ಛತ್ತೀಸ್‌ಘಡದ ಬಿಜೆಪಿ ಶಾಸಕ ಬ್ರಿಜ್‌ಮೋಹನ್ ಅಗರವಾಲ್ ಅವರ ಪಿಎಸ್‌ಒ ಗುಂಡು ಹಾರಿಸಿಕೊಂಡು ಆತ್ಮಹತ್ಯೆ!

ಛತ್ತೀಸ್‌ಘಡದ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಬ್ರಿಜ್‌ಮೋಹನ್ ಅಗರವಾಲ್ ಅವರ ವೈಯಕ್ತಿಕ ಭದ್ರತಾ ಅಧಿಕಾರಿ (PSO)ಯೊಬ್ಬರು ಗುರುವಾರ ತಮ್ಮ ಸೇವಾ ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾನ್‌ಸ್ಟೇಬಲ್ ವಿಶಾಂಭರ್ ರಾಥೋಡ್ (36) ಬೆಳಿಗ್ಗೆ ತನ್ನ ಸರ್ವಿಸ್ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಿವಿಲ್ ಲೈನ್ಸ್ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಆರ್‌ಕೆ ಮಿಶ್ರಾ ತಿಳಿಸಿದ್ದಾರೆ.

ಮಧ್ಯಪ್ರದೇಶದವರಾದ ರಾಥೋಡ್‌ ಅವರನ್ನು ಕಳೆದ ಎಂಟು ವರ್ಷಗಳಿಂದ ಅಗರವಾಲ್‌ ಅವರ ಪಿಎಸ್‌ಒ ಆಗಿ ನಿಯೋಜಿಸಲಾಗಿತ್ತು. ಅವರು ನಗರದ ಶಾಂತಿ ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್ ತಂಡ, ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಮತ್ತು ಬ್ಯಾಲಿಸ್ಟಿಕ್ ತಜ್ಞರು ತನಿಖೆಗಾಗಿ ಸ್ಥಳಕ್ಕೆ ಭೇಟಿ ನೀಡಿದ್ದರೆ. ಅವರಿಗೆ ರಾಥೋಡ್‌ ಅವರ ಮನೆಯಲ್ಲಿ ಆತ್ಮಹತ್ಯೆ ಪತ್ರ ದೊರೆತಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights