ಅನಂತನಾಗ್ ಗೆ ಪದ್ಮಶ್ರೀ ನೀಡುವಂತೆ ಒತ್ತಾಯಿಸಿ ಸೆಲೆಬ್ರಿಟಿಗಳಿಂದ ಟ್ವೀಟರ್ ಅಭಿಯಾನ..!

ಅನಂತನಾಗ್ ಗೆ ಪದ್ಮಶ್ರೀ ನೀಡುವಂತೆ ಸೆಲೆಬ್ರಿಟಿಗಳಿಂದ ಟ್ವೀಟರ್ ಅಭಿಯಾನ ಶುರುವಾಗಿದೆ.

ಮುಂಬರುವ ಪದ್ಮ ಪುರಸ್ಕಾರಕ್ಕೆ ಅಭಿನಯ ಬ್ರಹ್ಮ ನಟ ಅನಂತನಾಗ್ ಅವರ ಹೆಸರು ನಾಮನಿರ್ದೇಶಿಸಲು ನಾವೆಲ್ಲರೂ ಒಂದಾಗೋಣ ಎಂದು ನಟ ರಿಷಭ್ ಶೆಟ್ಟಿ ಮನವಿ ಮಾಡಿದ್ದಾರೆ.

ಈ ವರ್ಷದ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪ್ರಶ್ಸ್ತಿಗಳಿಗೆ ಜನರೇ ತಮ್ಮ ನಡುವಿನ ಸಾಧಕರ ಹೆಸರನ್ನು ಶಿಫಾರಸು ಮಾಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಅಭಿಯಾನ ಶುರುವಾಗಿದ್ದು, ಕನ್ನಡ ಖ್ಯಾನ ನಟ ಅನಂತ್ ನಾಗ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂದು ಒತ್ತಾಯಿಸಲಾಗುತ್ತಿದೆ. ಈ ಅಭಿಯಾನದಲ್ಲಿ ಸೆಲೆಬ್ರಿಟಿಗಳಾದ ನಿರ್ದೇಶಕ ನಟರಾದ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಅವರೂ ಇದ್ದಾರೆ.

ಅನಂತ್ ನಾಗ್ ಅವರಿಗೆ ಕನ್ನಡ ಭಾಷೆಗೆ, ನಾಡಿಗೆ, ಚಿತ್ರರಂಗಕ್ಕೆ ನೀಡಿರುವ ಅಪಾರ ಕೊಡುಗೆಯನ್ನು ಆಧರಿಸಿ ಪದ್ಮಶ್ರೀ ನೀಡಬೇಕು ಎಂದು ಒತ್ತಾಯಿಸಿ ರಿಷಬ್ ಶೆಟ್ಟಿ ಪೋಸ್ಟ್ ಮಾಡಿದ್ದಾರೆ.

ಅನಂತ್​ನಾಗ್​ರಂತಹ ಶ್ರೇಷ್ಟ ನಟನಿಗೆ ಪದ್ಮ ಪ್ರಶಸ್ತಿ ನೀಡಿ ಎಂದು ನಾವು ಹೀಗೆ ಅಭಿಯಾನ ಮಾಡಬೇಕಾದಂತಹ ಪರಿಸ್ಥಿತಿ ಬಂದಿರುವುದು ಬಹಳ ಬೇಸರದ ಸಂಗತಿ. ಸರ್ಕಾರವೇ ಅವರನ್ನು ಪದ್ಮ ಪ್ರಶಸ್ತಿಗೆ ಶಿಫಾರಸು ಮಾಡಬೇಕಾಗಿತ್ತು ಎಂದು ಹಲವರು ಬೇಸರ ಕೂಡ ವ್ಯಕ್ತಪಡಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights