FACT CHECK | 2024 ಕ್ಕೆ ಮತ್ತೊಮ್ಮೆ ಮೋದಿ ಎಂಬ ಪೋಸ್ಟ್‌ರ್ ಅನ್ನು ರಾಹುಲ್ ಗಾಂಧಿ ಪ್ರದರ್ಶಿಸಿದ್ದಾರೆ ಎಂದು ಸುಳ್ಳು ಪೋಸ್ಟ್‌ ಹಂಚಿಕೊಂಡ ಬಿಜೆಪಿ ಬೆಂಬಲಿಗರು

ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದ್ದು ರಾಹುಲ್ ಗಾಂಧಿ ಪೋಸ್ಟ್‌ರ್‌ವೊಂದನ್ನು ಪ್ರದರ್ಶಿಸಿದ್ದು, 2024ರ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿ ಅಧಿಕಾರಕ್ಕೆ ಬರಲಿದ್ದಾರೆ ಎಂದು ರಾಹುಲ್ ಗಾಂಧಿ ಹೇಳುತ್ತಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

2024 ಕ್ಕೆ ಮತ್ತೊಮ್ಮೆ ಮೋದಿ, ಇದು ಮೋದಿಜಿಯ ನಿಜವಾದ ತಾಕತ್ತು, ಈ ಪೋಸ್ಟ್‌ ಎಲ್ಲರಿಗೂ ಶೇರ್ ಮಾಡಿ ಜೈ ಶ್ರೀರಾಮ್ ಎಂಬ ಹೇಳಿಕೆಯೊಂದಿಗೆ ಫೊಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ರಾಹುಲ್ ಗಾಂಧಿನೇ ಹೇಳುತ್ತಿರುವಾಗ ನಮ್ಮ ಸಪೋರ್ಟ್ ಮೋದಿಗೆ ಎಂಬ ಬರಹವಿರುವ ಪೋಸ್ಟ್‌ಅನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.

Image

ಹಾಗಿದ್ದರೆ ನಿಜವಾಗಿಯೂ ರಾಹುಲ್ ಗಾಂಧಿ 2024ಕ್ಕೆ ಮೋದಿ ಮತ್ತೊಮ್ಮೆ ಎಂಬ ಪೋಸ್ಟರ್ ಅನ್ನು ಪ್ರದರ್ಶಿಸಿದ್ದಾರೆಯೇ? ಅಥವಾ ಇದು ನಕಲಿ ಚಿತ್ರವೇ ಎಂಬುದನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಲೆನ್ಸ್‌ನಲ್ಲಿ ಸರ್ಚ್ ಮಾಡಿದಾಗ, ಮೂಲ ಫೋಟೋ ಪತ್ತೆಯಾಗಿದೆ. ಭಾರತ್ ಜೋಡೋ ಯಾತ್ರೆಯ ವೇಳೆ ರಾಹುಲ್ ಗಾಂಧಿ ಬಿಜೆಪಿಯನ್ನಿ ಟೀಕಿಸುತ್ತಾ ಬಿಜೆಪಿ ದ್ವೇಷವನ್ನು ಹಂಚುತ್ತಿದೆ, ಆದರೆ ಕಾಂಗ್ರೆಸ್ ಪ್ರೀತಿ ಹಂಚಲಿದ್ದಾರೆ ಎಂದು ಹೇಳಿದ್ದರು.

ಕಾಂಗ್ರೆಸ್ ಕಾರ್ಯಕರ್ತರು ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆದಿದ್ದಾರೆ. ಎಲ್ಲೇ ಹೋದರೂ ಪ್ರೀತಿಯನ್ನು ಹಂಚುತ್ತಾರೆ. ಯಾವುದೇ ಜಾತಿ, ಧರ್ಮ ನೋಡದೆ ಎಲ್ಲರೊಂದಿಗೆ ಬೆರೆಯುತ್ತಾರೆ. ನಾನು ಎಲ್ಲೇ ಹೋದರು ನಮ್ಮ ನಾಯಕರ ಹೆಸರನ್ನು ಹೇಳುತ್ತೇನೆ ಎಂದು ಹೇಳಿದರು.

ಇದೇ ಪೋಸ್ಟ್‌ಅನ್ನು ಹಿಂದೆಯೂ ಎಡಿಟ್ ಮಾಡಿ ‘ನಾನೇ ನಿಜವಾದ ಪನೌತಿ’ ಎಂಬ ಬರಹದೊಂದಿಗೆ ರಾಹುಲ್ ಗಾಂಧಿ ಪೋಸ್ಟ್‌ಟರ್‌ಅನ್ನು ಪ್ರದರ್ಶಿಸಿದ್ದಾರೆ ಎಂದು ಹಂಚಿಕೊಳ್ಳಲಾಗಿತ್ತು.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್‌ ಗಾಂಧಿಯವರ ‘ಪನೌತಿ’ ಎಂಬ ಹೇಳಿಕೆ ಕುರಿತಾಗಿ ರಾಜಕೀಯ ಕೆಸರೆರಚಾಟದ ನಡೆದಿತ್ತು ಈ ವೇಳೆ ಬಿಜೆಪಿ ಬೆಂಬಲಿಗರು ಮೂಲ ಫೋಟೊವನ್ನು ಎಡಿಟ್ ಮಾಡಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದರು.

ಭಾರತ್ ಜೋಡೋ ಯಾತ್ರೆಯ ವೇಳೆ ರಾಹುಲ್ ಗಾಂಧಿ ಪ್ರದರ್ಶಿಸಿದ ಫೊಟೋವನ್ನು ಎಡಿಟ್ ಮಾಡಿ 2024ಕ್ಕೆ ಮತ್ತೊಮ್ಮೆ ಮೋದಿ ಎಂದು ಬದಲಾಯಿಸಿ ಹಂಚಿಕೊಂಡಿರುವುದು ಸ್ಪಷ್ಟವಾಗಿದೆ.

ಈ ಹಿಂದೆಯೂ ರಾಹುಲ್ ಗಾಂಧಿ ಬಿಜೆಪಿಯ ಚಿಹ್ನೆ ಕಮಲದ ಗುರುತಿರುವ ಟೀ ಶರ್ಟ್ ಧರಿಸಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಮತ್ತು ಫೇಕ್ ಪೋಟೋವನ್ನು ಬಿಜೆಪಿ ಬೆಂಬಲಿಗರು ಹಂಚಿಕೊಂಡಿದ್ದರು. ಹಾಗಾಗಿ ಇದೂ ಕೂಡ ಎಡಿಟೆಡ್ ಮಾಡಲಾದ ಚಿತ್ರ ಎಂಬುದು ಸ್ಪಷ್ಟವಾಗಿದೆ.

We found that the image of Rahul Gandhi has been altered to add the BJP's symbol on the t-shirt.

ಒಟ್ಟಾರೆಯಾಗಿ ಹೇಳುವುದಾದರೆ, ಭಾರತ್ ಜೋಡೋ ಯಾತ್ರೆಯ ವೇಳೆ ರಾಹುಲ್ ಗಾಂಧಿ ಪ್ರದರ್ಶಿಸಿದ ಫೊಟೋವನ್ನು ಎಡಿಟ್ ಮಾಡುವ ಮೂಲಕ ಸುಳ್ಳು ಮತ್ತು ಫೇಕ್ ಫೋಟೊವನ್ನು ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಈ ಕಂಪನಿಯಲ್ಲಿ ಮುಸ್ಲಿಮರಿಗೆ ಮಾತ್ರ ಉದ್ಯೋಗವಂತೆ, ಹಿಂದೂಗಳಿಗಿಲ್ಲವಂತೆ ಹೌದೆ?


 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights