ಬೆಂಗಳೂರು: ನವಜಾತ ಶಿಶುವನ್ನು ಆಸ್ಪತ್ರೆಯ ಕಿಟಕಿಯಿಂದ ಹೊರಗೆ ಎಸೆದ ಯುವತಿ!

ಯುವತಿಯೊಬ್ಬರು ತನ್ನ ನವಜಾತ ಶಿಶುವನ್ನು ಆಸ್ಪತ್ರೆಯ ಕಿಟಿಕಿಯಿಂದ ಎಸೆದಿದ್ದು, ಮಗು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಹೆಸರಘಟ್ಟದ ಖಾಸಗಿ ಕ್ಲಿನಿಕ್‌ನಲ್ಲಿ ನಡೆದಿದೆ. ಘಟನೆ ಸಂಬಂಧ 22 ವರ್ಷದ ಯುವತಿ ಹಾಗೂ ಆಕೆಯ ಪ್ರೇಮಿಯನ್ನು ಕೊಲೆ ಆರೋಪದ ಮೇಲೆ ಬಂಧಿಸಲಾಗಿದೆ.

ಕ್ಲಿನಿಕ್ ಸಿಬ್ಬಂದಿಯ ದೂರಿನ ಆಧಾರದ ಮೇಲೆ ಯುವತಿ ಮತ್ತು ಆಕೆಯ ಪ್ರೇಮಿ ಶಶಾಂಕ್ (27)ನನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶಶಾಂಕ್‌ ಗುಡೇಮಾರನಹಳ್ಳಿ ನಿವಾಸಿಯಾಗಿದ್ದು,  ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದಾನೆ. ಆತ ನಿರುದ್ಯೋಗಿ ಪದವೀಧರೆಯಾಗಿರುವ ಯುವತಿಯನ್ನು ಪ್ರೀತಿಸುತ್ತಿದ್ದನೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಆಕೆ ಮಂಗಳವಾರ ಖಾಸಗಿ ಕ್ಲಿನಿಕ್‌ನಲ್ಲಿ ಅಕಾಲಿಕ ಮಗುವಿಗೆ ಜನ್ಮ ನೀಡಿದ್ದಾರೆ. ಹೀಗಾಗಿ, ಇಬ್ಬರನ್ನೂ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ನಂತರ, ಆಕೆ ವಾಶ್‌ರೂಮ್‌ಗೆ ಹೋಗಿ ಕಿಟಿಕಿಯಿಂದ ಮಗುವನ್ನು ಹೊರಗೆ ಎಸೆದಿದ್ದಾಳೆ. ದಾರಿಹೋಕರು ಇದನ್ನು ಗಮನಿಸಿ ಪರೀಕ್ಷಿಸಿದ್ದಾರೆ. ಆ ವೇಳೆಗೆ ಮಗು ಸಾವನ್ನಪ್ಪಿದೆ. ಆಕೆ ಆಸ್ಪತ್ರೆಯ ಆವರಣದಿಂದ ಓಡಿ ಹೋಗಿದ್ದನ್ನೂ ಸ್ಥಳೀಯರು ಗಮನಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮಗುವಿನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಯುವತಿಗೆ ಹೆರಿಗೆಯ ನಂತರದ ಕೆಲವು ಸಮಸ್ಯೆಗಳು ಕಾಣಿಸಿಕೊಂಡಿದ್ದು, ಆಕೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಆಕೆಯನ್ನು ಕ್ಲಿನಿಕ್‌ನಲ್ಲಿ ದಾಖಲಿಸಿದ್ದ ಶಶಾಂಕ್, ವಿಶ್ರಾಂತಿ ಪಡೆಯಲು ತನ್ನ ಸ್ನೇಹಿತನ ಮನೆಗೆ ಹೋಗಿದ್ದ. ಆತ ಕ್ಲಿನಿಕ್‌ಗೆ ಹಿಂದಿರುಗಿದಾಗ, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆತ ಮತ್ತು ಯುವತಿ ಸಂಬಂಧ ಹೊಂದಿದ್ದರು. ಅವರು ಅವಿವಾಹಿತರಾಗಿದ್ದರಿಂದ ಆಕೆಯ ಪೋಷಕರು ತಮ್ಮನ್ನು ಶಿಕ್ಷಿಸಬಹುದು ಎಂದು ಹೆದರಿ ಮಗುವನ್ನು ಕೊಲ್ಲಲು ನಿರ್ಧರಿಸಿದ್ದರು ಎಂದು ಆತ ಒಪ್ಪಿಕೊಂಡಿದ್ದಾನೆ.

ಇದನ್ನೂ ಓದಿ: ಅಣ್ಣಾಮಲೈ ಹಾದಿಯಲ್ಲಿ ಮತ್ತೊಬ್ಬ IPS; ಬಿಜೆಪಿ ನಾಯಕರನ್ನು ಭೇಟಿಯಾದ ರವಿ ಚನ್ನಣ್ಣನವರ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights