ಪತಿಗೆ ಚಾಲೆಂಜ್ ಹಾಕಿದ ಅನುಷ್ಕಾ : ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಯ್ತು ವಿರುಷ್ಕಾ ಸವಾಲ್!

ಸದಾ ಕಾಲ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ವಿರುಷ್ಕಾ ಮತ್ತೊಂದು ಹೊಸ ವಿಡಿಯೋವನ್ನು ಅಪ್ಲೋಡ್ ಮಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಈ ಜೋಡಿ ಅಭಿಮಾನಿಗಳಿಗೆ ಟಾಸ್ಕ್ವೊಂದನ್ನು ನೀಡಿದ್ದು ಕೌಶಲ್ಯವನ್ನು ಪ್ರದರ್ಶಿಸುವಂತೆ ಕೇಳಿದ್ದಾರೆ.

ಹೌದು… ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಬ್ಬಿ ವಿರಾಟ್ ಕೊಹ್ಲಿ ಅವರೊಂದಿಗೆ ಬ್ಯಾಟ್ ಬ್ಯಾಲೆನ್ಸ್ ಚಾಲೆಂಜ್ ಹಾಕಿದ್ದಾರೆ. ಇವರಿಬ್ಬರಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದೇ ಮೋಜಿನ ಸಂಗತಿ. ಇನ್ಸ್ಟಾಗ್ರಾಮ್ ನಲ್ಲಿ ಅನುಷ್ಕಾ ಈ ಬ್ಯಾಟ್ ಬ್ಯಾಲೆನ್ಸ್ ಚಾಲೆಂಜ್ ಮಾಡುವ ಹೊಸ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

ಅಭಿಮಾನಿಗಳು ನಟಿಯ ಬ್ಯಾಟ್ ಬ್ಯಾಲೆನ್ಸ್ ಚಾಲೆಂಜ್ ಅನ್ನು ಮೆಚ್ಚಿಕೊಂಡಿದ್ದಾರೆ. ಹಾಗಾದರೆ ಇಬ್ಬರ ನಡುವೆ ಯಾರು ಸವಾಲನ್ನು ಗೆಲ್ಲುತ್ತಾರೆ ಎಂದು ಕೆಳಗಿನ ವೀಡಿಯೊವನ್ನು  ನೋಡಿ.

https://www.youtube.com/watch?v=VlaEeQTAmHg

ವಿಡಿಯೋ ಶೇರ್ ಮಾಡುವ ಮೂಲಕ “ವಿರಾಟ್ ಕೊಹ್ಲಿಯೊಂದಿಗೆ ಟಕಾಟಾಕ್ ಬ್ಯಾಟ್‌ಬ್ಯಾಲೆನ್ಸ್ ಚಾಲೆಂಜ್ ಮಾಡುವುದನ್ನು ನಾನು ಆನಂದಿಸಿದೆ! ನೀವೂ ಸಹ ಬ್ಯಾಟ್‌ಬ್ಯಾಲೆನ್ಸ್ ಚಾಲೆಂಜ್‌ನಲ್ಲಿ ಭಾಗವಹಿಸುವ ಮೂಲಕ ನಿಮ್ಮ ಕೌಶಲ್ಯಗಳನ್ನು ನಮಗೆ ತೋರಿಸಿ” ಎಂದು ಅನುಷ್ಕಾ ಬರೆದಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights