‘ನನ್ನ ಪತಿ ಮುಗ್ಧ’ ಕುಂದ್ರಾ ಬಂಧನದ ಬಗ್ಗೆ ಮೌನ ಮುರಿದ ಶಿಲ್ಪಾ ಶೆಟ್ಟಿ..!

ಕೊನೆಗೂ ಪತಿ ರಾಜ್ ಕುಂದ್ರಾ ಬಂಧನದ ಬಗ್ಗೆ ನಟಿ ಶಿಲ್ಪಾ ಶೆಟ್ಟಿ ಮೌನ ಮುರಿದು ಮಾತನಾಡಿದ್ದಾರೆ. ‘ನನ್ನ ಪತಿ ಮುಗ್ಧ. ಅವರು ಯಾವುದೇ ತಪ್ಪು ಮಾಡಿಲ್ಲಾ’ ಎಂದು ಶಿಲ್ಪಾ ಶೆಟ್ಟಿ ಹೇಳಿಕೊಂಡಿದ್ದಾರೆ.

ನೀಲಿ ಚಿತ್ರ ತಯಾರಿಕೆ ಹಾಗೂ ಅದರ ಬಿಡುಗಡೆಗೆ ಸಂಬಂಧಿಸಿದಂತೆ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದು, ನ್ಯಾಯಾಲಯದ ಆದೇಶದಂತೆ ಜುಲೈ 27ರವರೆಗೆ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಈ ಘಟನೆ ಬಗ್ಗೆ ಮೌನ ಮುರಿದ ನಟಿ ಮಾತನಾಡಿದ್ದಾರೆ.

‘ ನನ್ನ ಪತಿ ಮುಗ್ಧ ಮತ್ತು ನಿರಪರಾಧಿ. ಆತ ಯಾವುದೇ ತಪ್ಪು ಮಾಡಿಲ್ಲ. ನೀಲಿಚಿತ್ರಗಳ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ’ ಎಂದಿದ್ದಾರೆ. ನಿನ್ನೆ ಪ್ರಕರಣ ಸಂಬಂಧ ರಾಜ್​​ ಕುಂದ್ರಾ-ಶಿಲ್ಪಾ ಶೆಟ್ಟಿ ಮುಂಬೈ ನಿವಾಸಕ್ಕೆ ಭೇಟಿ ನೀಡಿದ್ದ ಕ್ರೈಂ ಬ್ರಾಂಚ್​ ಪೊಲೀಸರು 6 ಗಂಟೆಗಳ ಕಾಲ ಮನೆಯಲ್ಲಿ ಶೋಧ ಕಾರ್ಯ ನಡೆಸಿದರು. ಈ ವೇಳೆ ಶಿಲ್ಪಾರಿಂದ ಪೊಲೀಸರು ಹೇಳಿಕೆಯನ್ನು ಪಡೆದಿದ್ದಾರೆ.

‘ಹಾಟ್​​ಶಾಟ್​ ಆ್ಯಪ್​​​ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಪೋರ್ನ್​ ವಿಡಿಯೋ ನಿರ್ಮಾಣದಲ್ಲಿ ನನ್ನ ಪತಿ ಭಾಗಿಯಾಗಿಲ್ಲ. ಇನ್ನು ಕಾಮೋದ್ರೇಕ ಚಿತ್ರಗಳಿಗು ನೀಲಿಚಿತ್ರಗಳಿಗೂ ವ್ಯತ್ಯಾಸವಿದೆ’ ಎಂದೂ ಶಿಲ್ಪಾ ಈ ವೇಳೆ ಹೇಳಿದ್ದಾರೆ ಎನ್ನಲಾಗುತ್ತಿದೆ. ಪರೋಕ್ಷವಾಗಿ ಪತಿ ರಾಜ್​ಕುಂದ್ರಾರನ್ನು ಶಿಲ್ಪಾ ಸಮರ್ಥಿಸಿಕೊಂಡಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights