ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರವನ್ನು ಮುನ್ನಡೆಸಲಿರುವ ಹಿಬತುಲ್ಲಾ ಅಖುಂದ್ಜಡಾ!

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಸ್ಥಾಪಿಸಲು ಸಕಲ ಸಿದ್ಧತೆ ನಡೆಯುತ್ತಿದ್ದು ಮುಲ್ಲಾ ಹಿಬತುಲ್ಲಾ ಅಖುಂದ್ಜಡಾ ಸರ್ವಾಧಿಕಾರ ನಡೆಸಲಿದ್ದಾರೆಂದು ತಾಲಿಬಾನ್ ಘೋಷಿಸಿದೆ.

ತಾಲಿಬಾನ್ ಕಾಬೂಲ್ ಮೇಲೆ ನಿಯಂತ್ರಣ ಸಾಧಿಸಿ ಎರಡು ವಾರಗಳು ಕಳೆದಿವೆ. ಅಫ್ಘಾನಿಸ್ತಾನವನ್ನು ನಡೆಸಲು ತಾಲಿಬಾನ್‌ಗಳು ತಮ್ಮ ಸರ್ಕಾರದ ರಚನೆಯನ್ನು ಅಂತಿಮಗೊಳಿಸಿದ್ದಾರೆ. ಮುಲ್ಲಾ ಹಿಬತುಲ್ಲಾ ಅಖುಂದ್ಜಡಾ ಅವರು ತಾಲಿಬಾನ್ ಸರ್ಕಾರದಲ್ಲಿ ಮುಖ್ಯಸ್ಥರಾಗಿದ್ದರೆ, ಅವರ ಅಡಿಯಲ್ಲಿ ಒಬ್ಬ ಪ್ರಧಾನ ಮಂತ್ರಿ ಅಥವಾ ರಾಷ್ಟ್ರಪತಿ ಇರುತ್ತಾರೆ. ಇವರು ದೇಶವನ್ನು ನಡೆಸುತ್ತಾರೆಂದು ತಾಲಿಬಾನ್ ತಿಳಿಸಿದೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರದ ಶೀಘ್ರದಲ್ಲೇ ರಚನೆಯಾಗುವ ನಿರೀಕ್ಷೆಯಿದೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ. ಇದಲ್ಲದೆ ತಾಲಿಬಾನ್ ಈಗಾಗಲೇ ಪ್ರಾಂತ್ಯಗಳು ಮತ್ತು ಜಿಲ್ಲೆಗಳಿಗೆ ರಾಜ್ಯಪಾಲರು, ಪೊಲೀಸ್ ಮುಖ್ಯಸ್ಥರು ಮತ್ತು ಪೊಲೀಸ್ ಕಮಾಂಡರ್‌ಗಳನ್ನು ನೇಮಿಸಿದೆ.

ತಾಲಿಬಾನ್ ಕಾಬೂಲ್ ಮೇಲೆ ನಿಯಂತ್ರಣ ಸಾಧಿಸಿದಾಗಿನಿಂದಲೂ ಸಾವಿರಾರು ಆಫ್ಘನ್ನರು ಕಾಬೂಲ್ ವಿಮಾನ ನಿಲ್ದಾಣದ ಮೂಲಕ ದೇಶದಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಲೇ ಇದ್ದಾರೆ. ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ದೇಶದಿಂದ ಪಲಾಯನ ಮಾಡಿ ಆಫ್ಘಾನ್ ಜನರನ್ನು ದೇಶ ತೊರೆಯಲು ಸಾಧ್ಯವಾಗದೆ ಹತಾಶರಾಗಿದ್ದಾರೆ.

ಆಗಸ್ಟ್ 30 ಅಮೆರಿಕನ್ ಸೈನ್ಯದ ನಿರ್ಗಮನದಿಂದ, ಕಾಬೂಲ್ ವಿಮಾನ ನಿಲ್ದಾಣವು ಈಗ ತಾಲಿಬಾನ್ ನಿಯಂತ್ರಣದಲ್ಲಿದೆ. ಇದನ್ನು ತಾಲಿಬಾನಿನ ಬದರಿ 313 ಬೆಟಾಲಿಯನ್ ನಿರ್ವಹಿಸುತ್ತಿದೆ.

ತಾಲಿಬಾನ್ ಆಳ್ವಿಕೆಯಲ್ಲಿ ಅಫ್ಘಾನಿಸ್ತಾನದ ಹಣೆಬರಹ ಊಹಿಸಿಕೊಳ್ಳಲು ಅಸಾಧ್ಯವಾಗಿದೆ. ಬ್ಯಾಂಕುಗಳನ್ನು ಮುಚ್ಚುವ ಮೂಲಕ ಈಗಾಗಲೇ ಜರ್ಜರಿತ ಆರ್ಥಿಕತೆ ಕುಸಿದಿದೆ. ತಾಲಿಬಾನ್ ಈಗ ಬ್ಯಾಂಕುಗಳನ್ನು ಮತ್ತೆ ತೆರೆಯುವಂತೆ ಆದೇಶಿಸಿದೆ. ಆದರೆ ಯಾವುದೇ ಉದ್ಯೋಗಗಳು ಇಲ್ಲದೆ, ಕೈಯಲ್ಲಿ ಹಣ ಇಲ್ಲದೆ ಮತ್ತು ದಿನನಿತ್ಯದ ಅಗತ್ಯ ವಸ್ತುಗಳ ಸಿಗದೆ ಆಫ್ಘನ್ನರು ತಮ್ಮ ಜೀವನವನ್ನು ಪೂರೈಸಲು ಹೆಣಗಾಡುತ್ತಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights