ಭಾರತ ಮತ್ತು ಅಮೆರಿಕಾ 2+2 ಸಂವಾದ ನವೆಂಬರ್ ನಲ್ಲಿ ನಡೆಯಲಿದೆ: ವಿದೇಶಾಂಗ ಕಾರ್ಯದರ್ಶಿ

ಭಾರತ ಮತ್ತು ಅಮೆರಿಕಾ ನಡುವಿನ 2+2 ಸಂವಾದವನ್ನು ಈ ವರ್ಷದ ನವೆಂಬರ್‌ನಲ್ಲಿ ನಡೆಸಲಾಗುವುದು ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ ಶುಕ್ರವಾರ ಹೇಳಿದ್ದಾರೆ.

ಶೃಂಗ್ಲಾ ಅವರು ಮೂರು ದಿನಗಳ ಭೇಟಿಗಾಗಿ ವಾಷಿಂಗ್ಟನ್ ಡಿಸಿಯಲ್ಲಿದ್ದಾರೆ. ಯುಎಸ್‌ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ಸೇರಿದಂತೆ ಅಧ್ಯಕ್ಷ ಜೋ ಬಿಡೆನ್ ಅವರ ಆಡಳಿತದ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.

ಇಂದು ಭಾರತೀಯ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾವು 2+2  ಸಂವಾದವನ್ನು ನವೆಂಬರ್‌ನಲ್ಲಿ ನಡೆಸಲು ನಿರ್ಧರಿಸಿದ್ದೇವೆ. ನಿಖರವಾದ ದಿನಾಂಕಗಳನ್ನು ಇನ್ನೂ ನಿಗದಿ ಮಾಡಿಲ್ಲ” ಎಂದು ಅವರು ತಿಳಿಸಿದ್ದಾರೆ.

ಕಳೆದ 2+2 ಸಭೆಯು ನವದೆಹಲಿಯಲ್ಲಿ ನಡೆದಿದೆ ಮತ್ತು ಮುಂದಿನ ಸಭೆಯನ್ನು ಯುಎಸ್ ಇಲ್ಲಿ ಆಯೋಜಿಸಲಿದೆ ಎಂದು ಅವರು ಹೇಳಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕನ್ ಮತ್ತು ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರು ಬಿಡೆನ್ ಆಡಳಿತದ ಮೊದಲ ಭಾರತ-ಯುಎಸ್ 2+2 ಸಭೆಗೆ ಭಾಗವಹಿಸಲಿದ್ದಾರೆ.

ಹವಾಮಾನ ಬದಲಾವಣೆಯ ಕುರಿತು ಯುಎಸ್ ವಿಶೇಷ ಪ್ರತಿನಿಧಿ ಜಾನ್ ಕೆರ್ರಿ ಕೂಡ ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಶುಕ್ರವಾರ, ಯುಎಸ್ ಇಂಡಿಯಾ ಸ್ಟ್ರಾಟೆಜಿಕ್ ಅಂಡ್ ಪಾಟ್ನರ್‌ಶಿಪ್ ಫೋರಮ್ ಮತ್ತು ಯುಎಸ್ ಇಂಡಿಯಾ ಬಿಸಿನೆಸ್ ಕೌನ್ಸಿಲ್‌ಗಳು ಪ್ರತ್ಯೇಕವಾಗಿ ಆಯೋಜಿಸಿದ್ದ ಉದ್ಯಮ ಪ್ರತಿನಿಧಿಗಳೊಂದಿಗೆ ಸಭೆಗಳಲ್ಲಿಯೂ ಹರ್ಷವರ್ಧನ್ ಶೃಂಗ್ಲಾ ಭಾಗವಹಿಸಿದ್ದರು.

ಭಾರತದಲ್ಲಿನ ಕೋವಿಡ್ -19 ಪರಿಸ್ಥಿತಿ, ಲಸಿಕೆ ಸಮಸ್ಯೆ, ಭಾರತದಲ್ಲಿ ಆರ್ಥಿಕ ಚೇತರಿಕೆ, ಆರ್ಥಿಕ ಅವಕಾಶಗಳು ಮತ್ತು ಹೂಡಿಕೆ ಪರಿಸ್ಥಿತಿಗಳ ನಿರ್ವಹಣೆ ಬಗ್ಗೆ ಅಮೆರಿಕಾ ತುಂಬಾ ಆಸಕ್ತಿ ಹೊಂದಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಪಂಚರಾಜ್ಯ ಚುನಾವಣೆ 2022: ಕಾಂಗ್ರೆಸ್‌ಗೆ ಬಿಗ್‌ಶಾಕ್‌; ನಾಲ್ಕು ರಾಜ್ಯಗಳಲ್ಲಿ ಬಿಜೆಪಿಗೇ ಅಧಿಕಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights