ಒಲಿಂಪಿಕ್ಸ್‌ನಲ್ಲಿ ಸೋಲು; ‘ಕ್ಷಮಿಸು ಭಾರತ’ ಎಂದು ಕ್ಷಮೆ ಕೇಳಿದ ಅತನು ದಾಸ್‌!

ಒಲಿಂಪಿಕ್ಸ್ ಕ್ರೀಡಾಕೂಟದ ಅರ್ಚರಿ ವಿಭಾಗದ ವೈಯಕ್ತಿಕ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಬಿಲ್ಲುಗಾರ ಅತನು ದಾಸ್‌ ಸೋಲು ಅನುಭವಿಸಿದ್ದು, ಭಾರತೀಯರಲ್ಲಿ ಕ್ಷಮೆಕೋರಿದ್ದಾರೆ.

ಶನಿವಾರ ನಡೆದ, ಪುರುಷರ ವೈಯಕ್ತಿಕ ವಿಭಾಗದ ಪ್ರೀ-ಕ್ವಾರ್ಟರ್‌ಫೈನಲ್‌ನಲ್ಲಿ ಅತನು ದಾಸ್, ಸ್ಥಳೀಯ ಫೇವರಿಟ್ ತಕಹರು ಫುರುಕಾವ ವಿರುದ್ಧ 6-4ರ ಅಂತರದಿಂದ ಸೋಲು ಅನುಭವಿಸಿದ್ದಾರೆ.

ತಮ್ಮ ಸೋಲಿನ ಬಗ್ಗೆ ಟ್ವೀಟ್ ಮಾಡಿರುವ ಅತನು, ‘ಈ ಬಾರಿ ಒಲಿಂಪಿಕ್ಸ್‌ನಲ್ಲಿ ಕೀರ್ತಿ ತರಲು ಸಾಧ್ಯವಾಗಲಿಲ್ಲ. ನನ್ನನ್ನು ಕ್ಷಮಿಸು ಭಾರತ’ ಎಂದು ಕೈ ಮುಗಿಯುವ ಇಮೋಜಿ ಹಾಕಿದ್ದಾರೆ.

ಭಾರತ ಕ್ರೀಡಾ ಪ್ರಾಧಿಕಾರ, ಭಾರತದ ಆರ್ಚರಿ ಸಂಸ್ಥೆ ಹಾಗೂ ಒಲಿಂಪಿಕ್ ಸಮಿತಿಯಿಂದ ದೊರಕಿರುವ ಬೆಂಬಲವು ಅಭೂತಪೂರ್ವವಾದುದು. ಇಲ್ಲಿಂದ ಮುಂದಕ್ಕೆ ಸಾಗೋಣ. ಇನ್ನೇನು ಹೇಳಲು ಬಯಸುವುದಿಲ್ಲ. ಜಯ್ ಹಿಂದ್ ಎಂದು ಅತನು ದಾಸ್ ಟ್ವೀಟ್‌ ಮಾಡಿದ್ದಾರೆ.

https://twitter.com/ArcherAtanu/status/1421357251726516227?s=20

ಈ ಸೋಲಿನಿಂದಾಗಿ ಅವರು ಸತತ ಎರಡನೇ ಬಾರಿಗೆ ಒಲಿಂಪಿಕ್ಸ್ ಪ್ರೀ-ಕ್ವಾರ್ಟರ್‌ಫೈನಲ್‌ನಲ್ಲಿ ಸೋಲು ಕಂಡಿದ್ದಾರೆ.

ಇನ್ನು, ಮಹಿಳಾ ಬಿಲ್ಲುಗಾರ್ತಿ, ಅತನು ದಾಸ್ ಅವರ ಪತ್ನಿ ದೀಪಿಕಾ ಕುಮಾರಿ ಕೂಡ ಸತತ ಮೂರನೇ ಬಾರಿಯೂ ಒಲಿಂಪಿಕ್ಸ್‌ನಲ್ಲಿ ಸೋಲು ಕಂಡಿದ್ದಾರೆ. ಮಹಿಳೆಯರ ವೈಯಕ್ತಿಕ ವಿಭಾಗದ ಎಂಟರ ಘಟ್ಟದಲ್ಲಿ ದೀಪಿಕಾ, ದಕ್ಷಿಣ ಕೊರಿಯಾದ ಎನ್ ಸ್ಯಾನ್ ವಿರುದ್ದ 0-6ರ ಅಂತರದಲ್ಲಿ ಸೋಲುಂಡಿದ್ದಾರೆ.

ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್‌: ಫೈನಲ್‌ಗೂ ಮುನ್ನ ಮುಗ್ಗರಿಸಿದ ಪಿವಿ ಸಿಂಧು; ಥೈಲಾನ್‌ ಸ್ಪರ್ಧಿ ವಿರುದ್ದ ಪರಾಭವ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights