ್ತಡಿಸುತ್ತಿದ್ದಾರೆ. ಬಿಜೆಪಿ ಸೇರಿದ್ದು ನಮ್ಮ ತಪ್ಪಾಗಿದೆ. ನಮ್ಮನ್ನು ಮತ್ತೆ ಟಿಎಂಸಿಗೆ ಸೇರಿಸಿಕೊಳ್ಳಿ ಎಂದು ಒಬ್ಬರಾದ ನಂತರ ಒಬ್ಬರು ಮಮತಾ ಬ್ಯಾನರ್ಜಿ ಅವರಲ್ಲಿ ಮನವಿ ಮಾಡುತ್ತಿದ್ದಾರೆ.

ಟಿಎಂಸಿಯಿಂದ ಬಿಜೆಪಿಗೆ ಗುಂಪು ಗುಂಪಾಗಿ ವಲಸೆ ಹೋಗಿದ್ದ ಹಲವಾರು ರಾಜಕೀಯ ಮುಖಂಡರು ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಸೋಲುಂಡ ಬಳಿಕ ಮತ್ತೆ ಟಿಎಂಸಿ ಸೇರುವುದಾಗಿ ಹೇಳುತ್ತಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಸರಳಾ ಮುರ್ಮು, ಟಿಎಂಸಿಗೆ ಮರಳುವ ಇಚ್ಚೆಯನ್ನು ವ್ಯಕ್ತಪಡಿಸಿದ್ದಾರೆ. ಬ್ಯಾನರ್ಜಿ ಅವರ ಮಾಜಿ ಸಹಾಯಕಿ ಸೋನಾಲಿ ಗುಹಾ ಅವರೂ ಕೂಡ ಶನಿವಾರ ತಾವು ಟಿಎಂಸಿ ಸೇರುವುದಾಗಿ ಮನವಿ ಮಾಡಿದ್ದರು. ಇದಾದ ಒಂದು ದಿನದ ನಂತರ ಮುರ್ಮು ಕೂಡ ಟಿಎಂಸಿ ಸೇರುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.

ಬಿಜೆಪಿಗೆ ಸೇರ್ಪಡೆಗೊಂಡಿರುವುದು ತನ್ನ ಕಡೆಯಿಂದ ತಪ್ಪಾಗಿದೆ. ಅದಕ್ಕಾಗಿ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಲ್ಲಿ ಕ್ಷಮೆ ಕೇಳುತ್ತೇನೆ. ಅವರು ನನ್ನನ್ನು ಒಪ್ಪಿಕೊಂಡರೆ, ನಾನು ಅವರೊಂದಿಗೆ ಇರುತ್ತೇನೆ ಮತ್ತು ಪಕ್ಷಕ್ಕಾಗಿ ಶ್ರದ್ಧೆಯಿಂದ ಕೆಲಸ ಮಾಡುತ್ತೇನೆ ಎಂದು ಮುರ್ಮು ಹೇಳಿದ್ದಾರೆ.

ಟಿಎಂಸಿ ಮಾಜಿ ಶಾಸಕಿ ಸೋನಾಲಿ ಗುಹಾ ಅವರು ಶನಿವಾರ ಬ್ಯಾನರ್ಜಿಗೆ ಪತ್ರ ಬರೆದಿದ್ದು, ಪಕ್ಷವನ್ನು ತೊರೆದಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರೆ. ದಕ್ಷಿಣ 24 ಪರಗಣ ಜಿಲ್ಲೆಯ ಸತ್‌ಗಚಿಯಾದ ನಾಲ್ಕು ಬಾರಿ ಶಾಸಕಿಯಾಗಿದ್ದ ಅವರು ಸಾಮಾಜಿಕ ಮಾಧ್ಯಮದಲ್ಲಿ ಪತ್ರವೊಂದನ್ನು ಹಂಚಿಕೊಂಡಿದ್ದು, ‘ಒಂದು ಮೀನು ನೀರಿನಿಂದ ಹೊರಗುಳಿಯಲು ಸಾಧ್ಯವಿಲ್ಲ, ನಾನು ನೀವಿಲ್ಲದೆ ಬದುಕಲು ಸಾಧ್ಯವಿಲ್ಲ.ನಾನು ನಿಮ್ಮ ಕ್ಷಮೆ ಕೋರುತ್ತೇನೆ. ನೀವು ನನ್ನನ್ನು ಕ್ಷಮಿಸದಿದ್ದರೆ, ನನಗೆ ಬದುಕಲು ಸಾಧ್ಯವಾಗುವುದಿಲ್ಲ.
ದಯವಿಟ್ಟು ನನಗೆ ಹಿಂತಿರುಗಲು ಅವಕಾಶ ಕೊಡಿ ಎಂದು ಪತ್ರದಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಬಂಗಾಳದಲ್ಲಿ ಸ್ಪರ್ಧಿಸಿ ಗೆದ್ದ ಇಬ್ಬರು ಬಿಜೆಪಿ ಸಂಸದರ ರಾಜೀನಾಮೆ…!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights