FACT CHECK | ಗೊರಿಲ್ಲಾವೊಂದು ಮಗುವನ್ನು ತಾಯಿಗೆ ನೀಡುತ್ತಿರುವ ವಿಡಿಯೋದ ಅಸಲೀಯತ್ತೇನು?
ಕೈ ಜಾರಿ ಒಳಗೆ ಬಿದ್ದ ಮಗುವನ್ನು ತಾಯಿಯ ಕೈ ಸೇರಿಸಿದ ಚಿಂಪು ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ಪ್ರಸಾರವಾಗುತ್ತಿದೆ. ‘ಬ್ರಾಂಕ್ಸ್ ಮೃಗಾಲಯದಲ್ಲಿ ಗೊರಿಲ್ಲಾ ಇದ್ದ ಪ್ರದೇಶದಲ್ಲಿ ಓಡಾಡುತ್ತಿದ್ದ ಮಗುವನ್ನು ಗೊರಿಲ್ಲಾವೊಂದು ಎತ್ತಿ ತಾಯಿಗೆ ಹಸ್ತಾಂತರಿಸಿತು. ಇಲ್ಲದಿದ್ದರೆ, ಅಲ್ಲಿನ ಪರಿಸ್ಥಿತಿ ತೀರಾ ಹದಗೆಡುತ್ತಿತ್ತು’ ಎಂದು ಪೋಸ್ಟ್ನಲ್ಲಿ ಹೇಳಲಾಗಿದೆ.
ಇದೇ ರೀತಿಯ ಪ್ರತಿಪಾದನೆಯನ್ನು ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹಂಚಿಕೊಂಡಿದ್ದು, ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ವೈರಲ್ ವಿಡಿಯೋದಲ್ಲಿ ಹಲವು ದೋಷಗಳು ಕಂಡುಬರುತ್ತಿವೆ. ಈ ರೀತಿ ವಿಡಿಯೋದಲ್ಲಿ ದೋಷಗಳು ಕಂಡುಬರುವುದುAI ರಚಿತ ವಿಡಿಯೋದಲ್ಲಿ ಎಂಬುದು ಹಲವು ಬಾರಿ ಸಾಬೀತಾಗಿದೆ.
ವಿಡಿಯೊದ ಕೀ ಫ್ರೇಮ್ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಎಐ ವಿಡಿಯೊಸ್ (@AI-Videos-Arg) ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಇದೇ ವಿಡಿಯೊ ಪ್ರಕಟವಾಗಿರುವುದು ಕಂಡು ಬಂತು. ಆ ಚಾನೆಲ್ನಲ್ಲಿನ ಇತರ ವಿಡಿಯೊಗಳನ್ನು ಪರಿಶೀಲನೆಗೆ ಒಳಪಡಿಸಿದಾಗ, ಅದರಲ್ಲಿನ ಬಹುತೇಕ ವಿಡಿಯೊಗಳು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದಿಂದ ಸೃಷ್ಟಿಸಿದ ವಿಡಿಯೊಗಳು ಎಂಬುದು ಕಂಡು ಬಂತು. ವಿಡಿಯೊವನ್ನು ಎಐ ಪತ್ತೆ ಹಚ್ಚುವ ಹೈವ್ ಮಾಡರೇಷನ್ ಟೂಲ್ನಲ್ಲಿ ಹಾಕಿದಾದ, ಅದು ಎಐ ವಿಡಿಯೊ ಎಂಬುದು ದೃಢಪಟ್ಟಿತು ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.

ಗೊರಿಲ್ಲಾ ಮಹಿಳೆಗೆ ಮಗುವನ್ನು ಹಸ್ತಾಂತರಿಸುವಾಗ ಗೊರಿಲ್ಲಾದ ಕೈ ಮತ್ತು ಮಹಿಳೆಯ ಕೈ ವಿಲೀನಗೊಳ್ಳುವುದನ್ನು ನಾವು ನೋಡಬಹುದು. ಕೃತಕ ಬುದ್ಧಿಮತ್ತೆ (AI) ಬಳಸಿ ರಚಿಸಲಾದ ದೃಶ್ಯಗಳಲ್ಲಿ ಇಂತಹ ದೋಷಗಳು ಸಹಜ (ಇಲ್ಲಿ, ಇಲ್ಲಿ). ಇದರ ಆಧಾರದ ಮೇಲೆ, ಈ ವೈರಲ್ ವೀಡಿಯೊವನ್ನು ಕೃತಕ ಬುದ್ಧಿಮತ್ತೆ (AI) ರಚಿಸಿರಬಹುದು ಎಂದು ತೋರುತ್ತದೆ.

ಮುಂದೆ, ಈ ವೈರಲ್ ವೀಡಿಯೊವನ್ನು AI ಬಳಸಿ ಮಾಡಲಾಗಿದೆಯೇ ಎಂದು ನಿರ್ಧರಿಸಲು? ಅಥವಾ ಇಲ್ಲವೇ?, ಈ ವೈರಲ್ ವೀಡಿಯೊವನ್ನು ಹೈವ್ನಂತಹ ವಿವಿಧ AI-ರಚಿತ ವಿಷಯ ಪತ್ತೆ ಸಾಧನಗಳನ್ನು ಬಳಸಿ ಪರಿಶೀಲಿಸಿದಾಗ, ಹೈವ್ ಈ ವಿಡಿಯೋವನ್ನು 99.4% AI-ರಚಿತವಾಗಿದೆ ಎಂದು ಫಲಿತಾಂಶವನ್ನು ನೀಡಿದೆ. ಇದರ ಆಧಾರದ ಮೇಲೆ, ಈ ವೈರಲ್ ವೀಡಿಯೊವನ್ನು AI ನಿಂದ ಮಾಡಲಾಗಿದೆ ಎಂದು ನಾವು ತೀರ್ಮಾನಿಸಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಈ ವೈರಲ್ ವಿಡಿಯೋದ ದೃಶ್ಯಗಳು ನೈಜ ಘಟನೆ ಆಧರಿಸಿಲ್ಲ. ಈ ವೈರಲ್ ವೀಡಿಯೊವನ್ನು ಕೃತಕ ಬುದ್ಧಿಮತ್ತೆ (AI) ಬಳಸಿ ರಚಿಸಲಾಗಿದೆ. AI- ರಚಿತವಾದ ವಿಷಯ ಪತ್ತೆ ಪರಿಕರಗಳು ಈ ವೈರಲ್ ವೀಡಿಯೊವನ್ನು AI ನಿಂದ ರಚಿಸಲಾಗಿದೆ ಎಂದು ದೃಢಪಡಿಸಿವೆ. ಆದ್ದರಿಂದ, ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಲಿಬರೇಶನ್ ಫ್ರಂಟ್ ಆಫ್ ಅಫ್ಘಾನಿಸ್ತಾನ ಸದಸ್ಯರು ಪಹಲ್ಗಾಮ್ ದಾಳಿಗೆ ಸೇಡು ತೀರಿಸಿಕೊಳ್ಳುತ್ತೇವೆ ಎಂದು ಹೇಳಿದ್ದು ನಿಜವೇ?

