ರಾಕಿಂಗ್ ಸ್ಟಾರ್ ಹುಟ್ಟು ಹಬ್ಬಕ್ಕೆ ಅಭಿಮಾನಿ ನಡೆಸಿದ ತಯಾರಿ ಕಂಡು ಶಾಕ್ ಆದ ಮಂದಿ…!
2019ರಲ್ಲಿ ಕೆಜಿಎಫ್ ಮೂಲಕ ಬಾಕ್ಸ್ ಆಪೀಸ್ ನಲ್ಲಿ ಭಾರೀ ಸದ್ದು ಮಾಡಿದ್ದ ರಾಕಿಂಗ್ ಸ್ಟಾರ್ ಯಶ್ ಗೆ ಇನ್ನೇನು ಹುಟ್ಟುಹಬ್ಬದ ಸಂಭ್ರಮ ಆಗಮಿಸ್ತಾಯಿದೆ. ಬರ್ಥಡೇ ಸೆಲೆಬ್ರೇಷನ್ಸಗೆ ಅಭಿಮಾನಿಗಳು ಸಖತ್ ತಯಾರಿ ಕೂಡ ನಡೆಸಿದ್ದಾರೆ. ಆದರೆ ಇಲ್ಲೊಬ್ಬ ಅಭಿಮಾನಿ ತಮ್ಮ ಪ್ರೀತಿಯ ಸ್ಟಾರ್ ಹುಟ್ಟುಹಬ್ಬಕ್ಕೆ ಒಂದಲ್ಲಾ.. ಎರಡಲ್ಲಾ.. ಬರೋಬ್ಬರಿ 5 ಸಾವಿರ ಕೆ.ಜಿ ಕೇಕ್ ಸಿದ್ಧಪಡಿಸಲು ತಯಾರಿಸ ನಡೆಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾನೆ.
ಹೌದು… ರಾಕಿಂಗ್ ಸ್ಟಾರ್ ಯಶ್ ಹುಟ್ಟು ಹಬ್ಬಕ್ಕೆ ಅಭಿಮಾನಿಯೊಬ್ಬ 5 ಸಾವಿರ ಕೆ.ಜಿ ಕೇಕ್ ಸಿದ್ಧಪಡಿಸುತ್ತಿದ್ದಾನೆ. ಹೊಸ ವರ್ಷಕ್ಕೆ ಮುದ್ದಿನ ಮಗಳ ಮೂಲಕ ಶುಭಾಷಯ ತಿಳಿಸಿದ್ದ ಯಶ್ ಇದೇ ತಿಂಗಳಲ್ಲಿ ಹುಟ್ಟಹಬ್ಬ ಕೂಡ ಆಚರಿಸಿಕೊಳ್ಳಲಿದ್ದಾರೆ.

ಜನವರಿ 8 ರಂದು ರಾಕಿಂಗ್ ಸ್ಟಾರ್ 34ನೇ ಹುಟ್ಟು ಹಬ್ಬ ಆಚರಿಸುತ್ತಿದ್ದಾರೆ. ವೇಣು ಗೌಡ ಎಂಬಾತ ತನ್ನ ನೆಚ್ಚಿನ ನಟ ಯಶ್ ಹುಟ್ಟು ಹಬ್ಬದ ಆಚರಣೆಗೆ ಈಗಲೇ ಸಿದ್ಧನಾಗಿದ್ದಾನೆ.

ಇದಕ್ಕಾಗಿ ಬರೋಬ್ಬರಿ 5 ಸಾವಿರ ಕೆ.ಜಿಯ ಕೇಕ್ ಸಿದ್ಧಪಡಿಸಲಾಗುತ್ತಿದೆ. ಯಶ್ ಕೈಯಾರೆ ಈ ಕೇಕ್ ಕಟ್ ಮಾಡಿಸುವ ಪ್ಲಾನ್ ಹಾಕಿಕೊಂಡಿದ್ದಾರೆ. ಇದಕ್ಕೆಂದೇ ಪೋಸ್ಟರ್ವೊಂದನ್ನು ಸಿದ್ಧಪಡಿಸಲಾಗಿದೆ.

ನಂದಿ ಲಿಂಕ್ ಗ್ರೌಂಡ್, ಪಂಟರಪಾಳ್ಯ, ನಂದಿ ಹಿಲ್ಸ್ , ಬೆಂಗಳೂರು ಇಲ್ಲಿ ಹುಟ್ಟು ಹಬ್ಬ ಆಚರಣೆ ನಡೆಯಲಿದೆ ಎಂದು ಆ ಪೋಸ್ಟರ್ ನಲ್ಲಿ ತಿಳಿಸಲಾಗಿದೆ.

