ವಂಚನೆ ಪ್ರಕರಣಕ್ಕೆ ಅಂತ್ಯ ಹಾಡಿದ ದರ್ಶನ್ : ದರ್ಶನ್ ಹೇಳಿದ್ದೇ ಫೈನಲ್ ಅಂದ್ರು ಉಮಾಪತಿ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಸೇರಿದ ಮೈಸೂರಿನ ಆಸ್ತಿ ಪತ್ರಗಳ ಫೋರ್ಜರಿ ಪ್ರಕರಣಕ್ಕೆ ದರ್ಶನ್ ಅಂತ್ಯ ಹಾಡಿದ್ದಾರೆ.

ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದರ್ಶನ್, ” ನಿರ್ಮಾಪಕ ಉಮಾಪತಿ ತಪ್ಪು ಮಾಡಿದ್ದಾರೆಂದು ನಾನು ಹೇಳುವುದಿಲ್ಲ. ಅವರು ನಿರ್ಮಾಪಕರು, ಯಾವುತ್ತಿದ್ದರೂ ನಿರ್ಮಾಪಕರೇ, ನನಗೆ ಯಾವತ್ತಿದ್ದರೂ ಅವರ ಮೇಲೆ ಪ್ರೀತಿ, ಗೌರವ ಇದ್ದೇ ಇರುತ್ತದೆ. ಈ ವಿಚಾರವನ್ನು ನಾನು ಇಲ್ಲಿಗೆ ಕೈ ಬಿಡುವಂತೆ” ಹೇಳಿದ್ದಾರೆ.

ಪ್ರಕರಣ ಹೇಗಾಯಿತು? ಯಾಕ ಆಯ್ತು? ಯಾರಿಂದ ಆಯ್ತೋ ನನಗೆ ಗೊತ್ತಿಲ್ಲ. ಒಟ್ಟಿನಲ್ಲಿ ನನ್ನ ಬಳಸಿಕೊಳ್ಳಬಾರದಿತ್ತು. ಬಳಿಸಿಕೊಂಡಿದ್ದಾರೆ ಪರವಾಗಿಲ್ಲ. ಈ ವಿಚಾರವನ್ನು ಇಲ್ಲಿಗೆ ಕೈಬಿಡೋಣ ಎಂದು ಪ್ರಕರಣಕ್ಕೆ ಮಂಗಳ ಹಾಡಿದ್ದಾರೆ. ಇವತ್ತಿಗೆ ಅವರೂ ಮಂಗಳ ಹಾಡಲಿ ಉಮಾಪತಿ ಅವರೊಂದಿಗೆ ನಾನು ಮಾತನಾಡುತ್ತೇನೆಂದು ದರ್ಶನ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

ಇತ್ತ ದರ್ಶನ್ ಮಾತಿಗೆ ಒಪ್ಪಿದ ಉಮಾಪತಿ ದರ್ಶನ್ ಹೇಳಿದ್ದೇ ಫೈನಲ್ ಎಂದಿದ್ದಾರೆ. ದರ್ಶನ್ ಹೇಳಿಕೆ ಬಳಿಕ ಮಾತನಾಡಿದ ಉಮಾಪತಿ ಈ ಪ್ರಕರಣ ಸುಖಾಂತ್ಯವಾಗಿದೆ. ಇಲ್ಲಿಗೇ ನಿಲ್ಲಿಸುತ್ತೇವೆ. ನಾನು ಮತ್ತು ದರ್ಶನ್ ಯಾವತ್ತಿದ್ದರೂ ಒಂದಾಗಿಯೇ ಇರುತ್ತೇವೆ ಎಂದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights