ವಿಶ್ವದ ಮೊದಲ ಚಿನ್ನದ ವಡಾಪಾವ್ : ಇದರ ಬೆಲೆ ಎಷ್ಟು ಗೊತ್ತಾ..?

ವಡಾ ಪಾವ್ ಮಹಾರಾಷ್ಟ್ರದಲ್ಲಿ ಹೆಚ್ಚಾಗಿ ಲಭ್ಯವಿರುವ ಒಂದು ಫೇಮಸ್ ತಿಂಡಿ. ಇದನ್ನು ಚಟ್ನಿ ಮತ್ತು ಮಸಾಲೆಗಳೊಂದಿಗೆ ಎರಡು ಪಾವ್ ತುಂಡುಗಳ ನಡುವೆ ತುಂಬಿದ ಆಲೂಗೆಡ್ಡೆ ವಡಾದಿಂದ ಮಾಡಲಾಗುತ್ತದೆ. ಆದರೆ ದುಬೈ ರೆಸ್ಟೋರೆಂಟ್ ಒಂದು ಚಿನ್ನದ ವಡಾಪಾವ್ ಖಾದ್ಯವನ್ನು ಬಿಡುಗಡೆ ಮಾಡಿದೆ. ಕೇಳಲು ಆಶ್ಚರ್ಯ ಅನ್ಸಿದ್ರು ನಿಜ.

ಸೆಪ್ಟೆಂಬರ್ 1 ರಂದು ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ 22 ಕ್ಯಾರೆಟ್ ಗೋಲ್ಡ್ ವಡಾಪಾವ್ ಎಂಬ ಹೊಸ ಖಾದ್ಯವನ್ನು ಘೋಷಿಸಿದ ದುಬೈನ ಓ’ಪಾವೊ ರೆಸ್ಟೋರೆಂಟ್ ಅಂತರ್ಜಾಲದಲ್ಲಿ ಟ್ರೆಂಡ್ ಆಗಿದೆ. ಮೆನುನಲ್ಲಿ ಒ’ಪಾವೊ ರೆಸ್ಟೋರೆಂಟ್ ಭಕ್ಷ್ಯದ ಒಂದು ಚಿಕ್ಕ ವಿಡಿಯೋವನ್ನು ಹಂಚಿಕೊಂಡಿದೆ. ಜೊತೆಗೆ “ನಾವು ವಿಶ್ವದ ಮೊದಲ 22 ಕಾರಟ್ ಒ’ಗೋಲ್ಡ್ ವಡಾ ಪಾವೊವನ್ನು ಪ್ರಾರಂಭಿಸಿದ್ದೇವೆ ಎಂದು ಬರೆದುಕೊಂಡಿದೆ.

ವಿಡಿಯೋದಲ್ಲಿ ಗೋಲ್ಡ್ ವಡಾ ಪಾವ್ ತಯಾರಿಸಲು ವಡಾವನ್ನು ಟ್ರಫಲ್ ಬೆಣ್ಣೆ ಮತ್ತು ಚೀಸ್ ನಿಂದ ತುಂಬಿಸಲಾಗುತ್ತದೆ. ಇದನ್ನು ತಯಾರಿಸಿದ ನಂತರ ವಡಾವನ್ನು ದ್ರವರೂಪದಲ್ಲಿ ಅದ್ದಿದ ಕೂಡಲೆ ಅದು ಚಿನ್ನದಂತೆ ಕಾಣುತ್ತದೆ. ನಂತರ ಬಿಸಿ ಎಣ್ಣೆಯ ಬಾಣಲೆಯಲ್ಲಿ ಹುರಿಯಲಾಗುತ್ತದೆ. ವಡಾ ಪಾವ್ ಅನ್ನು ಅಲಂಕಾರಿಕ ಮರದ ಪೆಟ್ಟಿಗೆಯಲ್ಲಿ ಫ್ರೆಂಚ್ ಫ್ರೈಗಳು ಮತ್ತು ಪುದೀನ ನಿಂಬೆ ಪಾನಕದೊಂದಿಗೆ ಬಡಿಸಲಾಗಿದೆ.

“ವಿಶ್ವದ ಮೊದಲ 22 ಕ್ಯಾರಟ್ ಒ’ಗೋಲ್ಡ್ ವಡಾ ಪಾವೊವನ್ನು ಪ್ರಾರಂಭಿಸಲು ನಾವು ಸಂತೋಷಪಡುತ್ತೇವೆ” ಎಂದು ಒ’ಪಾವೊ ತಮ್ಮ ಪೋಸ್ಟ್‌ನ ಶೀರ್ಷಿಕೆಯಲ್ಲಿ ಹೇಳಿದರು.

ವೀಡಿಯೊವನ್ನು ಇಲ್ಲಿ ನೋಡಿ:

ಗೋಲ್ಡ್ ವಡಾ ಪಾವ್ ಬೆಲೆ ಅಂದಾಜು ರೂ .1968.

ಸಾಮಾಜಿಕ ಮಾಧ್ಯಮ ಬಳಕೆದಾರರು ಗೋಲ್ಡ್ ವಾಡಾ ಪಾವ್‌ನ ವೀಡಿಯೋವನ್ನು ನೋಡಿದ ನಂತರ ಸಂಪೂರ್ಣವಾಗಿ ಉತ್ಸುಕರಾಗಿದ್ದು ಪ್ರತಿಕ್ರಿಯೆಗಳನ್ನು ಕಾಮೆಂಟ್ ವಿಭಾಗದಲ್ಲಿ ಪೋಸ್ಟ್ ಮಾಡಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights