ಕೇಂದ್ರದ ಬಾಗಿಲು ತಟ್ಟಿದ ಮಂಡ್ಯ ಗಣಿ ವಿವಾದ : ಬ್ಲಾಸ್ಟ್ ಚೆಕ್ ಮಾಡಲು ನಿರಾಣಿ ಸೂಚನೆ!

ಮಂಡ್ಯದ ಗಣಿ ಸಮರ ಸದ್ಯ ಕೇಂದ್ರದ ಬಾಗಿಲು ತಟ್ಟಿದೆ. ಕೆಎಸ್ಆರ್ ಆಣೆಕಟ್ಟಿನಲ್ಲಿ ಗಣಿಗಾರಿಕೆಯಿಂದಾಗಿ ಬಿರುಕು ಬಿಟ್ಟಿದೆ ಎಂದು ಸಂಸದೆ ಸುಮಲತಾ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ನಡುವಿನ ವಾಕ್ಸಮರ ಸದ್ಯ ಕೇಂದ್ರದ ಕದ ತಟ್ಟಿದೆ. ಈ ಬಗ್ಗೆ ಮಂಡ್ಯ ಸಂಸದೆ ರಾಜ್ಯದ ಗಣಿ ಸಚಿವ ಮುರುಗೇಶ್ ನಿರಾಣಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.

ಹೌದು…  ಮಂಡ್ಯ ಸಂಸದೆ  ಸುಮಲತಾ ಅಕ್ರಮ ಗಣಿಗಾರಿಕೆ ಬಗ್ಗೆ ಕೇಂದ್ರ ಗಣಿ ಸಚಿವ ಮುರುಗೇಶ್ ನಿರಾಣಿ ಗಮನಕ್ಕೆ ತಂದಿದ್ದಾರೆ. ಈ ಭೇಟಿಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಗಣಿ ಸಚಿವ ಮುರುಗೇಶ್ ನಿರಾಣಿ, ಎಲ್ಲಾ ಜನಪ್ರತಿನಿಧಿಗಳ ಮುಂದೆ ಬ್ಲಾಸ್ಟ್ ಚೆಕ್ ಮಾಡಲು ಸೂಚಿಸಿದ್ದಾರೆ.

ಕೇಂದ್ರ ಗಣಿ ಸಚಿವರ ಸೂಚನೆಯಂತೆ, ಮಂಡ್ಯದ ಎಲ್ಲಾ ಜನಪ್ರತಿನಿಧಿಗಳ ಮುಂದೆ ಬ್ಲಾಸ್ಟ್ ಮಾಡಿ ಡ್ಯಾಂಗೆ ಏನಾದ್ರು ತೊಂದರೆ ಆಗುತ್ತಾ ಅಂತ ಚೆಕ್ ಮಾಡಲಾಗುತ್ತದೆ. ಬ್ಲಾಸ್ಟ್ ವರದಿ ಬಂದ ಮೇಲೆ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ. ಅಲ್ಲಿಯವರೆಗೂ ಗಣಿಗಾರಿಕೆ ತಡೆಯೊಡ್ಡಲಾಗಿದೆ.

ಟ್ರಯಲ್ ಬ್ಲಾಸ್ಟಿಂಗ್ ಟೆಸ್ಟ್ ಶೀಘ್ರವೇ ನಡೆಯಲಿದೆ. ನುರಿತ ವಿಜ್ಞಾನಿಗಳು ಇದರ ಟೆಸ್ಟ್ ಮಾಡಲಿದ್ದು, ನಂತರವೇ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಅವರು ಸಂಸದೆ ಸುಮಲತಾ ಅಂಬರೀಶ್ ಭೇಟಿಯ ನಂತರ ತಿಳಿಸಿದರು.

ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಿದ್ದ ಕೆಆರ್​ಎಸ್ ಆಣೆಕಟ್ಟು ಬಿರುಕು ಮತ್ತು ಅಕ್ರಮ ಗಣಿಗಾರಿಕೆ ವಿವಾದ ತಾರ್ತಿಕ ಹಂತಕ್ಕೆ ಸಾಗುವ ಲಕ್ಷಣಗಳು ನಿಧಾನವಾಗಿ ಗೋಚರಿಸುತ್ತಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights